Afghanistan Crisis: ಅಮೆರಿಕ ಭದ್ರತಾ ಪಡೆಗಳು ಅಫ್ಘಾನಿಸ್ತಾನದಿಂದ ಹಿಂದಿರುಗಿದ ನಂತರ ಅಲ್ಲೇ ಉಳಿದವರ ಕಥೆಯೇನು?

ಸ್ಥಳಾಂತರದ ವಿಮಾನ ತಪ್ಪಿಸಿಕೊಂಡು ಅಫ್ಘಾನಿಸ್ತಾನದಲ್ಲಿಯೇ ಉಳಿಯುವವರ ಪಾಡು ಏನಾಗುತ್ತದೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.

Afghanistan Crisis: ಅಮೆರಿಕ ಭದ್ರತಾ ಪಡೆಗಳು ಅಫ್ಘಾನಿಸ್ತಾನದಿಂದ ಹಿಂದಿರುಗಿದ ನಂತರ ಅಲ್ಲೇ ಉಳಿದವರ ಕಥೆಯೇನು?
ಕಾಬೂಲ್ ವಿಮಾನ ನಿಲ್ದಾಣದಲ್ಲಿರುವ ಅಮೆರಿಕ ವಾಯುಪಡೆಯ ವಿಮಾನ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 25, 2021 | 5:29 PM

ಅಫ್ಘಾನಿಸ್ತಾನದಲ್ಲಿರುವ 6000 ಅಮೆರಿಕ ಯೋಧರನ್ನು ಈ ತಿಂಗಳ ಕೊನೆಯ ಹೊತ್ತಿಗೆ ಸ್ವದೇಶಕ್ಕೆ ಕರೆಸಿಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಅಮೆರಿಕ ಅಧ್ಯಕ್ಷ ಜೊ ಬೈಡೆನ್ ನಿನ್ನೆಯೂ (ಆಗಸ್ಟ್​ 24) ಪುನರುಚ್ಚರಿಸಿದ್ದಾರೆ. ಎಲ್ಲ ಅಮೆರಿಕನ್ನರು ಮತ್ತು ಅಫ್ಘಾನಿಸ್ತಾನದಲ್ಲಿ ನಡೆದ ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ನ್ಯಾಟೊ ಪಡೆಗಳಿಗೆ ನೆರವಾದ ಅಫ್ಘಾನ್ನರನ್ನು ಇಷ್ಟು ಸೀಮಿತ ಅವಧಿಯಲ್ಲಿ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂಬುದು ಅಮೆರಿಕದ ಉನ್ನತ ನಾಯಕತ್ವಕ್ಕೆ ದಿನಕಳೆದಂತೆ ಮನವರಿಕೆಯಾಗುತ್ತಿದೆ. ಸ್ಥಳಾಂತರದ ವಿಮಾನ ತಪ್ಪಿಸಿಕೊಂಡು ಅಫ್ಘಾನಿಸ್ತಾನದಲ್ಲಿಯೇ ಉಳಿಯುವವರ ಪಾಡು ಏನಾಗುತ್ತದೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.

ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಯುದ್ಧ ನಡೆಸಿದ ಅಮೆರಿಕವು ಕಳೆದ ಏಪ್ರಿಲ್ ತಿಂಗಳಲ್ಲಿ ಅಲ್ಲಿಂದ 2,500 ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಘೋಷಿಸಿತ್ತು. ಆದರೆ ತಾಲಿಬಾನಿಗಳ ಪ್ರಾಬಲ್ಯ ಹೆಚ್ಚಾದ ಹಿನ್ನೆಲೆಯಲ್ಲಿ, ಅಲ್ಲಿರುವ ಅಮೆರಿಕ ನಾಗರಿಕರ ಸ್ಥಳಾಂತರಕ್ಕಾಗಿ ಮತ್ತಷ್ಟು ಸೈನಿಕರನ್ನು ನಿಯೋಜಿಸಬೇಕಾದ ಅನಿವಾರ್ಯತೆಗೆ ಸಿಲುಕಿತು. ಅಮೆರಿಕ ಬೆಂಬಲಿತ ಅಫ್ಘಾನ್ ಸರ್ಕಾರ ಮತ್ತು ಸೇನಾಪಡೆ ತಾಲಿಬಾನಿಗಳ ಎದುರು ಅನಿರೀಕ್ಷಿತ ಎಂಬಂತೆ ಕುಸಿದು ಬಿತ್ತು. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇದೀಗ ನಡೆಯುತ್ತಿರುವ ಸ್ಥಳಾಂತರ ಕಾರ್ಯಾಚರಣೆಯ ರೀತಿಯ ಬಗ್ಗೆ ಅಮೆರಿಕದಲ್ಲಿ ಬೈಡೆನ್ ಟೀಕೆ ಎದುರಿಸಬೇಕಾಯಿತು.

