Afghanistan: ಅಫ್ಘಾನಿಸ್ತಾನದಲ್ಲಿ ಶೀಘ್ರವೇ ಹೊಸ ಸರ್ಕಾರ ರಚಿಸುವುದಾಗಿ ಘೋಷಿಸಿದ ತಾಲಿಬಾನ್

ರಾಜಧಾನಿ ಕಾಬೂಲ್‌ ನಗರದಲ್ಲಿಯೇ ರಾಜಕೀಯ ನಾಯಕರನ್ನು ಭೇಟಿಯಾಗಿ ಸರ್ಕಾರ ರಚನೆ ಬಗ್ಗೆ ಚರ್ಚೆ ಮುಂದುವರೆಸಿದ್ದಾರೆ. ಅವರ ಅಭಿಪ್ರಾಯಗಳಿಗೂ ಸಹ ತಾಲಿಬಾನ್ ಪ್ರಾಮುಖ್ಯತೆ ನೀಡಲಿದೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.

Afghanistan: ಅಫ್ಘಾನಿಸ್ತಾನದಲ್ಲಿ ಶೀಘ್ರವೇ ಹೊಸ ಸರ್ಕಾರ ರಚಿಸುವುದಾಗಿ ಘೋಷಿಸಿದ ತಾಲಿಬಾನ್
ಜಬೀವುಲ್ಲಾ ಮುಜಾಹಿದ್
Follow us
TV9 Web
| Updated By: guruganesh bhat

Updated on:Aug 22, 2021 | 11:28 PM

ದೆಹಲಿ: ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರವನ್ನು ಶೀಘ್ರದಲ್ಲಿಯೇ ಘೋಷಿಸುವುದಾಗಿ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ತಿಳಿಸಿದ್ದಾರೆ. ಹೊಸ ಸರ್ಕಾರ ರಚನೆ ಕುರಿತು ರಾಜಕೀಯ ನಾಯಕರ ಜತೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲಿಯೇ ಹೊಸ ಸರ್ಕಾರವನ್ನು ಘೋಷಿಸಲಾಗುವುದು. ತಾಲಿಬಾನಿ ನಾಯಕರು ರಾಜಕೀಯ ನಾಯಕರನ್ನು ಭೇಟಿ ಆಗಿದ್ದಾರೆ. ರಾಜಧಾನಿ ಕಾಬೂಲ್‌ ನಗರದಲ್ಲಿಯೇ ರಾಜಕೀಯ ನಾಯಕರನ್ನು ಭೇಟಿಯಾಗಿ ಸರ್ಕಾರ ರಚನೆ ಬಗ್ಗೆ ಚರ್ಚೆ ಮುಂದುವರೆಸಿದ್ದಾರೆ. ಅವರ ಅಭಿಪ್ರಾಯಗಳಿಗೂ ಸಹ ತಾಲಿಬಾನ್ ಪ್ರಾಮುಖ್ಯತೆ ನೀಡಲಿದೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.

ಅಫ್ಘಾನಿಸ್ತಾನವೀಗ ತಾಲಿಬಾನಿಯರ ವಶದಲ್ಲಿರುವುದರಿಂದ ಅನೇಕ ದೇಶಗಳು ಸುರಕ್ಷತೆಯ ದೃಷ್ಟಿಯಿಂದ ತಮ್ಮ ಪ್ರಜೆಗಳನ್ನು ಮರಳಿ ಕರೆದೊಯ್ಯುತ್ತಿವೆ. ಮೇಲಾಗಿ, ಅಲ್ಲಿನ ನಾಗರೀಕರು ಕೂಡಾ ತಾಲಿಬಾನಿಗಳಿಂದ ಪಾರಾದರೆ ಸಾಕು ಎಂದು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಾಲಿಬಾನಿಗಳು ಸರ್ಕಾರ ರಚನೆಯನ್ನು ತ್ವರಿತವಾಗಿ ಮಾಡಲು ನಿರ್ಧರಿಸಿದ್ದು, ಶೀಘ್ರದಲ್ಲೇ ಸರ್ಕಾರ ಸ್ಥಾಪಿಸುವ ಭರವಸೆ ನೀಡಿದ್ದಾರೆ.

