Video ಲಂಡನ್‌ನಲ್ಲಿ ವಾನ್​​ ಗೋ ಪೇಂಟಿಂಗ್​​ ಮೇಲೆ ಟೊಮ್ಯಾಟೊ ಸೂಪ್​​ ಎರಚಿ ಪ್ರತಿಭಟನೆ

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, "ಜಸ್ಟ್ ಸ್ಟಾಪ್ ಆಯಿಲ್" ಎಂಬ ಘೋಷಣೆಯೊಂದಿಗೆ ಟಿ-ಶರ್ಟ್‌ಗಳನ್ನು ಧರಿಸಿರುವ ಇಬ್ಬರು ಮಹಿಳೆಯರು ಡಚ್ ಕಲಾವಿದನ ಪ್ರಸಿದ್ಧ ಪೇಂಟಿಂಗ್‌ನಲ್ಲಿ...

Video ಲಂಡನ್‌ನಲ್ಲಿ ವಾನ್​​ ಗೋ ಪೇಂಟಿಂಗ್​​ ಮೇಲೆ ಟೊಮ್ಯಾಟೊ ಸೂಪ್​​ ಎರಚಿ ಪ್ರತಿಭಟನೆ
ವಿನ್ಸೆಂಟ್ ವಾನ್ ಗೋ ಅವರ ಪ್ರಸಿದ್ಧ 'ಸನ್ ಫ್ಲವರ್ಸ್ 'ಪೇಂಟಿಗ್ ಮೇಲೆ ಟೊಮೆಟೊ ಸೂಪ್‌ನ ಎರಚಿರುವುದು
Updated By: ರಶ್ಮಿ ಕಲ್ಲಕಟ್ಟ

Updated on: Oct 14, 2022 | 9:36 PM

ಪಳೆಯುಳಿಕೆ ಇಂಧನ ಹೊರತೆಗೆಯುವುದನ್ನು ವಿರೋಧಿಸಿ ಹವಾಮಾನ ಕಾರ್ಯಕರ್ತರು ಲಂಡನ್‌ನ ನ್ಯಾಷನಲ್ ಗ್ಯಾಲರಿಯಲ್ಲಿ (London’s National Gallery) ವಿನ್ಸೆಂಟ್ ವಾನ್ ಗೋ (Vincent Van Gogh) ಅವರ ಪ್ರಸಿದ್ಧ ‘ಸನ್​​ಫ್ಲವರ್ಸ್ ‘ (Sunflowers) ಪೇಂಟಿಂಗ್  ಮೇಲೆ ಟೊಮೆಟೊ ಸೂಪ್‌ ಎರಚಿದ್ದಾರೆ. ‘ಜಸ್ಟ್ ಸ್ಟಾಪ್ ಆಯಿಲ್’ ಎಂದು ಕರೆದುಕೊಳ್ಳುವ ಗುಂಪು, ಬ್ರಿಟಿಷ್ ಸರ್ಕಾರವು ಹೊಸ ತೈಲ ಮತ್ತು ಅನಿಲ ಯೋಜನೆಗಳನ್ನು ನಿಲ್ಲಿಸಬೇಕೆಂದು ಬಯಸುತ್ತದೆ. ‘ಸನ್​​ಫ್ಲವರ್ಸ್’ ವಾನ್ ಗೋ ಅವರ ಅತ್ಯಂತ ಐಕಾನಿಕ್ ಕೃತಿಗಳಲ್ಲಿ ಒಂದಾಗಿದೆ. ಕ್ರಿಮಿನಲ್ ಹಾನಿ ಮತ್ತು ಅತಿಕ್ರಮಣದ ಶಂಕೆಯ ಮೇಲೆ ಲಂಡನ್‌ನ ಮೆಟ್ರೋಪಾಲಿಟನ್ ಪೋಲಿಸರು ಇಬ್ಬರನ್ನು ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, “ಜಸ್ಟ್ ಸ್ಟಾಪ್ ಆಯಿಲ್” ಎಂಬ ಘೋಷಣೆಯೊಂದಿಗೆ ಟಿ-ಶರ್ಟ್‌ಗಳನ್ನು ಧರಿಸಿರುವ ಇಬ್ಬರು ಮಹಿಳೆಯರು ಡಚ್ ಕಲಾವಿದನ ಪ್ರಸಿದ್ಧ ಪೇಂಟಿಂಗ್‌ನಲ್ಲಿ ಹೈಂಜ್ ಟೊಮೆಟೊ ಸೂಪ್‌ನ ಕ್ಯಾನ್‌ಗಳನ್ನು ಹಿಡಿದು ಸೂಪ್ ಎರಚುತ್ತಿರುವುದು ಕಾಣಿಸುತ್ತದೆ. ನಂತರ ಅವರು ತಮ್ಮ ಕೈಗಳನ್ನು ಗೋಡೆಗೆ ಅಂಟಿಸಿ ಕಲೆ ಅಥವಾ ಜೀವನ ಯಾವುದಕ್ಕೆ ಹೆಚ್ಚು ಬೆಲೆ ಎಂದು ಕೇಳಿದ್ದಾರೆ.

