ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಮಾಹಿತಿ ಸೋರಿಕೆ ಬಗ್ಗೆ ಅನುಮಾನ ಅಷ್ಟೇ -ಟಿಕ್‌ ಟಾಕ್‌ ಸಮರ್ಥನೆ

| Updated By: ಸಾಧು ಶ್ರೀನಾಥ್​

Updated on: Aug 24, 2020 | 1:39 PM

ಚೀನಾ ವಿರುದ್ಧ ಈಗ ವಿಶ್ವದ ವಿವಿಧ ದೇಶಗಳು ತಿರುಗಿ ಬೀಳುತ್ತಿವೆ. ಭಾರತ ಚೀನಾದ ಆಪ್‌ ಟಿಕ್‌ ಟಾಕ್‌ ಸೇರಿದಂತೆ 100ಕ್ಕೂ ಹೆಚ್ಚು ಆಪ್‌ಗಳನ್ನು ಬ್ಯಾನ್‌ ಮಾಡಿದ ನಂತರ ವಿಶ್ವದ ಇತರ ದೇಶಗಳು ಇಂಥದ್ದೇ ಚಿಂತನೆ ನಡೆಸಿವೆ. ಈ ಸಂಬಂಧ ಅಮೆರಿಕ ಈಗಗಾಲೇ ತನ್ನ ಇಂಗಿತ ವ್ಯಕ್ತಪಡಿಸಿದ್ದು, ಬ್ರಿಟನ್‌ ಸಹ ಇಂಥದ್ದೇ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ. ಚೀನಾಗೆ ಮಾಹಿತಿ ಕೊಟ್ಟಿಲ್ಲ; ಸಬ್ ಠೀಕ್‌ ಠಾಕ್ ಹೈ! ಹೀಗಾಗಿ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಟಿಕ್‌ ಟಾಕ್‌ ಆಪ್‌ನ […]

ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಮಾಹಿತಿ ಸೋರಿಕೆ ಬಗ್ಗೆ ಅನುಮಾನ ಅಷ್ಟೇ -ಟಿಕ್‌ ಟಾಕ್‌ ಸಮರ್ಥನೆ
Follow us on

ಚೀನಾ ವಿರುದ್ಧ ಈಗ ವಿಶ್ವದ ವಿವಿಧ ದೇಶಗಳು ತಿರುಗಿ ಬೀಳುತ್ತಿವೆ. ಭಾರತ ಚೀನಾದ ಆಪ್‌ ಟಿಕ್‌ ಟಾಕ್‌ ಸೇರಿದಂತೆ 100ಕ್ಕೂ ಹೆಚ್ಚು ಆಪ್‌ಗಳನ್ನು ಬ್ಯಾನ್‌ ಮಾಡಿದ ನಂತರ ವಿಶ್ವದ ಇತರ ದೇಶಗಳು ಇಂಥದ್ದೇ ಚಿಂತನೆ ನಡೆಸಿವೆ. ಈ ಸಂಬಂಧ ಅಮೆರಿಕ ಈಗಗಾಲೇ ತನ್ನ ಇಂಗಿತ ವ್ಯಕ್ತಪಡಿಸಿದ್ದು, ಬ್ರಿಟನ್‌ ಸಹ ಇಂಥದ್ದೇ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ.

ಚೀನಾಗೆ ಮಾಹಿತಿ ಕೊಟ್ಟಿಲ್ಲ; ಸಬ್ ಠೀಕ್‌ ಠಾಕ್ ಹೈ!
ಹೀಗಾಗಿ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಟಿಕ್‌ ಟಾಕ್‌ ಆಪ್‌ನ ಬ್ರಿಟನ್‌ ಮತ್ತು ಐರೋಪ್ಯ ಒಕ್ಕೂಟದ ಮುಖ್ಯಸ್ಥ ಚರ್ಡ್‌ ವಾಟರ್‌ವರ್ತ್‌, ನನಗೆ ಗೊತ್ತಿರುವಂತೆ ಟಿಕ್‌ ಟಾಕ್‌ ಕಂಪನಿ ತುಂಬಾ ವೃತ್ತಿನಿರತ ಕಂಪನಿ. ಬ್ರಿಟನ್‌ ಸೇರಿದಂತೆ ಯಾವುದೇ ಐರೋಪ್ಯ ದೇಶಗಳ ಟಿಕ್‌ ಟಾಕ್‌ ಬಳಕೆದಾರರ ಮಾಹಿತಿಯನ್ನು ಚೀನಾ ಸರ್ಕಾರಕ್ಕೆ ನೀಡಿಲ್ಲ. ಈ ಬಗ್ಗೆ ನಾನು ಭರವಸೆ ಕೊಡಬಲ್ಲೆ ಎಂದಿದ್ದಾರೆ.

ಪ್ರತಿಯೊಬ್ಬ ಬ್ರಿಟನ್‌‌ ಟಿಕ್‌ ಟಾಕ್‌ ಬಳಕೆದಾರರ ಮಾಹಿತಿ ಗೌಪ್ಯವಾಗಿದೆ. ಯಾವುದೇ ತೆರನಾದ ಮಾಹಿತಿಯನ್ನು ಚೀನಾಕ್ಕೆ ನೀಡಿಲ್ಲ. ಆದ್ರೆ ಕಂಪನಿ ಚೀನಾದ್ದು ಆಗಿರೋದ್ರಿಂದ ಜಾಗತಿಕ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಮಾಹಿತಿ ಸೋರಿಕೆಯ ಬಗ್ಗೆ ಅನುಮಾನ ವ್ಯಕ್ತವಾಗುತ್ತಿರೋದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದಿದ್ದಾರೆ.