ಮುಂದೇನು? ಕಾಬೂಲ್ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಅಮೆರಿಕ ಸೇನೆಯ ಮರೈನ್ಸ್ ಮತ್ತು ಪ್ಯಾರಾಟ್ರೂಪರ್​ಗಳು ಜಮಾವಣೆಗೊಂಡಿದ್ದಾರೆ. ಇವರ ಸ್ಥಳಾಂತರ ಪ್ರಕ್ರಿಯೆ ಶುಕ್ರವಾರದಿಂದಲೇ (ಆಗಸ್ಟ್ 27) ಆರಂಭವಾಗಬೇಕು. ಇಲ್ಲದಿದ್ದರೆ ಆಗಸ್ಟ್ 31ರ ಒಳಗೆ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳಿಸಲು ಆಗುವುದಿಲ್ಲ ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ.

ಭದ್ರತಾ ಪಡೆಗಳ ಸ್ಥಳಾಂತರ ಪ್ರಕ್ರಿಯೆಯು ಒಮ್ಮೆ ಆರಂಭಗೊಂಡರೆ ನಂತರದ ದಿನಗಳಲ್ಲಿ ಸಹಜವಾಗಿಯೇ ನಾಗರಿಕರ ಸ್ಥಳಾಂತರ ಪ್ರಕ್ರಿಯೆ ನಿಧಾನಗೊಳ್ಳುತ್ತದೆ. ಈ ವಾರದಲ್ಲಿ ದಿನಕ್ಕೆ 20,000ಕ್ಕೂ ಹೆಚ್ಚು ಜನರನ್ನು ಏರ್​ಲಿಫ್ಟ್ ಮಾಡಿ ಅಮೆರಿಕದ ಮಿಲಿಟರಿ ಪೈಲಟ್​ಗಳು ದಾಖಲೆ ಬರೆದಿದ್ದರು. ಮುಂದಿನ ದಿನಗಳಲ್ಲಿ ಇದೇ ಪ್ರಮಾಣದಲ್ಲಿ ಏರ್​ಲಿಫ್ಟ್ ಸಾಧ್ಯವಾಗುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ.

ಗಡುವಿನ ಒಳಗೆ ಎಷ್ಟು ಜನರನ್ನು ಸ್ಥಳಾಂತರಿಸಬಹುದು? ಆಗಸ್ಟ್​ 14ರ ನಂತರ ಒಟ್ಟು 70,000 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಇದರಲ್ಲಿ ಅಮೆರಿಕದ ನಾಗರಿಕರು, ನ್ಯಾಟೊ ಸಿಬ್ಬಂದಿ ಮತ್ತು ಪ್ರಾಣಾಪಾಯ ಎದುರಿಸುತ್ತಿರುವ ಅಫ್ಘಾನ್ ನಾಗರಿಕರು ಸೇರಿದ್ದಾರೆ. ಅಫ್ಘಾನಿಸ್ತಾನದಲ್ಲಿರುವ ಯಾವುದೇ ಅಮೆರಿಕದ ಪ್ರಜೆ ಆ ದೇಶ ತೊರೆಯಬೇಕು ಎಂದು ಇಚ್ಛಿಸಿದರೆ ಅಂಥವನನ್ನು ಸ್ಥಳಾಂತರಿಸಲು ನಮ್ಮ ಸರ್ಕಾರವು ಬದ್ಧವಾಗಿದೆ. ಪ್ರಾಣಾಪಾಯ ಎದುರಿಸುತ್ತಿರುವ ಅಫ್ಘಾನಿ ಪ್ರಜೆಗಳ ಪೈಕಿ ಸಾಧ್ಯವಾದಷ್ಟೂ ಹೆಚ್ಚು ಜನರನ್ನು ಸ್ಥಳಾಂತರಿಸುತ್ತೇವೆ ಎಂದು ಬೈಡೆನ್ ಹೇಳಿದ್ದರು.