x

ಅಫ್ಘಾನಿಸ್ತಾನದಲ್ಲಿ ಬಂದೀಖಾನೆಯ ಬಾಗಿಲು ತೆಗೆಯುತ್ತಿರುವ ತಾಲಿಬಾನಿಗಳು ಈ ಬೆಳವಣಿಗೆಯ ಬೆನ್ನಲ್ಲೇ ಅಫ್ಘಾನಿಸ್ತಾನದ​ ಮಾಧ್ಯಮಗಳಿಗೆ ಧೈರ್ಯ ತುಂಬಲು ಮೂವರು ಸದಸ್ಯರನ್ನೊಳಗೊಂಡ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಪತ್ರಕರ್ತರ ಒಕ್ಕೂಟದ ಓರ್ವ ಸದಸ್ಯ, ಸಾಂಸ್ಕೃತಿಕ ಆಯೋಗ ಮತ್ತು ಕಾಬೂಲ್​ನ ಓರ್ವ ಪೊಲೀಸ್ ಅಧಿಕಾರಿ ಈ ಸಮಿತಿಗೆ ಸದಸ್ಯರಾಗಿ ನೇಮಕಗೊಳ್ಳಲಿದ್ದಾರೆ.

ಅಫ್ಘಾನಿಸ್ತಾನವನ್ನು ಆವರಿಸಿಕೊಂಡು ಆಡಳಿತ ಯಂತ್ರವನ್ನು ನಿಯಂತ್ರಣಕ್ಕೆ ಪಡೆದಿರುವ ತಾಲಿಬಾನಿ ಉಗ್ರರ ಉಪಟಳ ಮಿತಿಮೀರಿದೆ. ಈ ಉಗ್ರವಾದಿಗಳ ಕೈಗೆ ದೇಶ ಸಿಲುಕಿರುವುದರಿಂದ ಅಲ್ಲೀಗ ದೇಶದೊಳಗಿರುವ ಉಗ್ರರಿಗೆ, ಕಳ್ಳರಿಗೆ, ದರೋಡೆಕೋರರಿಗೆ ಸ್ವತಂತ್ರ ಸಿಕ್ಕಂತಾಗಿದೆ. ಇಂದು ತಾಲಿಬಾನಿಗಳು ಅಫ್ಘಾನಿಸ್ತಾನದ ಫರ್ಯಾಬ್​ ಪ್ರಾಂತ್ಯದಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಡಜನ್​ಗಟ್ಟಲೇ ಉಗ್ರರನ್ನು ಮುಕ್ತಗೊಳಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸಾವಿರಾರು ಅಪರಾಧಿಗಳನ್ನು ಜೈಲಿನಿಂದ ಹೊರಗೆ ಬಿಟ್ಟಿದ್ದ ಉಗ್ರರು ಈಗ ಅತೀ ಕ್ರೂರಿಗಳೆನಿಸಿಕೊಂಡವರಿಗೂ ಬಂಧನದಿಂದ ಮುಕ್ತಿ ನೀಡುತ್ತಿದ್ದಾರೆ.

ಇಂದು ಜೈಲಿನಿಂದ ಆಚೆ ಬಂದಿರುವ ಉಗ್ರರು ಅತ್ಯಂತ ಅಪಾಯಕಾರಿಗಳೆಂದು ಗುರುತಿಸಿಕೊಂಡವರಾಗಿದ್ದು ಅವರ ಅಟ್ಟಹಾಸ ಮತ್ತಷ್ಟು ಹೆಚ್ಚಳವಾಗುವ ಅಪಾಯ ಇದೆ. ಅಪರಾಧಿಗಳು, ಸಮಾಜ ಘಾತುಕರ ಪಾಲಿಗೆ ದೇವರಂತಾಗಿರುವ ತಾಲಿಬಾನಿಗಳು ಇತ್ತೀಚೆಗಷ್ಟೇ ಡ್ರಗ್​ ಜಾಲದಲ್ಲಿ ಸಿಲುಕಿ ಬಂಧಿತರಾದವರನ್ನೂ ಜೈಲಿನಿಂದ ಹೊರಬಿಟ್ಟಿದ್ದರು.

