ಕ್ಲಬ್​ ಮೇಲೆ ಪೊಲೀಸರ ದಾಳಿ, 13 ಮಂದಿ ಬಲಿ.. ಎಲ್ಲಿ?

ಪೆರು: ರಾಜಧಾನಿ ಲಿಮಾದಲ್ಲಿ ಪೊಲೀಸರ ದಾಳಿ ವೇಳೆ ದೊಡ್ಡ ಅನಾಹುತವೊಂದು ನಡೆದಿದೆ. ಪೊಲೀಸರ ಕಾರ್ಯಾಚರಣೆಗೆ ಕ್ಲಬ್ ಒಂದರಲ್ಲಿ ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದ 13 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಡುಕರಿಗೆ ಅತಿ ಹೆಚ್ಚು ಇಷ್ಟವಾಗುವ ಹಾಗೂ ಜನಪ್ರಿಯ ಬಾರ್ ಆಗಿರುವ ಲಿಮಾ ನಗರದ ಪಾಸ್ ಓಲಿವೋಸ್​ನ ಥಾಮಸ್ ರೆಸ್ಟೋಬಾರ್ ಕ್ಲಬ್​ನಲ್ಲಿ ಅಕ್ರಮವಾಗಿ ಪಾರ್ಟಿ ಮಾಡಲಾಗುತ್ತಿತ್ತು. ಪಾರ್ಟಿಯಲ್ಲಿ ನೂರಾರು ಜನರು ಭಾಗಿಯಾಗಿದ್ರು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್​ನಿಂದಲೂ ಈ ಕ್ಲಬ್ ತೆರೆದಿರಲಿಲ್ಲ. ಹೀಗಾಗಿ ಪೊಲೀಸರಿಗೆ ಗೊತ್ತಾಗದಂತೆ ಕ್ಲಬ್​ನಲ್ಲಿ […]

ಕ್ಲಬ್​ ಮೇಲೆ ಪೊಲೀಸರ ದಾಳಿ, 13 ಮಂದಿ ಬಲಿ.. ಎಲ್ಲಿ?
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Aug 24, 2020 | 10:43 AM

ಪೆರು: ರಾಜಧಾನಿ ಲಿಮಾದಲ್ಲಿ ಪೊಲೀಸರ ದಾಳಿ ವೇಳೆ ದೊಡ್ಡ ಅನಾಹುತವೊಂದು ನಡೆದಿದೆ. ಪೊಲೀಸರ ಕಾರ್ಯಾಚರಣೆಗೆ ಕ್ಲಬ್ ಒಂದರಲ್ಲಿ ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದ 13 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಡುಕರಿಗೆ ಅತಿ ಹೆಚ್ಚು ಇಷ್ಟವಾಗುವ ಹಾಗೂ ಜನಪ್ರಿಯ ಬಾರ್ ಆಗಿರುವ ಲಿಮಾ ನಗರದ ಪಾಸ್ ಓಲಿವೋಸ್​ನ ಥಾಮಸ್ ರೆಸ್ಟೋಬಾರ್ ಕ್ಲಬ್​ನಲ್ಲಿ ಅಕ್ರಮವಾಗಿ ಪಾರ್ಟಿ ಮಾಡಲಾಗುತ್ತಿತ್ತು. ಪಾರ್ಟಿಯಲ್ಲಿ ನೂರಾರು ಜನರು ಭಾಗಿಯಾಗಿದ್ರು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್​ನಿಂದಲೂ ಈ ಕ್ಲಬ್ ತೆರೆದಿರಲಿಲ್ಲ. ಹೀಗಾಗಿ ಪೊಲೀಸರಿಗೆ ಗೊತ್ತಾಗದಂತೆ ಕ್ಲಬ್​ನಲ್ಲಿ ಪಾರ್ಟಿ ಆಯೋಚಿಸಲಾಗಿತ್ತು.

ಮಾರ್ಚ್​ನಿಂದ ಮುಚ್ಚದ್ದ ಕ್ಲಬ್​ನಲ್ಲಿ ಇದ್ದಕ್ಕಿದ್ದಂತೆ ಡಿಜೆ ಸಾಂಗ್ಸ್, ಜೋಷು ಕೇಳಿ ಬರುತ್ತಿದ್ದಂತೆ ನೆರೆ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಕ್ಲಬ್​ಗೆ ಎಂಟ್ರೀ ಕೊಟ್ಟಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲ್ಲು ಭಯಭೀತರಾಗಿ ಅನೇಕ ಕುಡುಕರು ದಿಕ್ಕಾ ಪಾಲಾಗಿ ಓಡಿದ್ದಾರೆ. 2ನೇ ಮಹಡಿಯಲ್ಲಿ ಕ್ಲಬ್​ ಇತ್ತು. ಹೀಗಾಗಿ ಹೊರಬರಲು ಕಿರಿದಾದ ಒಂದೇ ಒಂದು ದಾರಿ ಇತ್ತು. ಈ ವೇಳೆ ಮೆಟ್ಟಿಲಿನಿಂದ ಇಳಿದು ಬರುವಾಗ ಕಾಲ್ತುಳಿತಕ್ಕೆ ಹಾಗೂ ಒಬ್ಬರ ಮೇಲೆ ಒಬ್ಬರು ಬಿದ್ದು 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಕುಡಿದ ಅಮಲಿನಲ್ಲಿದ್ದ ಜನರೊಂದಿಗೆ ಪೊಲೀಸರ ನಡುವೆ ದಾಂಧಲೆಯೂ ನಡೆದಿದೆ. ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಹಾಗೂ 23 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪೆರು ದೇಶದಲ್ಲಿ ಕೊರೊನಾ ಅಟ್ಟಹಾಸ ಮಿತಿ ಮೀರಿದೆ. ಹೀಗಾಗಿ ಅಲ್ಲಿ ನೈಟ್​ ಕರ್ಫೂ, ಭಾನುವಾರದ ಲಾಕ್​ಡೌನ್ ಮುಂದುವರೆದಿದೆ. ಬಾರ್, ಕ್ಲಬ್​ಗಳನ್ನು ತೆರೆಯಲು ಇನ್ನೂ ಅನುಮತಿ ಸಿಕ್ಕಿಲ್ಲ.