ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ದಕ್ಷಿಣ ಟರ್ಕಿಯ ಗಾಜಿಯಾಂಟೆಪ್ ಬಳಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಯಾವುದೇ ಸಾವು ನೋವುಗಳ ಕುರಿತು ವರದಿಯಾಗಿಲ್ಲ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಗಜಿಯಾಂಟೆಪ್ ಪ್ರಾಂತ್ಯದ ನೂರ್ಡಗಿ ನಗರದ ಪೂರ್ವಕ್ಕೆ 26 ಕಿಮೀ ದೂರದಲ್ಲಿ 17.9 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.
ಟರ್ಕಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಹತ್ತಾರು ಕಟ್ಟಡಗಳು ಉರುಳಿ 15ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಟರ್ಕಿಯ ಒಸ್ಮಾನಿಯಾ ಪ್ರಾಂತ್ಯದಲ್ಲಿ ಐವರು ಮೃತಪಟ್ಟಿದ್ದಾರೆ, 34 ಕಟ್ಟಡಗಳು ಕುಸಿದಿವೆ. ಟರ್ಕಿಯ ಮೇಯರ್ ಸ್ಯಾನ್ಲಿಯುರ್ಫಾದಲ್ಲಿ ಐವರು ಮೃತಪಟ್ಟಿದ್ದಾರೆ. ಮತ್ತು ಈ ಪ್ರದೇಶದಲ್ಲಿ 16 ಕಟ್ಟಡಗಳು ಕುಸಿದಿವೆ.
ಭೂಕಂಪದಿಂದ ಹಾನಿಗೊಳಗಾದ ಜನರನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ಟ್ವೀಟ್ ಮಾಡಿದ್ದಾರೆ. ಪ್ರಬಲ ಭೂಕಂಪದಿಂದ ಮಕ್ಕಳು ಸೇರಿ 284 ಜನ ಮೃತಪಟ್ಟಿದ್ದಾರೆ, ಸಾವಿರಕ್ಕೂ ಹೆಚ್ಚು ಜನರಿಗೆ ಗಾಯ, 150 ಕಟ್ಟಡಗಳ ಕುಸಿತ ಉಂಟಾಗಿದ್ದು,
ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಶುರುವಾಗಿದೆ. ಸಿರಿಯಾದಲ್ಲೂ ಕೂಡ ಭೂಕಂಪ ಸಂಭವಿಸಿದ್ದು, ಎರಡೂ ದೇಶಗಳು ಸೇರಿ ಒಟ್ಟು 284 ಮಂದಿ ಮೃತಪಟ್ಟಿದ್ದಾರೆ. 2223 ಮಂದಿ ಗಾಯಗೊಂಡಿದ್ದಾರೆ.
Published On - 7:27 am, Mon, 6 February 23