ಕೊರೊನಾದಿಂದ ಮದುವೆಗಳಿಗೆ ಕಠಿಣ ಮಾರ್ಗಸೂಚಿ, ವಧುಗಳಿಂದ ಭಾರಿ ಪ್ರತಿಭಟನೆ

| Updated By:

Updated on: Jul 08, 2020 | 7:35 PM

ಪೆರು ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,09,27ಕ್ಕೆ ಏರಿಕೆಯಾಗಿದ್ರೆ, 10 ಸಾವಿರಕ್ಕೂ ಅಧಿಕ ಜನ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಪೆರುವಿನ ಲಿಮಾ ನಗರದಲ್ಲಿ ಹಾಸ್ಯಗಾರನೋರ್ವ ತನ್ನ ಜೋಕರ್ ಕೆಲಸ ಬಿಟ್ಟು, ಶವ ಪೆಟ್ಟಿಗೆ ನಿರ್ಮಾಣಕ್ಕೆ ಇಳಿದಿದ್ದಾನೆ. ನಿರ್ಮಾಣ ಹಂತದ ಕಟ್ಟಡದಲ್ಲೇ ಶವ ಪೆಟ್ಟಿಗೆಗಳನ್ನ ಮಾಡುತ್ತಿದ್ದಾರೆ. ಹಾಸ್ಯಗಾರನಿಗೆ ಪತ್ನಿ ಕೂಡ ಸಾಥ್ ಕೊಟ್ಟಿದ್ದಾರೆ. ಸೋಂಕಿತರ ಸಾವಿನ ಸಂಖ್ಯೆ ಏರಿಕೆಯಿಂದ ಶವಪೆಟ್ಟಿಗೆಯಲ್ಲಿ ಬದುಕು ನಡೆಸುತ್ತಿದ್ದಾರೆ. ವಧುಗಳ ಪ್ರತಿಭಟನೆ! ಇಟಲಿಯಲ್ಲಿ ಕೊರೊನಾ ಸೋಂಕು ಹೆಚ್ಚಾದ ಪರಿಣಾಮ, ಅದ್ಧೂರಿ ಮದುವೆಗಳಿಗೆ ಸರ್ಕಾರ ಬ್ರೇಕ್ […]

ಕೊರೊನಾದಿಂದ ಮದುವೆಗಳಿಗೆ ಕಠಿಣ ಮಾರ್ಗಸೂಚಿ, ವಧುಗಳಿಂದ ಭಾರಿ ಪ್ರತಿಭಟನೆ
Follow us on

ಪೆರು ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,09,27ಕ್ಕೆ ಏರಿಕೆಯಾಗಿದ್ರೆ, 10 ಸಾವಿರಕ್ಕೂ ಅಧಿಕ ಜನ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಪೆರುವಿನ ಲಿಮಾ ನಗರದಲ್ಲಿ ಹಾಸ್ಯಗಾರನೋರ್ವ ತನ್ನ ಜೋಕರ್ ಕೆಲಸ ಬಿಟ್ಟು, ಶವ ಪೆಟ್ಟಿಗೆ ನಿರ್ಮಾಣಕ್ಕೆ ಇಳಿದಿದ್ದಾನೆ. ನಿರ್ಮಾಣ ಹಂತದ ಕಟ್ಟಡದಲ್ಲೇ ಶವ ಪೆಟ್ಟಿಗೆಗಳನ್ನ ಮಾಡುತ್ತಿದ್ದಾರೆ. ಹಾಸ್ಯಗಾರನಿಗೆ ಪತ್ನಿ ಕೂಡ ಸಾಥ್ ಕೊಟ್ಟಿದ್ದಾರೆ. ಸೋಂಕಿತರ ಸಾವಿನ ಸಂಖ್ಯೆ ಏರಿಕೆಯಿಂದ ಶವಪೆಟ್ಟಿಗೆಯಲ್ಲಿ ಬದುಕು ನಡೆಸುತ್ತಿದ್ದಾರೆ.

