ಪಾಕಿಸ್ತಾನ ಕೈಗೆ ಬಳೆ ತೊಟ್ಟಿಲ್ಲ, ಅಣು ಬಾಂಬ್ ಇಟ್ಕೊಂಡಿದೆ: ರಾಜನಾಥ್ ಸಿಂಗ್​ಗೆ ಟಾಂಟ್ ಕೊಟ್ಟ ಫಾರೂಕ್ ಅಬ್ದುಲ್ಲಾ

Farooq Abdulla taunts Rajnath Singh: ಪಾಕ್ ಆಕ್ರಮಿತ ಕಾಶ್ಮೀರ ಭಾಗ ಭಾರತದ ಪಾಲಾಗುತ್ತದೆ ಎಂದು ರಾಜನಾಥ್ ಸಿಂಗ್ ನೀಡಿದ ಹೇಳಿಕೆಗೆ ಫಾರೂಕ್ ಅಬ್ದುಲ್ಲಾ ಟಾಂಟ್ ನೀಡಿದ್ದಾರೆ. ಪಾಕಿಸ್ತಾನ ಕೈಗೆ ಬಳೆ ತೊಟ್ಟು ಕೂತಿಲ್ಲ. ಅಟಂ ಬಾಂಬ್​ಗಳು ಆ ದೇಶದಲ್ಲಿವೆ ಎಂದು ರಾಜನಾಥ್​ಗೆ ಎಚ್ಚರಿಕೆ ನೀಡಿದ್ದಾರೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್. ಪಿಟಿಐಗೆ ನೀಡಿದ ಸಂದರ್ಶನದಲ್ಲಿ ರಾಜನಾಥ್ ಸಿಂಗ್ ಮಾತನಾಡುತ್ತಾ, ಪಿಒಕೆಯನ್ನು ಭಾರತ ಬಲಪೂರ್ವಕವಾಗಿ ವಶಪಡಿಸಿಕೊಳ್ಳುವ ಅಗತ್ಯ ಇಲ್ಲ. ಅಲ್ಲಿನ ಜನರೇ ಭಾರತದ ಜೊತೆ ವಿಲೀನ ಮಾಡುತ್ತಾರೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ಕೈಗೆ ಬಳೆ ತೊಟ್ಟಿಲ್ಲ, ಅಣು ಬಾಂಬ್ ಇಟ್ಕೊಂಡಿದೆ: ರಾಜನಾಥ್ ಸಿಂಗ್​ಗೆ ಟಾಂಟ್ ಕೊಟ್ಟ ಫಾರೂಕ್ ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ
Follow us
|

Updated on: May 05, 2024 | 6:28 PM

ನವದೆಹಲಿ, ಮೇ 5: ಪಾಕ್ ಆಕ್ರಮಿತ ಕಾಶ್ಮೀರ ಭಾಗ (PoK- Pak Occupied Kashmir) ಭಾರತಕ್ಕೆ ಒಂದಲ್ಲ ಒಂದು ದಿನ ಸೇರುತ್ತೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ನೀಡಿದ ಹೇಳಿಕೆಗೆ ಮಾಜಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah) ಟಾಂಟ್ ಕೊಟ್ಟಿದ್ದಾರೆ. ಪಿಒಕೆಯನ್ನು ಭಾರತ ಆಕ್ರಮಿಸುವಾಗ ಪಾಕಿಸ್ತಾನ ಕೈಗೆ ಬಳೆ ತೊಟ್ಟಿರುವುದಿಲ್ಲ. ಅವರ ಬಳಿ ಅಣು ಬಾಂಬ್​ಗಳಿವೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥರೂ ಆದ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಅಷ್ಟೇ ಅಲ್ಲ, ರಾಜನಾಥ್ ಸಿಂಗ್​ಗೆ ತಾಕತ್ತಿದ್ದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

