ಕಾಬೂಲ್ನಲ್ಲಿ ಭಾರತದ ವೀಸಾ, ಅಫ್ಘಾನಿಸ್ತಾನ ನಾಗರಿಕರ ಪಾಸ್ ಪೋರ್ಟ್ ಕಳವು!
ಈಗಾಗಲೇ ಅಫ್ಘಾನಿಸ್ತಾನದ ನಾಗರಿಕರು ಭಾರತದ ಇ- ವೀಸಾ ಕೋರಿ ಸುಮಾರು 15 ಸಾವಿರ ಅರ್ಜಿ ಸಲ್ಲಿಸಿದ್ದರು. ಸದ್ಯ ಹೊಸದಾಗಿ ಇ- ವೀಸಾ ಪಡೆಯಲು ಅಫ್ಘಾನಿಸ್ತಾನದ ನಾಗರಿಕರಿಗೆ ಸೂಚನೆ ನೀಡಲಾಗಿದೆ.
ತಾಲಿಬಾನ್ (Taliban) ಉಗ್ರರು ಅಫ್ಘಾನಿಸ್ತಾನವನ್ನು (Afghanistan) ವಶಕ್ಕೆ ಪಡೆದ ದಿನದಿಂದ ಅಲ್ಲಿನ ಪರಿಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದೆ. ದೇಶ ಬಿಟ್ಟು ಹೋಗಲು ಅಲ್ಲಿನ ಜನರು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಭಾರತದ ವೀಸಾ, ಅಫ್ಘಾನಿಸ್ತಾನ ನಾಗರಿಕರ ಪಾಸ್ ಪೋರ್ಟ್ ಕಳುವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾಬೂಲ್ನಲ್ಲಿ ಪಾಸ್ ಪೋರ್ಟ್ ಕಳ್ಳತನವಾಗಿದೆ ಎಂದು ಹೇಳಲಾಗುತ್ತಿದೆ. ಖಾಸಗಿ ಟ್ರಾವೆಲ್ ಏಜೆನ್ಸಿ ಮೇಲೆ ದಾಳಿ ನಡೆಸಿ ತಾಲಿಬಾನಿಗಳು ಪಾಸ್ ಪೋರ್ಟ್ನ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆಗಸ್ಟ್ 15 ಮತ್ತು 16 ರಂದು ಭಾರತದ ವೀಸಾ ಕಳ್ಳತನವಾಗಿದ್ದು, ಈ ಬಗ್ಗೆ ಮಾಹಿತಿ ತಡವಾಗಿ ತಿಳಿದುಬಂದಿದೆ. ಕಳ್ಳತನವಾಗಿರುವ ಭಾರತದ ವೀಸಾವನ್ನು ಪಾಕ್ ಉಗ್ರರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದ್ದ ಕಾರಣ ಕೇಂದ್ರದ ಗೃಹ ಇಲಾಖೆ ನೀಡಿದ್ದ ವೀಸಾವನ್ನು ರದ್ದುಪಡಿಸಿದೆ.
ಈಗಾಗಲೇ ಅಫ್ಘಾನಿಸ್ತಾನದ ನಾಗರಿಕರು ಭಾರತದ ಇ- ವೀಸಾ ಕೋರಿ ಸುಮಾರು 15 ಸಾವಿರ ಅರ್ಜಿ ಸಲ್ಲಿಸಿದ್ದರು. ಸದ್ಯ ಹೊಸದಾಗಿ ಇ- ವೀಸಾ ಪಡೆಯಲು ಅಫ್ಘಾನಿಸ್ತಾನದ ನಾಗರಿಕರಿಗೆ ಸೂಚನೆ ನೀಡಲಾಗಿದೆ.
ಹಣ ದಂಧೆ ಅಫ್ಘಾನಿಸ್ತಾನ ತಾಲಿಬಾನ್ ಉಗ್ರ ಸಂಘಟನೆಯ ವಶವಾದ ಹಿನ್ನೆಲೆ ಅಫ್ಘಾನಿಸ್ತಾನದಿಂದ ವಿದೇಶಗಳಿಗೆ ಹೋಗಲು ಜನರು ಹರಸಾಹಸ ಪಡುತ್ತಿದ್ದಾರೆ. ಈ ಪರಿಸ್ಥಿತಿಯ ನಡುವೆ ಹಣ ದಂಧೆ ಮಾಡಲು ಅಮೆರಿಕದ ಡಿಫೆನ್ಸ್ ಕಂಟ್ರಾಕ್ಟರ್ ಮುಂದಾಗಿದ್ದಾರೆ. ಆಮೆರಿಕಾದ ಡಿಫೆನ್ಸ್ ಕಂಟ್ರಾಕ್ಟರ್ನ ಚಾರ್ಟೆಡ್ ವಿಮಾನದಲ್ಲಿ ಪ್ರಯಾಣಕ್ಕೆ 6,500 ಡಾಲರ್ ಹಣ ನಿಗದಿ ಮಾಡಿದ್ದಾರೆ. ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ 4,81,000 ರೂ. ವಿಮಾನ ಟಿಕೆಟ್ ದರ ನಿಗದಿ ಮಾಡಿದ್ದಾರೆ.
ಒಂದೆಡೆ ತಾಲಿಬಾನ್ ಆಳ್ವಿಕೆಗೆ ಹೆದರಿ ದೇಶ ಬಿಡಲು ಜನರು ಒದ್ದಾಡುತ್ತಿದ್ದಾರೆ. ಮತ್ತೊಂದೆಡೆ ಕೆಲವರಿಗೆ ಮಾನವೀಯತೆಯ ಬಿಕ್ಕಟ್ಟಿನ ಸಮಯದಲ್ಲೂ ಹಣವೇ ಮುಖ್ಯವಾಗಿದೆ. ಹೆಚ್ಚಿನ ಹಣ ಕೊಟ್ಟರೆ ಚಾರ್ಟೆಡ್ ವಿಮಾನದಲ್ಲಿ ವಿದೇಶಕ್ಕೆ ಸ್ಥಳಾಂತರ ಮಾಡುತ್ತಾರೆ. ಹಣ ಇಲ್ಲದಿದ್ದರೆ ಕಾಬೂಲ್ ಏರ್ ಪೋರ್ಟ್ ಹೊರಗೆ ಜನರು ಪರದಾಟ ಪಡುವುದು ಖಚಿತವಾಗಿದೆ.
ಇದನ್ನೂ ಓದಿ ಅಫ್ಘಾನಿಸ್ತಾನದ ಪಂಜ್ಶಿರ್ ಪ್ರಾಂತ್ಯಕ್ಕೆ ತಾಲಿಬಾನ್ ಮುತ್ತಿಗೆ: ಆಹಾರ, ಇಂಧನ ಸ್ಥಗಿತ ಅಫ್ಘಾನಿಸ್ತಾನ ಸರ್ಕಾರದ ಮಾಧ್ಯಮ-ಮಾಹಿತಿ ಕೇಂದ್ರದ ಉನ್ನತಾಧಿಕಾರಿಯನ್ನು ಹತ್ಯೆಗೈದ ತಾಲಿಬಾನ್ ಉಗ್ರರು..
(theft of Indias visa and passport Afghan citizens in kabul)