ವಧುಗಳ ಪ್ರತಿಭಟನೆ!
ಇಟಲಿಯಲ್ಲಿ ಕೊರೊನಾ ಸೋಂಕು ಹೆಚ್ಚಾದ ಪರಿಣಾಮ, ಅದ್ಧೂರಿ ಮದುವೆಗಳಿಗೆ ಸರ್ಕಾರ ಬ್ರೇಕ್ ಹಾಕಿದೆ. ವೈರಸ್ ಹರಡುವ ಭೀತಿಯಿಂದಾಗಿ ಮದುವೆಗಳಿಗೆ ಕೆಲ ಮಾರ್ಗಸೂಚಿಗಳನ್ನ ವಿಧಿಸಿದೆ. ಇದಕ್ಕೆ ಮದುವೆ ನಿಶ್ಚಯಗೊಂಡಿರುವವರು ಆಕ್ರೋಶ ವ್ಯಕ್ತಪಡಿಸಿದ್ದು, ನವ ವಧುಗಳಂತೆ ಡ್ರೆಸ್​ ತೊಟ್ಟು, ರೋಮ್​ನಲ್ಲಿ ಪ್ರತಿಭಟನೆ ನಡೆಸಿದ್ರು. ಇಟಲಿಯಲ್ಲಿ 2,41,956 ಜನ ಸೋಂಕಿತರಿದ್ರೆ, 34 ಸಾವಿರ ಜನರು ವೈರಸ್​ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಕೊರೊನಾ ಕರಾಳ ರೂಪ
ಕೊರೊನಾ ವೈರಸ್​ನ ಭಯಾನಕ ರೂಪಕ್ಕೆ ವಿಶ್ವವೇ ಮಕಾಡೆ ಮಲಗಿದೆ. ಸೋಂಕಿನ ನಾಗಾಲೋಟ ನಿಲ್ಲಿಸದ ವೈರಸ್​ನಿಂದಾಗಿ ಜಗತ್ತಿನಲ್ಲಿ ಈವರೆಗೂ ಸೋಂಕಿತರ ಸಂಖ್ಯೆ 1,19,50,044ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ 5,46,622 ಮಂದಿ ಪ್ರಾಣ ಕಳೆದುಕೊಂಡಿದ್ರೆ, ಸದ್ಯ4,50,8,132 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 58 ಸಾವಿರ ಜನರ ಪರಿಸ್ಥಿತಿ ಗಂಭೀರವಾಗಿದೆ.

WHOದಿಂದ ಹೊರ ಬಂದ ‘ದೊಡ್ಡಣ್ಣ’
ಕೊರೊನಾ ವೈರಸ್ ಬಂದಾಗಿನಿಂದ ಚೀನಾ ಮತ್ತು ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಅಮೆರಿಕ, ಈಗ ಕಠಿಣ ನಿರ್ಧಾರವನ್ನೇ ತೆಗೆದುಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಅನುದಾನವಕ್ಕ ಕಡಿತಗೊಳಿಸಿದ್ದ ದೊಡ್ಡಣ್ಣ, ಈಗ WHOಯಿಂದಲೇ ಅಧಿಕೃತವಾಗಿ ಹೊರ ಬಂದಿದೆ. ಈ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಚೀನಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ವಿಶ್ವ ಆರೋಗ್ಯ ಸಂಸ್ಥೆ ವೈರಸ್ ಬಗ್ಗೆ ಸುಳ್ಳು ಹೇಳಿತ್ತು ಅನ್ನೋದು ಅಮೆರಿಕದ ಆರೋಪ.

ವಿಶ್ವ ಆರೋಗ್ಯ ಸಂಸ್ಥೆ ತಬ್ಬಿಬ್ಬು
ಜಗತ್ತಿನಲ್ಲಿ ಕೊರೊನಾ ವೈರಸ್​ ವ್ಯಾಪಿಸುತ್ತಿರುವುದನ್ನ ಕಂಡು ವಿಶ್ವ ಆರೋಗ್ಯ ಸಂಸ್ಥೆಯೇ ಬೆಚ್ಚಿಬಿದ್ದಿದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ದಿನವೊಂದಕ್ಕೆ ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷ ಇದ್ರೆ, ಇತ್ತೀಚೆಗೆ 2 ಲಕ್ಷ ದಾಟುತ್ತಿದೆ. ಸಾವಿನ ಸಂಖ್ಯೆ ಕೂಡ ಏರುತ್ತಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಅಂತಾ ವಿಶ್ವ ಆರೋಗ್ಯ ಸಂಸ್ಥೆಯ ರಿಯಾನ್ ಎಚ್ಚರಿಕೆ ನೀಡಿದ್ದಾರೆ.

