AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿಪಾರಾಗಿರುವ ಬ್ರೆಜಿಲ್​​ನ ಮಾಜಿ ಅಧ್ಯಕ್ಷರಿಗೆ ಅಮೆರಿಕದಲ್ಲಿ ಆಶ್ರಯ; ಒಂಟಿಯಾಗಿದ್ದಾರೆ ಜೈರ್ ಬೋಲ್ಸನಾರೊ

Jair Bolsonaro 67ರ ಹರೆಯದ ಜೈರ್ ಬೋಲ್ಸನಾರೊ ಯುನೈಟೆಡ್ ಸ್ಟೇಟ್ಸ್‌ನಲ್ಲಿ(US) ಆಶ್ರಯವನ್ನು ಕಂಡುಕೊಂಡಿದ್ದಾರೆ. ಇಲ್ಲಿಗೆ ಅವರು ಡಿಸೆಂಬರ್ ಅಂತ್ಯದಲ್ಲಿ ಆಗಮಿಸಿದ್ದರು. ಅವರ ಪ್ರತಿಸ್ಪರ್ಧಿ, ಎಡಪಂಥೀಯ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ...

ಗಡಿಪಾರಾಗಿರುವ ಬ್ರೆಜಿಲ್​​ನ ಮಾಜಿ ಅಧ್ಯಕ್ಷರಿಗೆ ಅಮೆರಿಕದಲ್ಲಿ ಆಶ್ರಯ; ಒಂಟಿಯಾಗಿದ್ದಾರೆ ಜೈರ್ ಬೋಲ್ಸನಾರೊ
ಜೈರ್ ಬೋಲ್ಸನಾರೊ
Follow us
ರಶ್ಮಿ ಕಲ್ಲಕಟ್ಟ
|

Updated on: Feb 05, 2023 | 1:39 PM

ಡೋರಲ್, ಫ್ಲೋರಿಡಾ: 214 ಮಿಲಿಯನ್ ಜನರಿರುವ ಲ್ಯಾಟಿನ್ ಅಮೆರಿಕದ ಅತಿದೊಡ್ಡ ದೇಶದ ಮಾಜಿ ಅಧ್ಯಕ್ಷ, ಈಗ ಬ್ರೆಜಿಲ್‌ನ (Brazil) ಮಾಜಿ ಬಲಪಂಥೀಯ ನಾಯಕ  ಜೈರ್ ಬೋಲ್ಸನಾರೊ (Jair Bolsonaro), ಈಗ ಸಣ್ಣ ಫ್ಲೋರಿಡಾ ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ. ಇವರು ಫಾಸ್ಟ್‌ಫುಡ್ ರೆಸ್ಟೋರೆಂಟ್‌ನಲ್ಲಿ ಒಂಟಿಯಾಗಿ ಕೂತು ಆಹಾರ ಸೇವಿಸುತ್ತಾರೆ. 67ರ ಹರೆಯದ ಜೈರ್ ಬೋಲ್ಸನಾರೊ ಯುನೈಟೆಡ್ ಸ್ಟೇಟ್ಸ್‌ನಲ್ಲಿ(US) ಆಶ್ರಯವನ್ನು ಕಂಡುಕೊಂಡಿದ್ದಾರೆ. ಇಲ್ಲಿಗೆ ಅವರು ಡಿಸೆಂಬರ್ ಅಂತ್ಯದಲ್ಲಿ ಆಗಮಿಸಿದ್ದರು. ಅವರ ಪ್ರತಿಸ್ಪರ್ಧಿ, ಎಡಪಂಥೀಯ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಚುನಾವಣಾ ವಿಜಯವನ್ನು ರದ್ದುಗೊಳಿಸುವ ಪ್ರಯತ್ನದಲ್ಲಿ ಅವರ ಬೆಂಬಲಿಗರು ಬ್ರೆಸಿಲಿಯಾದಲ್ಲಿನ ಸರ್ಕಾರಿ ಕಟ್ಟಡಗಳಿಗೆ ದಾಳಿ ಮಾಡುವ ಹಲವಾರು ದಿನಗಳ ಮೊದಲು ಅವರು ಇಲ್ಲಿ ಬಂದಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.ಬೋಲ್ಸನಾರೊ ಅವರ ಊರಲ್ಲಿ ಅವರು ದಂಗೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ತನಿಖೆ ನಡೆಯುತ್ತಿದ್ದು ಇದನ್ನು ಅವರು ನಿರಾಕರಿಸಿದ್ದಾರೆ.

ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಪಾರ್ಟ್ನರ್ ಬೋಲ್ಸನಾರೊ ಅದ್ದೂರಿ ಅಧ್ಯಕ್ಷೀಯ ಅರಮನೆಯಿಂದ ಈಗ ಡಿಸ್ನಿ ವರ್ಲ್ಡ್ ರೆಸಾರ್ಟ್ ಬಳಿ ಸಣ್ಣ ಸಮುದಾಯದಲ್ಲಿ ವಾಸಿಸುತ್ತಿದ್ದಾರೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ತನ್ನ ಮೊದಲ ಆರು ವಾರಗಳಲ್ಲಿ, ಬೋಲ್ಸನಾರೊ ಬ್ರೆಜಿಲಿಯನ್ ಮಾಜಿ ಮಾರ್ಷಲ್ ಆರ್ಟ್ಸ್ ಚಾಂಪಿಯನ್ ಜೋಸ್ ಅಲ್ಡೊ ಅವರ ಒರ್ಲ್ಯಾಂಡೊ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಅವರು ಸ್ಥಳೀಯ ಸೂಪರ್‌ಮಾರ್ಕೆಟ್‌ಗೆ ಹೋಗುತ್ತಿದ್ದರು ಮತ್ತು KFC ಯಲ್ಲಿ ಒಂಟಿಯಾಗಿ ಫ್ರೈಡ್ ಚಿಕನ್ ತಿನ್ನುತ್ತಿರುವ ಫೋಟೊ ಸೆರೆ ಹಿಡಿಯಲಾಗಿತ್ತು.

ಇದನ್ನೂ ಓದಿ:Stratospheric Balloons: ಅಮೆರಿಕ ಮೇಲೆ ಹಾರಾಡಿದ ಚೀನಾದ ನಿಗೂಢ ಬಲೂನ್​ಗಳು ಹೇಗೆ ಕೆಲಸ ಮಾಡುತ್ತವೆ? ಇಲ್ಲಿದೆ ವಿವರ

ಶುಕ್ರವಾರ, ತನ್ನ ತಾಯ್ನಾಡಿನಲ್ಲಿ ಇತ್ತೀಚಿನವರೆಗೂ ಭಾರಿ ಜನಸಂದಣಿಯನ್ನು ಆಜ್ಞಾಪಿಸಿದ ವ್ಯಕ್ತಿ, ಮಿಯಾಮಿ ಬಳಿಯ ಡೋರಲ್ ನಗರದ ಟ್ರಂಪ್ ನ್ಯಾಷನಲ್ ಹೋಟೆಲ್‌ನಲ್ಲಿ ಅಮೆರಿಕದ ಸಂಪ್ರದಾಯವಾದಿ ಸಂಸ್ಥೆ ಟರ್ನಿಂಗ್ ಪಾಯಿಂಟ್ ಯುಎಸ್‌ಎ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 400 ಬೆಂಬಲಿಗರೊಂದಿಗೆ ಮಾತನಾಡಿದರು.

