ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ವಿಷಕಾರಿ ಅನಿಲ ಸೋರಿಕೆ ಉಂಟಾಗಿ ಮಕ್ಕಳು ಸೇರಿ 16 ಮಂದಿ ಮೃತಪಟ್ಟಿದ್ದಾರೆ. ಅಕ್ರಮ ಗಣಿಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿರುವ ಜೋಹಾನ್ಸ್‌ಬರ್ಗ್‌ನ ಪೂರ್ವದಲ್ಲಿರುವ ಬೋಕ್ಸ್‌ಬರ್ಗ್ ಜಿಲ್ಲೆಯ ಬಳಿಯ ಏಂಜೆಲೋ ಟೌನ್‌ಶಿಪ್‌ನಲ್ಲಿ ಬುಧವಾರ ರಾತ್ರಿ ಅಪಘಾತ ಸಂಭವಿಸಿದೆ. ಅನಿಲ ಸೋರಿಕೆಯಿಂದ ಸಾವನ್ನಪ್ಪಿದವರಲ್ಲಿ ಐವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ.
ವೈದ್ಯಾಧಿಕಾರಿಗಳ ನೆರವಿನಿಂದ ಕೆಲವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಾಗಿರುವ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಅಕ್ರಮ ಗಣಿಗಾರಿಕೆ ಚಟುವಟಿಕೆಗಳ ಭಾಗವಾಗಿ ಅನಿಲವನ್ನು ಬಳಸಲಾಗುತ್ತಿದೆ ಎಂದು ಪ್ರಾಥಮಿಕ ಮಾಹಿತಿಯು ಸೂಚಿಸಿದೆ.
ಮತ್ತಷ್ಟು ಓದಿ: ಮೈಸೂರು: ವಾಟರ್ ಫಿಲ್ಟರ್ ಹೌಸ್ನಲ್ಲಿ ಅನಿಲ ಸೋರಿಕೆ; ವಿಷ ಅನಿಲ ಸೇವಿಸಿ ಐವರು ಅಸ್ವಸ್ಥ
ದಕ್ಷಿಣ ಆಫ್ರಿಕಾವು ಸಾವಿರಾರು ಅಕ್ರಮ ಗಣಿಗಾರಿಕೆಗೆ ನೆಲೆಯಾಗಿದೆ, ನಿರುದ್ಯೋಗ ದರವು 32 ಪ್ರತಿಶತಕ್ಕಿಂತ ಹೆಚ್ಚಿದೆ . ಇದೇ ಪ್ರದೇಶದಲ್ಲಿ ಕ್ರಿಸ್ಮಸ್ ಹಿಂದಿನ ದಿನ ಬೋಕ್ಸ್ಬರ್ಗ್ನಲ್ಲಿ ದ್ರವ ಪೆಟ್ರೋಲಿಯಂ ಸಾಗಿಸುತ್ತಿದ್ದ ಟ್ರಕ್ ಸೇತುವೆಯ ಕೆಳಗೆ ಸಿಲುಕಿ ಸ್ಫೋಟಗೊಂಡು 41 ಮಂದಿ ಮೃತಪಟ್ಟಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