Top News: ನಾಳೆಯಿಂದ ಚೀನಾದಲ್ಲಿ ಸಿನಿಮಾ ಮಾಲ್​ಗಳು ಓಪನ್

|

Updated on: Jul 19, 2020 | 3:05 PM

ಚೀನದಲ್ಲಿ ಕೊರೊನಾ ಸೋಂಕಿನ ಅಬ್ಬರ ಕೊಂಚ ತಗ್ಗಿದ್ದು, ಇಡೀ ದೇಶ ಸಹಜ ಸ್ಥಿತಿಗೆ ಬರ್ತಿದೆ. ಆದ್ರೆ, ಬೀಜಿಂಗ್ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಮಾತ್ರ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಮಾತ್ರ ಸೋಂಕಿತರು ಪತ್ತೆಯಾಗ್ತಿದ್ದಾರೆ. ಹೀಗಾಗಿ, ಕೊರೊನಾ ಆರ್ಭಟ ಕಡಿಮೆ ಇರುವ ಪ್ರದೇಶಗಳಲ್ಲಿ ಸಿನಿಮಾ ಮಾಲ್​ಗಳನ್ನ ತೆರೆಯುವಂತೆ ಸರ್ಕಾರ ಸೂಚಿಸಿದೆ. ಆದ್ರೆ, ಶೇ.30 ರಷ್ಟು ಪ್ರಮಾಣದಲ್ಲಿ ಮಾತ್ರ ಪ್ರೇಕ್ಷಕರಿಗೆ ಅವಕಾಶ ನೀಡಲು ಹೇಳಿದೆ. ಕೊರೊನಾ ‘ಕಬಂಧಬಾಹು’ ಕೊರೊನಾ ವೈರಸ್ ವಿಶ್ವದಾದ್ಯಂತ ತನ್ನ ಕಬಂಧಬಾಹುವನ್ನ ಚಾಚುತ್ತಲೇ ಇದ್ದು, ಸೋಂಕಿತರ ಸಂಖ್ಯೆ 1,44,25,865ಕ್ಕೆ ಏರಿಕೆಯಾಗಿದೆ. […]

Top News: ನಾಳೆಯಿಂದ ಚೀನಾದಲ್ಲಿ ಸಿನಿಮಾ ಮಾಲ್​ಗಳು ಓಪನ್
Follow us on

ಚೀನದಲ್ಲಿ ಕೊರೊನಾ ಸೋಂಕಿನ ಅಬ್ಬರ ಕೊಂಚ ತಗ್ಗಿದ್ದು, ಇಡೀ ದೇಶ ಸಹಜ ಸ್ಥಿತಿಗೆ ಬರ್ತಿದೆ. ಆದ್ರೆ, ಬೀಜಿಂಗ್ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಮಾತ್ರ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಮಾತ್ರ ಸೋಂಕಿತರು ಪತ್ತೆಯಾಗ್ತಿದ್ದಾರೆ. ಹೀಗಾಗಿ, ಕೊರೊನಾ ಆರ್ಭಟ ಕಡಿಮೆ ಇರುವ ಪ್ರದೇಶಗಳಲ್ಲಿ ಸಿನಿಮಾ ಮಾಲ್​ಗಳನ್ನ ತೆರೆಯುವಂತೆ ಸರ್ಕಾರ ಸೂಚಿಸಿದೆ. ಆದ್ರೆ, ಶೇ.30 ರಷ್ಟು ಪ್ರಮಾಣದಲ್ಲಿ ಮಾತ್ರ ಪ್ರೇಕ್ಷಕರಿಗೆ ಅವಕಾಶ ನೀಡಲು ಹೇಳಿದೆ.

ಕೊರೊನಾ ‘ಕಬಂಧಬಾಹು’
ಕೊರೊನಾ ವೈರಸ್ ವಿಶ್ವದಾದ್ಯಂತ ತನ್ನ ಕಬಂಧಬಾಹುವನ್ನ ಚಾಚುತ್ತಲೇ ಇದ್ದು, ಸೋಂಕಿತರ ಸಂಖ್ಯೆ 1,44,25,865ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ 6,04,917ಜನರು ಪ್ರಾಣ ಕಳೆದುಕೊಂಡಿದ್ದಾರೆ. ವೈರಸ್​ನಿಂದಾಗಿ 86,12,192 ಜನರು ಗುಣಮುಖರಾಗಿದ್ರೆ, 52,08,756 ಸೋಂಕಿನಿಂದ ನರಳಾಡುತ್ತಿದ್ದಾರೆ. 59,910 ಜನರ ಸ್ಥಿತಿ ಚಿಂತಾಜನಕವಾಗಿದೆ.