‘ರಕ್ಷಣಾ ಸಚಿವರು ಹೀಗೆ ಹೇಳುತ್ತಿದ್ದಾರೆಂದರೆ, ಮಾಡಿ ತೋರಿಸಲಿ. ನಾವ್ಯಾಕೆ ಅವರನ್ನು ತಡೆಯೋಣ. ಆದರೆ, ಪಾಕಿಸ್ತಾನೀಯರು ಕೈಗೆ ಬಳೆ ತೊಟ್ಟಿಕೊಂಡು ಇರುವುದಿಲ್ಲ. ಆ ದೇಶದಲ್ಲಿ ಅಟಂ ಬಾಂಬ್​ಗಳಿವೆ ಎಂಬುದು ಗೊತ್ತಿರಲಿ. ದುರದೃಷ್ಟ ಎಂದರೆ ಆ ಅಣು ಬಾಂಬ್ ನಮ್ಮ ಮೇಲೆಯೇ ಬೀಳುವುದು,’ ಎಂದು ಮಾಜಿ ಕಾಶ್ಮೀರ ಸಿಎಂ ಆದ ಅವರು ಹೇಳಿದ್ದಾರೆ.

ಇದನ್ನೂ ಓದಿ: ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ, ಮೂವರು ಭಾರತೀಯರ ಬಂಧನ: ಜೈಶಂಕರ್​ ಪ್ರತಿಕ್ರಿಯೆ

ರಾಜನಾಥ್ ಸಿಂಗ್ ಹೇಳಿದ್ದೇನು?

ಪಾಕ್ ಆಕ್ರಮಿತ ಕಾಶ್ಮೀರದ ಭಾಗದ ಮೇಲಿನ ಹಕ್ಕನ್ನು ಭಾರತ ಎಂದಿಗೂ ಬಿಡುವುದಿಲ್ಲ. ಆದರೆ, ಆ ಭಾಗವನ್ನು ಭಾರತ ಬಲವಂತವಾಗಿ ವಶಪಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಯಾಕೆಂದರೆ ಭಾರತದ ಭಾಗದಲ್ಲಿರುವ ಜಮ್ಮು ಕಾಶ್ಮೀರದಲ್ಲಿ ಆಗುತ್ತಿರುವ ಅಭಿವೃದ್ಧಿ ಕಂಡು ಜನರೇ ಪಿಒಕೆಯನ್ನು ಪಾಕಿಸ್ತಾನದಿಂದ ಮುಕ್ತಗೊಳೀಸುತ್ತಾರೆ ಎಂದು ಪಿಟಿಐ ಸಂದರ್ಶನವೊಂದರಲ್ಲಿ ರಾಜನಾಥ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: 26/11 Mumbai Terror Attack: ಹೇಮಂತ್ ಕರ್ಕರೆಯನ್ನು ಕೊಂದಿದ್ದು ಪೊಲೀಸರು, ಕಸಬ್​ ನಿರಪರಾಧಿ ಎಂದ ಕಾಂಗ್ರೆಸ್​ ನಾಯಕ

‘ಪಿಒಕೆ ಅಂದಿಗೂ, ಎಂದಿಗೂ ಭಾರತದ ಭಾಗವಾಗಿಯೇ ಇದೆ. ಪಿಒಕೆ ಪಡೆಯಲು ನಾವು ಬಲಪ್ರಯೋಗ ಮಾಡುವುದಿಲ್ಲ. ಪಿಒಕೆ ಭಾರತದ ಜೊತೆ ವಿಲೀನ ಆಗಬೇಕೆಂದು ಜನರೇ ಹೇಳುತ್ತಿದ್ದಾರೆ. ಅಂತಹ ಬೇಡಿಕೆಗಳು ಈಗ ಬರತೊಡಗಿವೆ,’ ಎಂದು ಕೇಂದ್ರ ರಕ್ಷಣಾ ಸಚಿವರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ದರ್ಶನ್​ ಮಾಡಿದ್ದೇ ಸರಿ ಎನ್ನುವ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸುಮಲತಾ
ದರ್ಶನ್​ ಮಾಡಿದ್ದೇ ಸರಿ ಎನ್ನುವ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸುಮಲತಾ
ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