AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಂಪ್ ಆಡಳಿತದ ಕಠಿಣ ವಲಸೆ ನೀತಿ, ಪ್ರತಿ ಹೊಸ H-1B ವೀಸಾಗೆ 95 ಲಕ್ಷ ರೂ. ಶುಲ್ಕ ವಿಧಿಸಲು ಸಿದ್ಧತೆ, 60 ದಿನಗಳ ಗ್ರೇಸ್ ಅವಧಿಗೂ ಕತ್ತರಿ

ಡೊನಾಲ್ಡ್ ಟ್ರಂಪ್ ಆಡಳಿತವು ಹೊಸ H-1B ವೀಸಾಗಳಿಗೆ 103,265 ಡಾಲರ್ (ಸುಮಾರು 95 ಲಕ್ಷ ರೂ.) ಶುಲ್ಕ ವಿಧಿಸಲು ಮತ್ತು ನಿರುದ್ಯೋಗಿ H-1B ಉದ್ಯೋಗಿಗಳಿಗೆ 60 ದಿನಗಳ ಗ್ರೇಸ್ ಅವಧಿ ರದ್ದುಪಡಿಸಲು ಪ್ರಸ್ತಾಪಿಸಿದೆ. ಇದು ಅಮೆರಿಕದ ಕಂಪನಿಗಳಿಗೆ ವಿದೇಶಿ ನೇಮಕಾತಿ ದುಬಾರಿಯಾಗಿಸಲಿದೆ. ಇದರಿಂದ ಭಾರತೀಯ ಐಟಿ ವೃತ್ತಿಪರರಿಗೆ ತೀವ್ರ ಸಂಕಷ್ಟ ಎದುರಾಗಲಿದೆ.

ಟ್ರಂಪ್ ಆಡಳಿತದ ಕಠಿಣ ವಲಸೆ ನೀತಿ, ಪ್ರತಿ ಹೊಸ H-1B ವೀಸಾಗೆ 95 ಲಕ್ಷ ರೂ. ಶುಲ್ಕ ವಿಧಿಸಲು ಸಿದ್ಧತೆ, 60 ದಿನಗಳ ಗ್ರೇಸ್ ಅವಧಿಗೂ ಕತ್ತರಿ
ಡೊನಾಲ್ಡ್​ ಟ್ರಂಪ್
ನಯನಾ ರಾಜೀವ್
|

Updated on: Aug 25, 2026 | 8:39 AM

Share

ವಾಷಿಂಗ್ಟನ್, ಆಗಸ್ಟ್​ 25: ಅಮೆರಿಕದ ಡೊನಾಲ್ಡ್ ಟ್ರಂಪ್(Donald Trump) ಆಡಳಿತವು ಹೊಸ H-1B ವೀಸಾಗಳ ಮೇಲೆ 103,265 ಡಾಲರ್ ಅಂದರೆ ಸುಮಾರು 95 ಲಕ್ಷ ರೂಪಾಯಿಗಳ ಬೃಹತ್ ಶುಲ್ಕವನ್ನು ಶಾಶ್ವತವಾಗಿ ವಿಧಿಸಲು ಹೊಸ ನಿಯಮಾವಳಿಯನ್ನು ಪ್ರಸ್ತಾಪಿಸಿದೆ. ಈ ಪ್ರಸ್ತಾವನೆಯು ಅಮೆರಿಕದ ಕಂಪನಿಗಳಿಗೆ ವಿದೇಶಿ ತಂತ್ರಜ್ಞರನ್ನು ನೇಮಿಸಿಕೊಳ್ಳುವುದನ್ನು ಅತ್ಯಂತ ದುಬಾರಿಯಾಗಿಸಲಿದ್ದು, ಈ ವೀಸಾದ ಅತಿದೊಡ್ಡ ಫಲಾನುಭವಿಗಳಾಗಿರುವ ಭಾರತೀಯ ಐಟಿ ವೃತ್ತಿಪರರ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು (DHS) ಈ ಪ್ರಸ್ತಾವನೆಯನ್ನು ಬಿಡುಗಡೆ ಮಾಡಿದ್ದು, 30 ದಿನಗಳ ಸಾರ್ವಜನಿಕ ಅಭಿಪ್ರಾಯದ ಬಳಿಕ ವರ್ಷಾಂತ್ಯಕ್ಕೆ ಇದು ಜಾರಿಗೆ ಬರುವ ಸಾಧ್ಯತೆಯಿದೆ. ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳ (USCIS) ಅಂಕಿಅಂಶಗಳ ಪ್ರಕಾರ, ಮಂಜೂರಾಗುವ ಒಟ್ಟು H-1B ವೀಸಾಗಳಲ್ಲಿ ಶೇಕಡಾ 70 ಕ್ಕೂ ಹೆಚ್ಚು ಪಾಲು ಭಾರತೀಯರಿಗೆ ಸಲ್ಲುತ್ತದೆ.