ಸೂಪ್ ಎರಚಿದ್ದನ್ನು ನೋಡಿದ ಕೆಲವು ಓ ದೇವರೇ ಎಂದು ಕೂಗಿದ್ದು,ಇನ್ನು ಕೆಲವರು ಸೆಕ್ಯೂರಿಟಿ ಎಂದು ಭದ್ರತಾ ಸಿಬ್ಬಂದಿಯನ್ನು ಕೂಗಿ ಕರೆದಿದ್ದಾರೆ.


“ನೀವು ವರ್ಣಚಿತ್ರದ ರಕ್ಷಣೆ ಅಥವಾ ನಮ್ಮ ಗ್ರಹ ಮತ್ತು ಜನರ ರಕ್ಷಣೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೀರಾ?”
“ಕಲೆಗಿಂತ ಜೀವನವನ್ನು ಆರಿಸಿಕೊಳ್ಳಿ” ಎಂಬುದು ಪ್ರತಿಭಟನೆಯ ಸಂದೇಶವಾಗಿದೆ ಎಂದು ಗುಂಪು ನಂತರ ಟ್ವೀಟ್ ಮಾಡಿದೆ. ಚಿತ್ರಕಲೆಯ ಅಂದಾಜು ಮೌಲ್ಯ 84.2 ಮಿಲಿಯನ್ ಡಾಲರ್ ಆಗಿದೆ.

ಜುಲೈನಲ್ಲಿ ಜಸ್ಟ್ ಸ್ಟಾಪ್ ಆಯಿಲ್ ಕಾರ್ಯಕರ್ತರು ಲಂಡನ್‌ನ ರಾಯಲ್ ಅಕಾಡೆಮಿ ಆಫ್ ಆರ್ಟ್ಸ್‌ನಲ್ಲಿ ಲಿಯೊನಾರ್ಡೊ ಡಾವಿಂಚಿ ಅವರ “ದಿ ಲಾಸ್ಟ್ ಸಪ್ಪರ್” ನ ಫ್ರೇಮ್‌ಗೆ ಮತ್ತು ನ್ಯಾಷನಲ್ ಗ್ಯಾಲರಿಯಲ್ಲಿ ಜಾನ್ ಕಾನ್‌ಸ್ಟೆಬಲ್‌ನ “ದಿ ಹೇ ವೈನ್” ಗೂ ಹಾನಿ ಮಾಡಿದ್ದರು.

ಕಳೆದ ಎರಡು ವಾರಗಳಲ್ಲಿ ಇತ್ತೀಚಿನ ಪ್ರತಿಭಟನೆಗಳಲ್ಲಿ ಕಾರ್ಯಕರ್ತರು ಲಂಡನ್‌ನಾದ್ಯಂತ ಸೇತುವೆಗಳು ಮತ್ತು ರಸ್ತೆಗಳನ್ನು ನಿರ್ಬಂಧಿಸಿದ್ದಾರೆ. ವಸ್ತುಸಂಗ್ರಹಾಲಯಗಳಲ್ಲಿನ ಕಲಾಕೃತಿಗಳನ್ನು ಗುರಿಯಾಗಿಟ್ಟುಕೊಂಡು ಈ ಗುಂಪು ತಮ್ಮ ಸಂದೇಶ ರವಾನಿಸಿತ್ತಿದ್ದು,ಇದಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ.

Published On - 9:27 pm, Fri, 14 October 22