ಅಮೆರಿಕ ಅಧ್ಯಕ್ಷನ ವಿರುದ್ಧ ಮಹಾಭಿಯೋಗ, ಪದಚ್ಯುತಿ ಆಗ್ತಾರಾ ಟ್ರಂಪ್?
ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕ ಜಗತ್ತಿನ ಪವರ್ಫುಲ್ ರಾಷ್ಟ್ರ. ಎಷ್ಟರ ಮಟ್ಟಿಗೆ ಅಂದ್ರೆ ಅಮೆರಿಕ ಅಧ್ಯಕ್ಷರು ಮನಸು ಮಾಡಿದ್ರೆ ಏನೂ ಬೇಕಾದ್ರೂ ಆಗುತ್ತೆ ಅನ್ನೋ ಮಾತಿದೆ. ಆದ್ರೀಗ ಇಂಥಾ ಅಮೆರಿಕ ಅಧ್ಯಕ್ಷರಿಗೆ ಸಂಕಷ್ಟ ಎದುರಾಗಿದೆ. ಅಧ್ಯಕ್ಷ ಸ್ಥಾನದಿಂದ ಡೊನಾಲ್ಡ್ ಟ್ರಂಪ್ ಪದಚ್ಯುತಿ ಆಗ್ತಾರಾ ಅನ್ನೋ ಅನುಮಾನ ಎದ್ದಿದೆ. ಅಮೆರಿಕ ಅಧ್ಯಕ್ಷರ ವಿರುದ್ಧ ಮಹಾಭಿಯೋಗ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಹಾಭಿಯೋಗ ಅಥವಾ ವಾಗ್ದಂಡನೆ ಪ್ರಕ್ರಿಯೆ ನಡೀತಿದೆ. ಇದಕ್ಕೆ ಕಾರಣ ತಮ್ಮ ರಾಜಕೀಯ ಎದುರಾಳಿ ಡೆಮಾಕ್ರಟಿಕ್ ಪಕ್ಷದ […]
ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕ ಜಗತ್ತಿನ ಪವರ್ಫುಲ್ ರಾಷ್ಟ್ರ. ಎಷ್ಟರ ಮಟ್ಟಿಗೆ ಅಂದ್ರೆ ಅಮೆರಿಕ ಅಧ್ಯಕ್ಷರು ಮನಸು ಮಾಡಿದ್ರೆ ಏನೂ ಬೇಕಾದ್ರೂ ಆಗುತ್ತೆ ಅನ್ನೋ ಮಾತಿದೆ. ಆದ್ರೀಗ ಇಂಥಾ ಅಮೆರಿಕ ಅಧ್ಯಕ್ಷರಿಗೆ ಸಂಕಷ್ಟ ಎದುರಾಗಿದೆ. ಅಧ್ಯಕ್ಷ ಸ್ಥಾನದಿಂದ ಡೊನಾಲ್ಡ್ ಟ್ರಂಪ್ ಪದಚ್ಯುತಿ ಆಗ್ತಾರಾ ಅನ್ನೋ ಅನುಮಾನ ಎದ್ದಿದೆ.
ಅಮೆರಿಕ ಅಧ್ಯಕ್ಷರ ವಿರುದ್ಧ ಮಹಾಭಿಯೋಗ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಹಾಭಿಯೋಗ ಅಥವಾ ವಾಗ್ದಂಡನೆ ಪ್ರಕ್ರಿಯೆ ನಡೀತಿದೆ. ಇದಕ್ಕೆ ಕಾರಣ ತಮ್ಮ ರಾಜಕೀಯ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ವಿರುದ್ಧ ತನಿಖೆ ನಡೆಸುವಂತೆ ಉಕ್ರೇನ್ ದೇಶಕ್ಕೆ ಹೇಳಿದ್ದು. ಅಲ್ಲದೆ ಅಮೆರಿಕ ಕಾಂಗ್ರೆಸ್ನ ಕಾರ್ಯನಿರ್ವಹಣೆಗೂ ಅಡ್ಡಿಪಡಿಸಿದ್ದು. ಒಂದ್ಕಡೆ ಅಧಿಕಾರ ದುರುಪಯೋಗ.. ಮತ್ತೊಂದ್ಕಡೆ ಶಾಸಕಾಂಗ ಸಭೆಗೆ ತಡೆಯೊಡ್ಡಿದ ಆರೋಪದಲ್ಲಿ ಟ್ರಂಪ್ ವಿರುದ್ಧ ಡೆಮಾಕ್ರೆಟಿಕ್ ಪಕ್ಷದ ಸದಸ್ಯರು ವಾಗ್ದಂಡನೆ ನಿರ್ಣಯ ಮಂಡಿಸಿದ್ದರು. ವಾಗ್ದಂಡನೆ ಪ್ರಕ್ರಿಯೆ ಮೇಲೆ ಇಂದು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೆಟೀವ್ ವೋಟಿಂಗ್ ನಡೆಸೋ ಸಾಧ್ಯತೆ ಇದೆ.