ಬ್ರೆಜಿಲ್ ಅಧ್ಯಕ್ಷನಿಗೂ ಸೋಂಕು!
ಬ್ರೆಜಿಲ್​ನಲ್ಲಿ ಕೊರೊನಾ ಸೋಂಕಿನ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಅಧ್ಯಕ್ಷನನ್ನೂ ಬಿಡದೇ ವಕ್ಕರಿಸಿಕೊಂಡಿದೆ. ಮಾಸ್ಕ್ ಹಾಕದೇ ಓಡಾಡುತ್ತಿದ್ದ ಬೊಲ್ಸೊನಾರೋಗೆ ಅಲ್ಲಿನ ಸುಪ್ರೀಂಕೋರ್ಟ್​ ಕೂಡ ಮಾಸ್ಕ್ ಧರಿಸುವಂತೆ ಎಚ್ಚರಿಕೆ ಕೊಟ್ಟಿತ್ತು. ಆದ್ರೀಗ, ಬೊಲ್ಸೊನಾರೋಗೂ ಕೊರೊನಾ ಪಾಸಿಟಿವ್ ಬಂದಿದೆ. ಮುನ್ನೆಚ್ಚರಿಕೆಯಿಂದ ಮಲೇರಿಯಾ ಔಷಧಿ HCQ ಮಾತ್ರೆಯನ್ನ ತೆಗೆದುಕೊಳ್ತಿದ್ದಾರೆ.

ಲಾಕ್​ಡೌನ್ ‘ಕಿಚ್ಚು’
ಆಸ್ಟ್ರೇಲಿಯಾದಲ್ಲಿ ಕೊರೊನಾ ವೈರಸ್​ನಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ 18,365ಕ್ಕೆ ಏರಿಕೆಯಾಗಿದ್ರೆ, ಸೋಂಕಿನಿಂದಾಗಿ 706 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸೋಂಕಿತರು ಹೆಚ್ಚಾಗುತ್ತಿರೋದ್ರಿಂದ ಮೆಲ್ಬೋರ್ನ್​ ನಗರದಲ್ಲಿ 5 ವಾರಗಳ ಕಾಲ ಲಾಕ್​ಡೌನ್ ವಿಧಿಸಲಾಗಿದೆ. ಆದ್ರೆ, ಅಪಾರ್ಟ್​ಮೆಂಟ್​ನಲ್ಲಿರುವವರನ್ನ 5 ದಿನಗಳ ವರೆಗೂ ಮನೆ ಖಾಲಿ ಮಾಡಿ ಅಂತಾ ಪೊಲೀಸರು ಒತ್ತಾಯ ಮಾಡಿದ್ದಾರೆ. ಇದಕ್ಕೆ ಕೆಲ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ರು.

ಬಾಂಗ್ಲಾ ವಿಮಾನಗಳಿಗೆ ನಿರ್ಬಂಧ
ಕೊರೊನಾ ಸೋಂಕಿನಿಂದಾಗಿ ಇಟಲಿ ತತ್ತರಿಸಿ ಹೋಗಿದೆ. ಇದ್ರ ಬೆನ್ನಲ್ಲೇ ಅನ್ಯ ದೇಶಗಳಿಂದ ಬರುವ ಪ್ರವಾಸಿಗರಿಗೆ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಆದ್ರೆ, ಬಾಂಗ್ಲಾದೇಶದಿಂದ ಬರುವ ಪ್ರಯಾಣಿಕರಿಗೆ ಮತ್ತು ಬಾಂಗ್ಲಾ ವಿಮಾನಗಳಿಗೆ ಒಂದು ವಾರಗಳ ಕಾಲ ಇಟಲಿ ಸರ್ಕಾರ ನಿರ್ಬಂಧ ವಿಧಿಸಿದೆ. ಡಾಕಾದಿಂದ ಬಂದ 225 ಪ್ರಯಾಣಿಕರ ಪೈಕಿ 21 ಜನರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದರಿಂದಾಗಿ, ಇಟಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಮಧ್ಯಮ ಕುಟುಂಬಕ್ಕೆ ಕುತ್ತು
ಕೊರೊನಾ ವೈರಸ್​ ಸೋಂಕಿನ ಅಬ್ಬರದಿಂದಾಗಿ ಚಿಲಿ ದೇಶ ತತ್ತರಿಸಿ ಹೋಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 2,99,000 ಸೋಂಕಿತರಿದ್ರೆ, ಸೋಂಕಿನಿಂದಾಗಿ 6,384 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೊರೊನಾ ಲಾಕ್​ಡೌನ್​ನಿಂದಾಗಿ ಮಧ್ಯಮ ಕುಟುಂಬದವರಂತೂ ಆದಾಯವಿಲ್ಲದೇ ನೆಲಕಚ್ಚಿ ಹೋಗಿದ್ದಾರೆ. ಇವರಿಗೆ ಅನುಕೂಲವಾಗುವ ಸಲುವಾಗಿ ಚಿಲಿ ಅಧ್ಯಕ್ಷ ವಿಶೇಷ ಪ್ಯಾಕೇಜ್ ಘೊಷಣೆ ಮಾಡಿದ್ದಾರೆ.

Published On - 3:09 pm, Wed, 8 July 20