ಅಮೆರಿಕದಲ್ಲಿ ಸೋಂಕಿನ ಸರಮಾಲೆ
ಕೊರೊನಾ ವೈರಸ್​ನ ಹಾಟ್​ಸ್ಪಾಟ್ ಆಗಿರೋ ಅಮೆರಿಕದಲ್ಲಿ ಸೋಂಕಿನ ಸರಮಾಲೆಗೆ ಎಲ್ಲೆಯೇ ಇಲ್ಲದಂತಾಗಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ 60,207 ಜನರಿಗೆ ಸೋಂಕು ವಕ್ಕರಿಸಿಕೊಂಡಿದೆ. ದೇಶದಲ್ಲಿ ಈವರೆಗೂ 38,33,271 ಜನರಿಗೆ ಕೊರೊನಾ ಸೋಂಕು ಹೊಕ್ಕಿದ್ರೆ, ವೈರಸ್​ನಿಂದಾಗಿ 1,42,877ಕ್ಕೂ ಹೆಚ್ಚು ಜನರು ಉಸಿರು ಚೆಲ್ಲಿದ್ದಾರೆ. ಪ್ರಸ್ತುತ 17, 75,219 ಸೋಂಕಿತರು ಕೊರೊನಾ ವಿರುದ್ಧ ಹೋರಾಟ ನಡೆಸಿದ್ದಾರೆ.

ಕೊರೊನಾದಿಂದ ಆರ್ಥಿಕತೆಯ ಕೊಲೆ!
ಬ್ರೆಜಿಲ್​ನಲ್ಲಿ ಕೊರೊನಾ ವೈರಸ್​ ನಾಗಾಲೋಟಕ್ಕೆ ಇಡೀ ದೇಶಕ್ಕೇ ಬೆಚ್ಚಿಬಿದ್ದಿದ್ದು, ಸೋಂಕಿತರ ಸಂಖ್ಯೆ 20,75,246ಕ್ಕೆ ಏರಿಕೆಯಾಗಿದೆ. ವೈರಸ್​ನಿಂದಾಗಿ 26,828 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಬೊಲ್ಸೊನಾರೋ ಕೂಡ ವೈರಸ್​ನಿಂದ ನರಳುತ್ತಿದ್ದು, ಕೊರೊನಾದಿಂದಾಗಿ ದೇಶದ ಆರ್ಥಿಕ ವ್ಯವಸ್ಥೆಯ ಕೊಲೆಯಾಗಿದೆ ಅಂತಾ ಹೇಳಿದ್ದಾರೆ. ಹಲವು ನಿರ್ಬಂಧಗಳನ್ನ ವಿಧಿಸಿದ್ದು ಆರ್ಥಿಕತೆಗೆ ಹಿನ್ನಡೆಯಾಗಿದೆ.

ನವಜಾತ ಶಿಶು ಗುಣಮುಖ
ಪೆರುವಿನಲ್ಲಿ ಕೊರೊನಾ ವೈರಸ್​ ಸೋಂಕಿತರ ಸಂಖ್ಯೆ 3,49,500ಕ್ಕೆ ಏರಿಕೆಯಾಗಿದ್ದು, 12,988ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದ್ರ ಮಧ್ಯೆ ಅಚ್ಚರಿಯ ಬೆಳವಣಿಗೆ ಎಂಬಂತೆ ನವಜಾತ ಶಿಶುವೊಂದು ವೈರಸ್ ವಿರುದ್ಧ ಹೋರಾಡಿ ಗೆದ್ದಿದೆ. 27 ವರ್ಷದ ಲಿಸ್ಸಿ ಯಾಯಾ ತನ್ನ ಐಸಿಯುವಿನಲ್ಲಿದ್ದ ಮಗುವನ್ನ ಭೇಟಿ ಮಾಡಿ ಖುಷಿ ಪಟ್ಟಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಮಾಸ್ಕ್ ಕಡ್ಡಾಯ
ಕಾಂಗರೂ ನಾಡು ಆಸ್ಟ್ರೇಲಿಯಾದಲ್ಲಿ ಕೊರೊನಾ ವೈರಸ್​ನ ಅಟ್ಟಹಾಸ ನಿಂತೇ ಇಲ್ಲ. ದೇಶದಲ್ಲಿ 11,802 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ್ರೆ, 122 ಜನರು ಪ್ರಾಣ ಕಳೆದುಕೊಂಡಿದ್ದಾರೆ. ದಿನೇ ದಿನೆ ಸೋಂಕು ಹೆಚ್ಚಾಗುತ್ತಿರೋದ್ರಿಂದ ವೈರಸ್ ನಿಗ್ರಹಿಸಲು ಮುಂದಾಗಿರುವ ಆಸ್ಟ್ರೇಲಿಯಾ ಸರ್ಕಾರ, ದೇಶದಾದ್ಯಂತ ಸಾರ್ವಜನಿಕರು ಮಾಸ್ಕ್ ಧರಿಸೋದನ್ನ ಕಡ್ಡಾಯಗೊಳಿಸಿದೆ. ವಿಕ್ಟೋರಿಯಾ ರಾಜ್ಯದಲ್ಲೇ 3 ಸಾವಿರ ಸೋಂಕಿತರಿದ್ದು, ಆತಂಕ ಹೆಚ್ಚಿಸಿದೆ.

