ಮುಂದುವರೆದ ತಾಲಿಬಾನ್ ಕ್ರೌರ್ಯ; ಕಾಬೂಲ್​ನಲ್ಲಿ ಪತ್ರಕರ್ತರ ಮೇಲೆ ಹಲ್ಲೆ

| Updated By: shivaprasad.hs

Updated on: Aug 26, 2021 | 5:45 PM

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕ್ರೌರ್ಯ ಮುಂದುವರೆದಿದ್ದು, ಸ್ಥಳೀಯ ಮಾಧ್ಯಮವೊಂದರ ಪತ್ರಕರ್ತರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂದುವರೆದ ತಾಲಿಬಾನ್ ಕ್ರೌರ್ಯ; ಕಾಬೂಲ್​ನಲ್ಲಿ ಪತ್ರಕರ್ತರ ಮೇಲೆ ಹಲ್ಲೆ
ಪತ್ರಕರ್ತ ಜಿಯಾರ್ ಯಾದ್ (Credits: Tolo News/ Twitter)
Follow us on

ಅಫ್ಘಾನಿಸ್ತಾನದ ಕಾಬೂಲ್​ನಲ್ಲಿ ಸ್ಥಳೀಯ ಮಾಧ್ಯಮವಾದ ‘ಟೊಲೊ ನ್ಯೂಸ್​’ನ ಪತ್ರಕರ್ತರ ಮೇಲೆ ತಾಲಿಬಾಲಿಗಳು ಹಲ್ಲೆ ನಡೆಸಿದ್ದಾರೆ. ಪತ್ರಕರ್ತ ತನ್ನ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಹಲ್ಲೆಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪತ್ರಕರ್ತನನ್ನು ‘ಜಿಯಾರ್ ಯಾದ್’ ಎಂದು ಗುರುತಿಸಲಾಗಿದ್ದು, ಅವರ ಕ್ಯಾಮೆರಾ ಮ್ಯಾನ್​ಗೂ ಹಲ್ಲೆ ನಡೆಸಲಾಗಿತ್ತು. ಕೆಲವು ಮಾಧ್ಯಮಗಳಲ್ಲಿ ಜಿಯಾರ್ ಸತ್ತಿದ್ದಾರೆ ಎಂಬ ಮಾಹಿತಿ ಹರಿದಾಡಿತ್ತು. ಇದನ್ನು ಸ್ವತಃ ಜಿಯಾರ್ ನಿರಾಕರಿಸಿದ್ದು, ತಾನು ಬದುಕಿದ್ದೇನೆ, ಆದರೆ ಹಲ್ಲೆಯಾಗಿದ್ದು ನಿಜ ಎಂದಿದ್ದಾರೆ.

ಜಿಯಾರ್ ಯಾದ್ ಮಾಡಿದ ಟ್ವೀಟ್:

ತಾಲಿಬಾನಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಜಿಯಾರ್ ಬರೆದುಕೊಂಡಿದ್ದಾರೆ.

ಟ್ವಿಟರ್​ನಲ್ಲಿ ಹರಿದಾಡಿದ್ದ ತಪ್ಪು ಮಾಹಿತಿ:

ಪತ್ರಕರ್ತರಾಗಿದ್ದ ಜಿಯಾರ್ ಯಾದ್ ಹಾಗೂ ಅವರ ಕ್ಯಾಮೆರಾ ಮ್ಯಾನ್ ಕರ್ತವ್ಯ ನಿರ್ವಹಿಸುತ್ತಿರುವಾಗಲೇ, ತಾಲಿಬಾನಿಗಳು ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ. ಜಿಯಾರ್ ಅವರು, ಬಡತನ ಹಾಗೂ ನಿರುದ್ಯೋಗದ ಕುರಿತು ವರದಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ಉಳಿದ ಮಾಹಿತಿಗಳು ಇನ್ನಷ್ಟೇ ತಿಳಿದುಬರಬೇಕಿದೆ.

(Tolo News Journalist Ziar Yaad attacked by Taliban In Kabul)

Published On - 11:10 am, Thu, 26 August 21