AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಂಪ್ ಸರ್ಕಾರದಿಂದ 100 ಬಿಲಿಯನ್ ಡಾಲರ್ ಸುಂಕ ಮರುಪಾವತಿ: ಭಾರತೀಯ ಕಂಪನಿಗಳಿಗೂ ಲಾಭ

ಅಮೆರಿಕ ಸುಪ್ರೀಂ ಕೋರ್ಟ್ ಟ್ರಂಪ್ ವಿಧಿಸಿದ್ದ ಆಮದು ಸುಂಕಗಳನ್ನು ರದ್ದುಗೊಳಿಸಿದ್ದರಿಂದ ಯುಎಸ್ ಸರ್ಕಾರವು ಕಂಪನಿಗಳಿಗೆ 100 ಶತಕೋಟಿ ಡಾಲರ್ ಮರುಪಾವತಿ ಮಾಡುತ್ತಿದೆ. ಆಪಲ್, ಅಮೆಜಾನ್‌ಗೆ ಬಿಲಿಯನ್‌ಗಟ್ಟಲೆ ಲಾಭವಾಗಿದೆ. ಗ್ಲೋಬಲ್ ಟ್ರೇಡ್ ರಿಸರ್ಚ್ ಪ್ರಕಾರ, ಭಾರತದಿಂದ ರಫ್ತಾದ 10-12 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳಿಗೂ ಇದು ಅನ್ವಯಿಸಲಿದ್ದು, ಭಾರತೀಯ ಕಂಪನಿಗಳಾದ CEAT, ಬಾಲಕೃಷ್ಣ ಇಂಡಸ್ಟ್ರೀಸ್‌ಗೆ ಸುಂಕ ಮರುಪಾವತಿ ಸಿಗುವ ನಿರೀಕ್ಷೆಯಿದೆ.

ಟ್ರಂಪ್ ಸರ್ಕಾರದಿಂದ 100 ಬಿಲಿಯನ್ ಡಾಲರ್ ಸುಂಕ ಮರುಪಾವತಿ: ಭಾರತೀಯ ಕಂಪನಿಗಳಿಗೂ ಲಾಭ
ಟ್ರಂಪ್
ನಯನಾ ರಾಜೀವ್
|

Updated on: Aug 06, 2026 | 8:50 AM

Share

ವಾಷಿಂಗ್ಟನ್ , ಆಗಸ್ಟ್ 06: ಡೊನಾಲ್ಡ್ ಟ್ರಂಪ್(Donald Trump) ಆಡಳಿತವು ವಿದೇಶಿ ಆಮದುಗಳ ಮೇಲೆ ವಿಧಿಸಿದ್ದ ಹೆಚ್ಚುವರಿ ಆಮದು ಸುಂಕಗಳನ್ನು (Import Tariffs) ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ, ಯುಎಸ್ ಸರ್ಕಾರವು ಕಂಪನಿಗಳಿಗೆ 100 ಶತಕೋಟಿ ಡಾಲರ್ ಮರುಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಅಮೆರಿಕ ಸುಪ್ರೀಂ ಕೋರ್ಟ್ ಟ್ರಂಪ್ ಅವರ ಸುಂಕ ನೀತಿಯನ್ನು ‘ಕಾನೂನುಬಾಹಿರ’ ಎಂದು ಘೋಷಿಸಿದ್ದು, ಒಟ್ಟು 166 ಬಿಲಿಯನ್ ಡಾಲರ್ ಧನಸಹಾಯ ಮತ್ತು ಮರುಪಾವತಿ ನೀಡುವಂತೆ ಆದೇಶಿಸಿದೆ. ಜುಲೈ ಅಂತ್ಯದ ವೇಳೆಗೆ ಮೊದಲ ಕಂತಿನ ಮರುಪಾವತಿ ಕಂಪನಿಗಳ ಬ್ಯಾಂಕ್ ಖಾತೆಗಳನ್ನು ತಲುಪಿದೆ.

ಆಪಲ್ ಮತ್ತು ಅಮೆಜಾನ್‌ಗೆ ಬಿಲಿಯನ್‌ಗಟ್ಟಲೆ ಮರುಪಾವತಿ: ಟೆಕ್ ದೈತ್ಯ ಆಪಲ್ 2.2 ಬಿಲಿಯನ್ ಡಾಲರ್ ಹಾಗೂ ಅಮೆಜಾನ್ (Amazon) ಸುಮಾರು 600 ಮಿಲಿಯನ್ ಡಾಲರ್ ಮರುಪಾವತಿ ಪಡೆದಿವೆ. ಅಮೆಜಾನ್ ಈ ಹಣವನ್ನು ಗ್ರಾಹಕರಿಗೆ ಹಿಂತಿರುಗಿಸುವುದಾಗಿ ಹೇಳಿದ್ದರೆ, ಆಪಲ್ ಅಮೆರಿಕದಲ್ಲೇ ಉತ್ಪಾದನೆ ವಿಸ್ತರಿಸಲು ಬಳಸುವುದಾಗಿ ತಿಳಿಸಿದೆ.

ವಾಲ್ಮಾರ್ಟ್ (Walmart), ಕಾಸ್ಟ್ಕೊ (Costco) ಹಾಗೂ ಪೆಪ್ಸಿ (Pepsi) ಕಂಪನಿಗಳು ಈ ಮರುಪಾವತಿ ಹಣದಿಂದ ಉತ್ಪನ್ನಗಳ ಬೆಲೆಗಳನ್ನು ಇಳಿಕೆ ಮಾಡಲು ಹಾಗೂ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳನ್ನು ಸರಿದೂಗಿಸಲು ನಿರ್ಧರಿಸಿವೆ.