ಟ್ರಂಪ್ ಬೃಹತ್ ಱಲಿ ಸದ್ಯಕ್ಕಿಲ್ಲ
ಅಮೆರಿಕದಲ್ಲಿ ಕೊರೊನಾ ವೈರಸ್​ನ ಅಟ್ಟಹಾಸ ಇದ್ದರೂ ಸಹ, ಮುಂಬರುವ ಅಧ್ಯಕ್ಷೀಯ ಚುನಾವಣೆಗಾಗಿ ಟ್ರಂಪ್ ಱಲಿಗಳನ್ನ ನಡೆಸುತ್ತಿದ್ದಾರೆ. ಆದ್ರೆ ಕೆಲ ಱಲಿ ವೇಳೆ ಕೊರೊನಾ ಸೋಂಕು ಹರಡಿರೋದ್ರಿಂದ, ಮುಂದಿನ ದಿನಗಳಲ್ಲಿ ವೈಯಕ್ತಿಕ ಱಲಿಗಳನ್ನ ನಡೆಸುವುದಿಲ್ಲ ಅಂತಾ ಟ್ರಂಪ್ ಹೇಳಿದ್ದಾರೆ. ಸದ್ಯಕ್ಕೆ ಟೆಲಿಪೋನಿಕ್ ಱಲಿಗಳನ್ನ ಮಾತ್ರ ಮಾಡೋದಾಗಿ ತನ್ನ ಬೆಂಬಲಿಗರಿಗೆ ಟ್ರಂಪ್ ತಿಳಿಸಿದ್ದಾರೆ.

ಮೆಕ್ಸಿಕೋದಲ್ಲಿ ನಿಲ್ಲದ ತಲ್ಲಣ
ಮೆಕ್ಸಿಕೋ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, 3,38,913 ಜನರಿಗೆ ಕೊರೊನಾ ಅಟ್ಯಾಕ್ ಆಗಿದೆ. ವೈರಸ್​ನಿಂದ ಈವರೆಗೂ 38,888 ಜನರ ಉಸಿರು ನಿಂತಿದೆ. ಕೇವಲ 24 ಗಂಟೆಗಳ ಅವಧಿಯಲ್ಲೇ 7,615 ಜನರು ಪ್ರಾಣ ಕಳೆದುಕೊಂಡಿದ್ದರೆ ಒಂದೇ ದಿನ 578 ಜನರು ಸಾವನ್ನಪ್ಪಿದ್ದಾರೆ. ಇನ್ನೂ 87,019 ಜನರು ಕೊರೊನಾ ವಿರುದ್ಧ ಹೋರಾಟ ನಡೆಸಿದ್ದಾರೆ.

ಪಾಕ್​ನಲ್ಲಿ ವೈರಸ್ ವೈರತ್ವ
ಪಾಕಿಸ್ತಾನದಲ್ಲೂ ಕ್ರೂರಿ ಕೊರೊನಾ ವೈರಸ್ ಅಟ್ಯಾಕ್ ಮೇಲೆ ಅಟ್ಯಾಕ್ ಮಾಡ್ತಿದ್ದು, ಸೋಂಕಿತರ ಸಂಖ್ಯೆ 2,61,917ಕ್ಕೆ ಏರಿಕೆಯಾಗಿದೆ. 1,98,509 ಜನರು ಸೋಂಕಿನ ವಿರುದ್ಧ ಹೋರಾಡಿ ಗುಣಮುಖರಾಗಿದ್ರೆ, 5,522 ಜನರು ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.

Published On - 3:03 pm, Sun, 19 July 20