ಟ್ರಂಪ್ ಮುಂದಿನ ಹಾದಿ ಹೇಗಿದೆ..? ಒಂದ್ವೇಳೆ ಹೌಸ್ ಆಫ್ ರೆಪ್ರೆಸೆಂಟೇಟಿವ್ನಲ್ಲಿ ಟ್ರಂಪ್ ವಿರುದ್ಧದ ಆರೋಪಗಳಿಗೆ ಒಪ್ಪಿಗೆ ಸಿಕ್ಕರೆ, ಟ್ರಂಪ್ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆಯನ್ನ ಸೆನೆಟ್‌ಗೆ ಕಳಿಸಲಾಗುತ್ತೆ. ಸೆನೆಟ್ನಲ್ಲಿ ಟ್ರಂಪ್ರನ್ನ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಬೇಕೆ ಅನ್ನೋ ಬಗ್ಗೆ ವಿಚಾರಣೆ ನಡೆಯಲಿದೆ. ಹೌಸ್ ಆಫ್ ರೆಪ್ರೆಸೆಂಟೆೇಟಿವ್ನಲ್ಲಿ ವಿರೋಧ ಪಕ್ಷವಾದ ಡೆಮಾಕ್ರಟಿಕ್ ಪಾರ್ಟಿಗೆ ಬಹುಮತ ಇದೆ. ಹೀಗಾಗೇ ಹೌಸ್ ಆಫ್ ರೆಪ್ರೆಸೆಂಟೇಟಿವ್ನಲ್ಲಿ ವಿರೋಧ ಪಕ್ಷಗಳಿಗೆ ಗೆಲುವು ಸಿಗಲಿದೆ.
ಆದ್ರೆ ಸೆನೆಟ್ನಲ್ಲಿ ಡೆಮಾಕ್ರಟಿಕ್ ಪಾರ್ಟಿಗೆ ಬಹುಮತ ಇಲ್ಲ. ಸೆನೆಟ್ನಲ್ಲಿ ಟ್ರಂಪ್ ಪಕ್ಷವಾದ ರಿಪಬ್ಲಿಕನ್ ಪಾರ್ಟಿಗೆ ಬಹುಮತ ಇದೆ. ಅಂದ್ಹಾಗೆ ಸೆನೆಟ್ನ ಒಟ್ಟು 100 ಸದಸ್ಯರ ಪೈಕಿ 53 ಮಂದಿ ರಿಪಬ್ಲಿಕನ್ ಪಕ್ಷದವರಾಗಿದ್ದಾರೆ. ಅಧ್ಯಕ್ಷರನ್ನ ಪದಚ್ಯುತಿಗೊಳಿಸಲು ಸೆನೆಟ್ನಲ್ಲಿ ಹಾಜರಿರುವ ಸದಸ್ಯರ ಪೈಕಿ ಮೂರನೇ ಎರಡರಷ್ಟು ಸದಸ್ಯರ ಬೆಂಬಲ ಬೇಕು. ಈಗಾಗಲೇ ಸಂಸತ್ತಿನ ನ್ಯಾಯಿಕ ಸಮಿತಿ ಟ್ರಂಪ್ ವಿರುದ್ಧದ 2 ಆರೋಪಗಳನ್ನ ಅಂತಿಮಗೊಳಿಸಿದೆ.
ಇನ್ನು ಅಮೆರಿಕದಲ್ಲಿ ಇದೇ ಮೊದಲ ಭಾರಿಗೆ ಅಧ್ಯಕ್ಷರ ಪದಚ್ಯುತಿಗಾಗಿ ಮಹಾಭಿಯೋಗ ಪ್ರಕ್ರಿಯೆ ನಡೆಯುತ್ತಿಲ್ಲ. ಈ ಹಿಂದೆ 1974ರಲ್ಲಿ ರಿಚರ್ಡ್ ನಿಕ್ಸನ್ ವಿರುದ್ಧ ಮಹಾಭಿಯೋಗ ಪ್ರಕ್ರಿಯೆ ನಡೆಸುವ ಮುನ್ನವೇ ಅವರು ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ರು. ಇನ್ನು 1868ರಲ್ಲಿ ಆಂಡ್ರ್ಯೂ ಜಾನ್ಸನ್ ವಿರುದ್ಧ ಮತ್ತು 1998ರಲ್ಲಿ ಬಿಲ್ ಕ್ಲಿಂಟನ್ ವಿರುದ್ಧ ಮಹಾಭಿಯೋಗ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ ಎರಡು ಬಾರಿಯೂ ಅಧ್ಯಕ್ಷರ ಪದಚ್ಯುತಿಗೆ ಸೆನೆಟ್ನ ಒಪ್ಪಿಗೆ ಸಿಕ್ಕಿರಲಿಲ್ಲ.
ಒಟ್ನಲ್ಲಿ, ಅಧಿಕಾರ ದುರುಪಯೋಗ ಹಾಗೂ ಶಾಸಕಾಂಗ ಸಭೆಗೆ ತಡೆಯೊಡ್ಡಿದ ಆರೋಪಗಳು ಟ್ರಂಪ್ಗೆ ಸಂಕಷ್ಟ ತಂದೊಡ್ಡುವ ಲಕ್ಷಣಗಳು ಕಾಣುತ್ತಿವೆ. ಆದ್ರೆ ಸೆನೆಟ್ನಲ್ಲಿ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಬಹುಮತ ಹೊಂದಿರುವುದು ಗಮನಾರ್ಹ. ಹೀಗಾಗಿ ಮುಂದಿನ ಬೆಳವಣಿಗೆ ಸಾಕಷ್ಟು ಕುತೂಹಲ ಕೆರಳಿಸಿದೆ.
Published On - 8:08 am, Wed, 18 December 19