AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Afghanistan Crisis: 6 ವರ್ಷ ಅಮೆರಿಕ ಸೇನೆಯ ಬಂಧಿಯಾಗಿದ್ದಾತ ಅಫ್ಘಾನಿಸ್ತಾನದ ಮುಂದಿನ ರಕ್ಷಣಾ ಸಚಿವ!

2001ರಲ್ಲಿ ಅಮೆರಿಕ ಸೇನೆಯಿಂದ ಬಂಧಿಸಲ್ಪಟ್ಟಿದ್ದ ಮುಲ್ಲಾ ಅಬ್ದುಲ್ ಖಾಯುಂ ಜಾಕೀರ್ ಅವರನ್ನು 2007ರವರೆಗೂ ಗ್ವಾಂಟನಮೋ ಸಮುದ್ರ ತೀರದಲ್ಲಿ ಇರಿಸಲಾಗಿತ್ತು. ಬಳಿಕ ಆತನನ್ನು ಅಫ್ಘಾನಿಸ್ತಾನದ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿತ್ತು. ಆತ ಇದೀಗ ಅಫ್ಘಾನಿಸ್ತಾನದ ರಕ್ಷಣಾ ಸಚಿರಾಗಲಿದ್ದಾರೆ. 

Afghanistan Crisis: 6 ವರ್ಷ ಅಮೆರಿಕ ಸೇನೆಯ ಬಂಧಿಯಾಗಿದ್ದಾತ ಅಫ್ಘಾನಿಸ್ತಾನದ ಮುಂದಿನ ರಕ್ಷಣಾ ಸಚಿವ!
ತಾಲಿಬಾನ್ ನಾಯಕರು
TV9 Web
| Edited By: |

Updated on:Aug 26, 2021 | 2:32 PM

Share

ಕಾಬೂಲ್: ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶವಾಗಿರುವುದರಿಂದ ಅಲ್ಲಿ ವಾಸವಾಗಿರುವ ಬೇರೆ ದೇಶಗಳ ಜನರು ತಮ್ಮ ದೇಶಕ್ಕೆ ತೆರಳುತ್ತಿದ್ದಾರೆ. ಅಫ್ಘಾನ್ ಪ್ರಜೆಗಳು ಕೂಡ ಆ ದೇಶದಲ್ಲಿ ವಾಸಿಸಲು ಸಾಧ್ಯವಿಲ್ಲವೆಂದು ಬೇರೆ ದೇಶಗಳ ವಿಮಾನಗಳನ್ನು ಹತ್ತಿ ವಲಸೆ ಹೋಗುತ್ತಿದ್ದಾರೆ. ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅಧಿಕಾರದಿಂದ ಕೆಳಗಿಳಿದ ನಂತರ ಅಫ್ಘಾನಿಸ್ತಾನದ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದ ಅಮ್ರುಲ್ಲಾ ಸಲೇಹ್ ತಾವೇ ಅಫ್ಘಾನಿಸ್ತಾನದ ಉಸ್ತುವಾರಿ ಅಧ್ಯಕ್ಷ. ತಾವು ತಾಲಿಬಾನ್ ಮುಂದಎ ತಲೆ ಬಾಗುವುದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಈ ನಡುವೆ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲು ತಾಲಿಬಾನ್ ಮುಂದಾಗಿದೆ.

ಅಫ್ಘಾನ್ ರಾಜಧಾನಿ ಕಾಬೂಲ್ ತಾಲಿಬಾನ್ ವಶವಾಗಿ 10 ದಿನಗಳು ಕಳೆದಿವೆ. ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲು ಮುಂದಾಗಿದೆ. ಈ ನಡುವೆ ತಾಲಿಬಾನ್ ಸಂಘಟನೆಯ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಅಫ್ಘಾನಿಸ್ತಾನದ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆಯಿದೆ. ಹಾಗೇ, ತಾಲಿಬಾನ್ ಅಫ್ಘಾನಿಸ್ತಾನದ ಪ್ರಮುಖ ಖಾತೆಗಳಿಗೆ ತಾಲಿಬಾನ್ ಸಂಘಟನೆಗಳ ಹಿರಿಯ ನಾಯಕರು ಸಚಿವರಾಗಲಿದ್ದಾರೆ. ಆದರೆ, ಸಚಿವರ ಪಟ್ಟಿಯನ್ನು ತಾಲಿಬಾನ್ ಇನ್ನೂ ಬಿಡುಗಡೆ ಮಾಡಿಲ್ಲ. ಸದ್ಯದಲ್ಲೇ ತಾಲಿಬಾನ್ ಸಂಘಟನೆ ಅಫ್ಘಾನಿಸ್ತಾನದ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಸದ್ಯಕ್ಕೆ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಹಿಂದೊಮ್ಮೆ ಅಮೆರಿಕ ಸೇನೆ ವಶಕ್ಕೆ ಪಡೆದು ಕ್ಯೂಬಾದ ಗ್ವಾಂಟನಮೋ ಸಮುದ್ರ ತೀರದಲ್ಲಿ ಬಂಧಿಸಿಟ್ಟಿದ್ದ ತಾಲಿಬಾನ್ ಉಗ್ರ ಮುಲ್ಲಾ ಅಬ್ದುಲ್ ಖಾಯುಂ ಜಾಕೀರ್ ಅಫ್ಘಾನಿಸ್ತಾನದ ಮುಂದಿನ ರಕ್ಷಣಾ ಸಚಿವರಾಗಲಿದ್ದಾರೆ.