ಅಮೆರಿಕದ ರಕ್ಷಣಾ ವಿಭಾಗ ಪೆಂಟಗನ್​ನ ವಕ್ತಾರ ಜಾನ್ ಕಿರ್​ಬಿ ಆಗಸ್ಟ್​ 31ರ ಒಳಗೆ ಅಫ್ಘಾನಿಸ್ತಾನದಲ್ಲಿರುವ ಎಲ್ಲ ಅಮೆರಿಕನ್ನರು ಸ್ಥಳಾಂತರಿಸಲು ನಮಗೆ ಸಾಧ್ಯವಾಗಬಹುದು. ಆದರೆ ಅಮೆರಿಕದ ರಾಯಭಾರ ಕಚೇರಿಯೊಂದಿಗೆ ಬಹುತೇಕರು ನೋಂದಣಿ ಮಾಡಿಕೊಂಡಿಲ್ಲ. ಹೀಗಾಗಿಯೇ ಅಲ್ಲಿ ಇನ್ನೂ ಎಷ್ಟು ಮಂದಿ ಅಮೆರಿಕನ್ನರು ಉಳಿದುಕೊಂಡಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಸಿಗುತ್ತಿಲ್ಲ. ಇದು ದೊಡ್ಡ ಸಮಸ್ಯೆಯಾಗಿದೆ. ಕಾಬೂಲ್ ವಿಮಾನ ನಿಲ್ದಾಣದ ಭದ್ರತೆಗೆ ಶ್ರಮಿಸುತ್ತಿರುವ 500 ಅಫ್ಘಾನ್ ಯೋಧರನ್ನು ಸ್ಥಳಾಂತರಿಸಲು ಅಮೆರಿಕ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸ್ಥಳಾಂತರ ಪ್ರಕ್ರಿಯೆಯು ಇದೇ ವೇಗದಲ್ಲಿ ಮುಂದುವರಿದರೆ, ಬೈಡೆನ್​ಗೆ ತಾಲಿಬಾನಿಗಳು ವಿಧಿಸಿರುವ ಗಡುವಿನ ಒಳಗೆ ಎಲ್ಲ ಅಮೆರಿಕನ್ನರು ಮತ್ತು ತಾಲಿಬಾನಿಗಳಿಂದ ಪ್ರತಿಕಾರದ ಆತಂಕ ಎದುರಿಸುತ್ತಿರುವ ಅಫ್ಘಾನ್ ಯೋಧರ ರಕ್ಷಣೆ ಸಾಧ್ಯವಾಗುವುದಿಲ್ಲ ಎಂಬ ಆತಂಕ ವ್ಯಕ್ತವಾಗಿದೆ.