ಅಲ್ಲಿನ ಮಾಧ್ಯಮಗಳ ವರದಿಗಳು ತಿಳಿಸಿರುವ ಪ್ರಕಾರ 13 ಮಹಿಳೆಯರು ಹಾಗೂ 3 ವಿದೇಶಿಗರು ಸೇರಿದಂತೆ ಕನಿಷ್ಠ 630 ಕೈದಿಗಳನ್ನು ತಾಲಿಬಾನ್​ ಕುಂದುಸ್​ ಪ್ರಾಮತ್ಯದಲ್ಲೇ ಬಿಡುಗಡೆ ಮಾಡಿದೆ. ಆ ಪೈಕಿ 180 ಮಂದಿ ಉಗ್ರರೂ ಇದ್ದು, ಅದರಲ್ಲಿ 15 ಮಂದಿ ಉಗ್ರರನ್ನು ಅಫ್ಘಾನಿಸ್ತಾನ ಅತ್ಯಂತ ಅಪಾಯಕಾರಿ ಎಂದು ಗುರುತಿಸಲ್ಪಟ್ಟಿತ್ತು. ಜತೆಗೆ, ಅಫ್ಘಾನಿಸ್ತಾನ ಸರ್ಕಾರ ಈ ಹಿಂದೆ ಮರಣದಂಡನೆ ವಿಧಿಸಿದ್ದವರನ್ನೂ ತಾಲಿಬಾನ್​ ಉಗ್ರರು ಮುಕ್ತಗೊಳಿಸುತ್ತಿದ್ದಾರೆ.

ಇತ್ತ ನಿಮ್ರಾಜ್​ ಪ್ರಾಂತ್ಯದ ಜರಂಜ್​ ನಗರದಲ್ಲೂ ಏನಿಲ್ಲವೆಂದರೂ 350 ಕೈದಿಗಳನ್ನು ಹೊರಬಿಡಲಾಗಿದ್ದು, ಅವರೆಲ್ಲರೂ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳಿಗೆ ಮತ್ತಷ್ಟು ಬಲ ನೀಡುವ ಸಂಭವ ಅಧಿಕವಾಗಿದೆ. ಆದರೆ, ಈ ಬಗ್ಗೆ ಅಫ್ಘಾನಿಸ್ತಾನ ಸರ್ಕಾರದ ಭಾಗವಾಗಿದ್ದ ಅಧಿಕಾರಿಗಳು ಮಾತ್ರ ಒಮ್ಮೆ ತಾಲಿಬಾನಿಗಳನ್ನು ಹತೋಟಿಗೆ ತಂದ ನಂತರ ಜೈಲಿನಿಂದ ಆಚೆ ಬಂದಿರುವ ಪುಡಾರಿಗಳನ್ನೆಲ್ಲಾ ಪುನಃ ಕಂಬಿ ಹಿಂದೆ ಅಟ್ಟಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  

Burkina Faso: ಆಫ್ರಿಕಾ ಖಂಡದ ಪುಟ್ಟ ದೇಶ ಬುರ್ಕಿನಾ ಫಾಸೋದಲ್ಲಿ ಉಗ್ರರ ಉಪಟಳ; 80 ಜನರು ಬಲಿ: ಭಾರತಕ್ಕೂ ಈ ದೇಶಕ್ಕೂ ಏನು ಸಂಬಂಧ?

ಅಮೆರಿಕ ಕೆಂಡಾಮಂಡಲ: 2ನೇ ಮಹಾಯುದ್ಧದ ಐತಿಹಾಸಿಕ ಚಿತ್ರಕ್ಕೆ ತಾಲಿಬಾನ್ ಅಣಕ, ಬೈಡೆನ್ ರಾಜೀನಾಮೆಗೆ ಹೆಚ್ಚಾಯ್ತು ಒತ್ತಡ

(Zabihullah Mujahid says will declare new government in afghanistan shortly)

Published On - 11:11 pm, Sun, 22 August 21

ಪಕ್ಷದ ವಿದ್ಯಮಾನಗಳು ಶಿವಕುಮಾರ್​ರನ್ನು ದೆಹಲಿಗೆ ಹೋಗುವಂತೆ ಮಾಡಿದವೇ?
ಪಕ್ಷದ ವಿದ್ಯಮಾನಗಳು ಶಿವಕುಮಾರ್​ರನ್ನು ದೆಹಲಿಗೆ ಹೋಗುವಂತೆ ಮಾಡಿದವೇ?
ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್