ಮುಲ್ಲಾ ಅಬ್ದುಲ್ ಖಾಯುಂ ಜಾಕೀರ್

2001ರಲ್ಲಿ ಅಮೆರಿಕ ಸೇನೆಯಿಂದ ಬಂಧಿಸಲ್ಪಟ್ಟಿದ್ದ ಮುಲ್ಲಾ ಅಬ್ದುಲ್ ಖಾಯುಂ ಜಾಕೀರ್ ಅವರನ್ನು 2007ರವರೆಗೂ ಗ್ವಾಂಟನಮೋ ಸಮುದ್ರ ತೀರದಲ್ಲಿ ಇರಿಸಲಾಗಿತ್ತು. ಬಳಿಕ ಆತನನ್ನು ಅಫ್ಘಾನಿಸ್ತಾನದ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿತ್ತು. ಆತ ಇದೀಗ ಅಫ್ಘಾನಿಸ್ತಾನದ ರಕ್ಷಣಾ ಸಚಿರಾಗಲಿದ್ದಾರೆ.

ಅಫ್ಘಾನಿಸ್ತಾನದ ಹಣಕಾಸು ಸಚಿವರಾಗಿ ತಾಲಿಬಾನ್​ಗೆ ಹಣಕಾಸಿನ ಸಹಾಯ ಮಾಡುತ್ತಿದ್ದ ಗುಲ್ ಅಘಾ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಸಾದರ್ ಇಬ್ರಾಹಿಂಗೆ ಕೂಡ ಕೇಂದ್ರ ಸಚಿವ ಸ್ಥಾನ ಸಿಗಲಿದೆ. ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರ ವಕ್ತಾರನನ್ನು ತಾಲಿಬಾನ್ ಉಗ್ರರು ಹತ್ಯೆ ಮಾಡಿದ್ದರು. ಆ ಜಾಗಕ್ಕೆ ತಾಲಿಬಾನ್ ಉಗ್ರ ಸಂಘಟನೆಯ ವಕ್ತಾರ ಜಬೀಹುಲ್ಲಾ ಮುಜಾಹೀದ್ ನೇಮಕಗೊಂಡಿದ್ದಾರೆ.

ಕಳೆದ ವಾರ ಅಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರನ್ನಾಗಿ ತಾಲಿಬಾನ್ ಹಾಜಿ ಮೊಹಮ್ಮದ್​ ಇದ್ರೀಸ್ ಎಂಬುವವರನ್ನು ನೇಮಕ ಮಾಡಿತ್ತು. ಇಡೀ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್ ಅಫ್ಘಾನ್ ನೆಲದಲ್ಲಿ ನೆತ್ತರು ಹರಿಸುತ್ತಿದೆ. ಹಾಗೇ, ತಾಲಿಬಾನ್ ಸಂಘಟನೆಯಲ್ಲಿ ಸಕ್ರಿಯರಾಗಿರುವ ನಾಯಕರನ್ನು ಅಫ್ಘಾನ್​ನಲ್ಲಿ ರಾಜ್ಯಪಾಲರನ್ನಾಗಿ ನೇಮಕ ಮಾಡುವುದಾಗಿ ತಾಲಿಬಾನ್ ಮೂಲಗಳು ತಿಳಿಸಿವೆ.

ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದ ನಂತರ, ಭಾರತ ಸರ್ಕಾರವು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೆಲಸ ಮಾಡುತ್ತಿದೆ. ವರದಿಗಳ ಪ್ರಕಾರ, ಇದುವರೆಗೆ 750ಕ್ಕೂ ಹೆಚ್ಚು ಭಾರತೀಯರು ಮತ್ತು ಇತರ ದೇಶಗಳ ಜನರು ಸೇರಿದಂತೆ, ಅಫ್ಘಾನಿಸ್ತಾನದಿಂದ ಸ್ಥಳಾಂತರಗೊಂಡಿದ್ದಾರೆ. ಭಾರತ ಸರ್ಕಾರ ಈ ಕಾರ್ಯಾಚರಣೆಗೆ ‘ದೇವಿ ಶಕ್ತಿ’ ಎಂದು ಹೆಸರನ್ನಿಟ್ಟಿದೆ. ಅಫ್ಘಾನಿಸ್ತಾನದಿಂದ ವಿವಿಧ ದೇಶಗಳಿಗೆ ಅಲ್ಲಿನ ಪ್ರಜೆಗಳು ವಲಸೆ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಬರುವ ಅಫ್ಘಾನಿಸ್ತಾನದ ಪ್ರಜೆಗಳು ಇ-ವೀಸಾ ಪಡೆಯಬೇಕಾದುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಇದನ್ನೂ ಓದಿ: Afghanistan: ಅಫ್ಘಾನಿಸ್ತಾನದಲ್ಲಿ ಶೀಘ್ರವೇ ಹೊಸ ಸರ್ಕಾರ ರಚಿಸುವುದಾಗಿ ಘೋಷಿಸಿದ ತಾಲಿಬಾನ್

Afghanistan Crisis: ಅಮೆರಿಕ ಭದ್ರತಾ ಪಡೆಗಳು ಅಫ್ಘಾನಿಸ್ತಾನದಿಂದ ಹಿಂದಿರುಗಿದ ನಂತರ ಅಲ್ಲೇ ಉಳಿದವರ ಕಥೆಯೇನು?

(Afghanistan Crisis: Taliban appoint ex-Guantanamo detainee Mullah Abdul Qayyum Zakir as Defence Minister)

Published On - 2:29 pm, Thu, 26 August 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