ಅಫ್ಘಾನಿಸ್ತಾನದಲ್ಲಿಯೇ ಉಳಿದುಕೊಳ್ಳುವವರ ಪಾಡು ಏನಾಗುತ್ತೆ? ನಿರಾಶ್ರಿತರ ಪುನರ್ವಸತಿ ಸಂಸ್ಥೆಗಳ ಪ್ರಕಾರ ನ್ಯಾಟೊ ಪಡೆಗಳಿಗೆ ನೆರವಾದ 2,50,000 ಅಫ್ಘಾನಿ ಪ್ರಜೆಗಳು ಪ್ರಾಣಭೀತಿ ಎದುರಿಸುತ್ತಿದ್ದಾರೆ. ಅಮೆರಿಕ ಪ್ರಜೆಗಳಿಗೆ ದುಭಾಷಿಗಳಾಗಿ, ಚಾಲಕರಾಗಿ ಮತ್ತು ಇತರ ರೀತಿಯಲ್ಲಿ ಇವರು ನೆರವಾಗಿದ್ದರು. ಇವರೆಲ್ಲರನ್ನೂ ಸ್ಥಳಾಂತರಿಸಬೇಕಾದ ಒತ್ತಡವನ್ನು ಅಮೆರಿಕ ಎದುರಿಸುತ್ತಿದೆ. ಆದರೆ ಜುಲೈ ಅಂತ್ಯದ ಹೊತ್ತಿಗೆ ದೇಶದಿಂದ ಹೊರಗೆ ಹೋಗಿದ್ದವರ ಸಂಖ್ಯೆ ಕೇವಲ 62,000 ಮಾತ್ರ. ಸ್ಥಳಾಂತರದ ಗಡುವು ವಿಸ್ತರಿಸಬೇಕೆಂದು ತಾಲಿಬಾನ್ ಆಡಳಿತದ ಮೇಲೆ ಅಮೆರಿಕ ಸರ್ಕಾರ ಒತ್ತಡ ಹೇರಬಹುದು ಎಂದು ವಿಶ್ಲೇಷಿಸಲಾಗಿದೆ.

ಅಮೆರಿಕಕ್ಕೆ ಇರುವ ಅನುಕೂಲಗಳೇನು? ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಸ್ಥಾಪಿಸಲಿರುವ ಸರ್ಕಾರಕ್ಕೆ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಮಾನ್ಯತೆ ನೀಡಲಿವೆಯೇ ಎಂಬುದು ದೊಡ್ಡ ಪ್ರಶ್ನೆ. ವಿದೇಶದಿಂದ ಬರುವ ಸಹಾಯಧನವನ್ನು ಪಡೆದುಕೊಳ್ಳಲು ತಾಲಿಬಾನಿಗಳಿಗೆ ಇಂಥ ಮಾನ್ಯತೆ ಗಳಿಸಿಕೊಳ್ಳುವುದು ಅತ್ಯಗತ್ಯ. ಕೃಷಿ ಮತ್ತು ಕೈಗಾರಿಕೆಗಳು ನೆಲಕಚ್ಚಿರುವ ಅಫ್ಘಾನಿಸ್ತಾನದಲ್ಲಿ ವಿದೇಶಗಳಿಂದ ಸಿಗುವ ಸಹಾಯಧನವೇ ಆಡಳಿತವನ್ನು ಮುನ್ನೆಡೆಸಲು ಸಿಗುವ ಸಂಪನ್ಮೂಲ ಎನಿಸಿಕೊಂಡಿದೆ. ತಾಲಿಬಾನಿಗಳು ರಚಿಸುವ ಸರ್ಕಾರವು ಇಂಥ ಅವಲಂಬನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ತಾಲಿಬಾನ್​ ಸಂಘಟನೆಯನ್ನು ಅಮೆರಿಕ ಈವರೆಗೆ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿಲ್ಲ. ಇದರ ಜೊತೆಗೆ ತಾಲಿಬಾನಿ ಆಡಳಿತದೊಂದಿಗೆ ಮಾತುಕತೆಯನ್ನೂ ಅಮೆರಿಕ ಈಗಾಗಲೇ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಅಮೆರಿಕದ ನಡೆ ಹೇಗಿರಬಹುದು ಎಂಬುದನ್ನು ಈಗಲೇ ಊಹಿಸಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ಅಫ್ಘಾನಿಸ್ತಾನದ ಪಂಜ್​ಶಿರ್ ಪ್ರಾಂತ್ಯಕ್ಕೆ ತಾಲಿಬಾನ್ ಮುತ್ತಿಗೆ: ಆಹಾರ, ಇಂಧನ ಸ್ಥಗಿತ

ಇದನ್ನೂ ಓದಿ: Ahmad Massoud: ಪಂಜ್​ಶಿರ್​ ಕಣಿವೆಯಲ್ಲಿ ತಾಲಿಬಾನ್ ವಿರೋಧಿ ಹೋರಾಟ ಮುಂದುವರಿಸುತ್ತಿರುವ ಅಹ್ಮದ್ ಮಸೂದ್ ಯಾರು?

(America has to leave Afghanistan within August 31 What happens after that)

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್