ಭಾರತೀಯ ಕಂಪನಿಗಳಿಗೆ ಸಿಗಲಿದೆಯೇ ಲಾಭ? 10 ರಿಂದ 12 ಬಿಲಿಯನ್ ಡಾಲರ್ ಸರಕುಗಳ ಮೇಲಿನ ಸುಂಕ ಹಿಂಪಡೆತ: ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (GTRI) ವರದಿಯ ಪ್ರಕಾರ, ಸುಂಕ ಜಾರಿಯಲ್ಲಿದ್ದಾಗ ಭಾರತದಿಂದ ಅಮೆರಿಕಕ್ಕೆ ರಫ್ತಾದ ಸುಮಾರು 166 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳ ಪೈಕಿ 10 ರಿಂದ 12 ಬಿಲಿಯನ್ ಡಾಲರ್ ಮೌಲ್ಯದ ರಫ್ತುಗಳಿಗೆ ಈ ನಿರ್ಧಾರ ಅನ್ವಯಿಸಲಿದೆ.

ಮತ್ತಷ್ಟು ಒದಿ:

ಇರಾನ್ ಜತೆ ಮತ್ತೆ ಶಾಂತಿ ಮಾತುಕತೆ, ದಾಳಿ ರದ್ದು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು

ಅಮೆರಿಕದಲ್ಲಿ ತಮ್ಮ ಸ್ವಂತ ಅಂಗಸಂಸ್ಥೆಗಳನ್ನು ಹೊಂದಿರುವ ಹಾಗೂ ‘DDP’ ಆಧಾರದಲ್ಲಿ ಸಾಗಣೆ ಮಾಡಿರುವ ಭಾರತದ ಸಿಯೆಟ್ (CEAT), ಬಾಲಕೃಷ್ಣ ಇಂಡಸ್ಟ್ರೀಸ್, ಸಿಎನ್​ಎಚ್ ಇಂಡಿಯಾ ಹಾಗೂ ಗೋಕಲ್ದಾಸ್ ಎಕ್ಸ್‌ಪೋರ್ಟ್ಸ್ ನಂತಹ ಪ್ರಮುಖ ಕಂಪನಿಗಳು ತಾವು ಪಾವತಿಸಿದ್ದ ಹೆಚ್ಚುವರಿ ಸುಂಕವನ್ನು ಮರಳಿ ಪಡೆಯುವ ನಿರೀಕ್ಷೆಯಲ್ಲಿವೆ.

ಹೆಚ್ಚಿನ ಸಣ್ಣ ವ್ಯಾಪಾರಿಗಳು ಈ ಮರುಪಾವತಿಯನ್ನು ಸ್ವಾಗತಿಸಿದ್ದರೂ, ಸುಂಕಗಳಿಂದ ಉಂಟಾದ ಹಾನಿಯನ್ನು ಇದು ಸಂಪೂರ್ಣವಾಗಿ ಸರಿದೂಗಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅನೇಕ ಸಣ್ಣ ಕಂಪನಿಗಳು ನೌಕರರನ್ನು ವಜಾಗೊಳಿಸಬೇಕಾಯಿತು ಹಾಗೂ ಉಳಿತಾಯದ ಹಣವನ್ನು ಖಾಲಿ ಮಾಡಿಕೊಳ್ಳಬೇಕಾಯಿತು ಎಂದು ಅಳಲು ತೋಡಿಕೊಂಡಿವೆ.

ಇಂಟರ್ನ್ಯಾಷನಲ್ ಎಮರ್ಜೆನ್ಸಿ ಎಕನಾಮಿಕ್ ಪವರ್ಸ್ ಆಕ್ಟ್ (IEEPA) ಅಡಿಯಲ್ಲಿ ಟ್ರಂಪ್ ಆಡಳಿತವು ಚೀನಾ, ಮೆಕ್ಸಿಕೋ, ಕೆನಡಾ ಮತ್ತು ಭಾರತದ ಉತ್ಪನ್ನಗಳ ಮೇಲೆ 130 ಬಿಲಿಯನ್‌ ಡಾಲರ್​ಗೂ ಹೆಚ್ಚು ಸುಂಕ ವಸೂಲಿ ಮಾಡಿತ್ತು. ಸುಪ್ರೀಂ ಕೋರ್ಟ್ ಈ ನಿಲುವನ್ನು ಸಂವಿಧಾನಬಾಹಿರ ಎಂದು ತೀರ್ಪು ನೀಡಿದೆ.

ಮರುಪಾವತಿ ಪ್ರಕ್ರಿಯೆಯ ಸವಾಲುಗಳು: ಅಮೆರಿಕದ ಸುಂಕ ಮತ್ತು ಗಡಿ ರಕ್ಷಣೆ (CBP) ವಿಭಾಗದ ಮೂಲಕ ಕಾನೂನು ಪ್ರಕ್ರಿಯೆ ನಡೆಯುತ್ತಿರುವುದರಿಂದ ಪೂರ್ಣ ಮರುಪಾವತಿ ತಲುಪಲು ಕೆಲವು ತಿಂಗಳುಗಳ ಕಾಲಾವಕಾಶ ಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