ನೇರ ನೇಮಕಾತಿ ಇಳಿಕೆ: ಈ ಹಿಂದೆ ಕೇವಲ 2 ಸಾವಿರ ಡಾಲರ್​ನಿಂದ 5 ಸಾವಿರ ಡಾಲರ್​ ಇದ್ದ ಶುಲ್ಕ ಈಗ 1 ಲಕ್ಷ ಡಾಲರ್​ಗೂ ಅಧಿಕವಾಗುವುದರಿಂದ, ಅಮೆರಿಕನ್ ಕಂಪನಿಗಳು ಭಾರತದಿಂದ ನೇರವಾಗಿ ನುರಿತ ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಹಿಂಜರಿಯಬಹುದು.

ಮತ್ತಷ್ಟು ಓದಿ: ‘ಹಾರ್ಮುಜ್ ಜಲಸಂಧಿ ಅಮೆರಿಕನ್ ಭೂಭಾಗ’: ಇದು ನಿಮ್ಮ ಭ್ರಮೆ ಎಂದು ಟ್ರಂಪ್​​ಗೆ ಟಾಂಗ್ ನೀಡಿದ ಇರಾನ್

ಈಗಾಗಲೇ ಅಮೆರಿಕದಲ್ಲಿರುವ ವಿದ್ಯಾರ್ಥಿಗಳಿಗೆ ನೀಡಲಾಗುವ ವೀಸಾಗಳಿಗೆ ಅಥವಾ ಹಾಲಿ ಇರುವ H-1B ವೀಸಾಗಳ ನವೀಕರಣಕ್ಕೆ ಈ ಶುಲ್ಕ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕೆಲಸ ಕಳೆದುಕೊಂಡರೆ ತಕ್ಷಣ ದೇಶ ತೊರೆಯಬೇಕು: ನಿರುದ್ಯೋಗಿಗಳಾದ H-1B ಉದ್ಯೋಗಿಗಳಿಗೆ ಹೊಸ ಕೆಲಸ ಹುಡುಕಲು ನೀಡಲಾಗುತ್ತಿದ್ದ 60 ದಿನಗಳ ಗ್ರೇಸ್ ಅವಧಿಯನ್ನು (Grace Period) ತೆಗೆದುಹಾಕಲು ಡಿಎಚ್‌ಎಸ್ ಪ್ರಸ್ತಾಪಿಸಿದೆ. ಇದು ಜಾರಿಯಾದರೆ ಕೆಲಸ ಕಳೆದುಕೊಂಡ ಕಾರ್ಮಿಕರು ತಕ್ಷಣವೇ ಅಮೆರಿಕ ತೊರೆಯಬೇಕಾಗುತ್ತದೆ.

ಅಮೆರಿಕದಲ್ಲಿ ವ್ಯಾಸಂಗ ಮುಗಿಸಿ ಉದ್ಯೋಗಕ್ಕೆ ತೆರಳುವ ವಿದೇಶಿ ವಿದ್ಯಾರ್ಥಿಗಳ ಎಫ್-1ಐಚ್ಛಿಕ ಪ್ರಾಯೋಗಿಕ ತರಬೇತಿ (OPT) ಅರ್ಜಿಗಳ ಮೇಲೂ ಸುಮಾರು 1 ಲಕ್ಷ ಡಾಲರ್ ಶುಲ್ಕ ವಿಧಿಸಲು ಪರಿಶೀಲನೆ ನಡೆಸಲಾಗುತ್ತಿದೆ.

ಸ್ಥಳೀಯರಿಗೆ ಆದ್ಯತೆ ನೀಡುವ ಟ್ರಂಪ್ ತಂತ್ರ: ಅಮೆರಿಕನ್ ಉದ್ಯೋಗಿಗಳನ್ನು ರಕ್ಷಿಸಲು ಮತ್ತು ಕಂಪನಿಗಳು ಕಡಿಮೆ ವೆಚ್ಚದ ವಿದೇಶಿ ಕಾರ್ಮಿಕರನ್ನು ಅವಲಂಬಿಸುವುದನ್ನು ತಪ್ಪಿಸಲು ಈ ಕಠಿಣ ನಿಯಮ ತರಲಾಗುತ್ತಿದೆ ಎಂದು ಶ್ವೇತಭವನ ಸಮರ್ಥಿಸಿಕೊಂಡಿದೆ.

ನ್ಯಾಯಾಲಯದ ಸವಾಲು: ಈ ಹಿಂದೆಯೂ ಟ್ರಂಪ್ ಆಡಳಿತ ತಂದಿದ್ದ 1 ಲಕ್ಷ ಡಾಲರ್​ ಶುಲ್ಕವನ್ನು ಫೆಡರಲ್ ನ್ಯಾಯಾಲಯವು ತಡೆಹಿಡಿದಿತ್ತು. ಪ್ರಸ್ತುತ ಹೊಸ ನಿಯಮವೂ ಅಮೆರಿಕದ ಪ್ರಮುಖ ಟೆಕ್ ದೈತ್ಯ ಕಂಪನಿಗಳು ಹಾಗೂ ವಲಸೆ ಸಂಘಟನೆಗಳಿಂದ ತೀವ್ರ ಕಾನೂನು ಸವಾಲನ್ನು ಎದುರಿಸುವ ಸಾಧ್ಯತೆಯಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