ಈ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಟ್ರಂಪ್ ಸ್ವತಃ ಪಾತ್ರವನ್ನು ವಹಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

‘ಎಂದಿಗಿಂತ ಹೆಚ್ಚು ಜನಪ್ರಿಯ’

‘ಟ್ರಂಪ್ ಆಫ್ ದಿ ಟ್ರಾಪಿಕ್ಸ್’ ಎಂದು ಕರೆಯಲ್ಪಟ್ಟ ಬೋಲ್ಸನಾರೊ ತಾಯ್ನಾಡಿನಿಂದ ಹಲವಾರು ಸಾವಿರ ಮೈಲುಗಳ (ಕಿಲೋಮೀಟರ್) ದೂರದಲ್ಲಿರುವ ಫ್ಲೋರಿಡಾದಲ್ಲಿ ಸಭೆ ನಡಿಸಿ ದೇಶಕ್ಕೆ ತನ್ನ ಕರ್ತವ್ಯಗಳನ್ನು ಪೂರೈಸುವ ಬಗ್ಗೆ ಉತ್ಸಾಹದಿಂದ ಮಾತನಾಡಿದ್ದಾರೆ.”ಕರ್ತವ್ಯವನ್ನು ಪೂರೈಸಿದ್ದಕ್ಕಿಂತ ಹೆಚ್ಚಿನ ತೃಪ್ತಿ ಇಲ್ಲ” ಎಂದು ಬೋಲ್ಸನಾರೊ ತಮ್ಮ ಅಧ್ಯಕ್ಷತೆಯ ಬಗ್ಗೆ ಹೇಳಿದರು. ಮೂರು ದಿನಗಳ ಹಿಂದೆ, ಫ್ಲೋರಿಡಾದಲ್ಲಿ ಬ್ರೆಜಿಲಿಯನ್ ವಲಸಿಗ ಸಮುದಾಯವು ಒಟ್ಟಾಗಿ ಮಾಡಿದ ಕಾರ್ಯಕ್ರಮದಲ್ಲಿ ಬೋಲ್ಸನಾರೊ ಒರ್ಲ್ಯಾಂಡೊದ ಶಾಪಿಂಗ್ ಮಾಲ್ ರೆಸ್ಟೋರೆಂಟ್‌ನ ಬಾಲ್ ರೂಂನಲ್ಲಿ ಮಾತನಾಡಿದರು.

ಅಕ್ಟೋಬರ್ 30 ರ ರನ್‌ಆಫ್‌ನಲ್ಲಿ ಲುಲಾ ಅವರ ಕಿರಿದಾದ ಗೆಲುವಿನ ಬಗ್ಗೆ ಪದೇ ಪದೇ ಅನುಮಾನ ವ್ಯಕ್ತಪಡಿಸಿದ ಬೋಲ್ಸನಾರೊ, ಮತ್ತೊಮ್ಮೆ ತಮ್ಮ ಚುನಾವಣಾ ಸೋಲನ್ನು ಪ್ರಶ್ನಿಸಿದ್ದು ತಾನು “ಎಂದಿಗೂ ಹೆಚ್ಚು ಜನಪ್ರಿಯ ವ್ಯಕ್ತಿ ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ಏನಾಯಿತು ಎಂದು ಅನೇಕ ಜನರು ಕುತೂಹಲದಲ್ಲಿದ್ದಾರೆ.ಆದರೆ ನಾವು ಈ ಕ್ಷಣವನ್ನು ಎದುರಿಸುತ್ತೇವೆ, ದೈವ ಕೃಪೆಯಿಂದ ನಾವು ಒಟ್ಟಾಗಿ ಗೆಲ್ಲುತ್ತೇವೆ” ಎಂದು ಅವರು ಹೇಳಿದರು.ಆದರೆ ಬೋಲ್ಸನಾರೊ ಅವರು ದಂಗೆಯ ಸಮಯದಲ್ಲಿ ಉಂಟಾದ ನಷ್ಟಕ್ಕೆ ಅವರು ವಿಷಾದ ವ್ಯಕ್ತ ಪಡಿಸಿದರು.

ಮುಂದೇನು?

ಬೋಲ್ಸನಾರೊ ಭವಿಷ್ಯ ಅನಿಶ್ಚಿತತೆಯಲ್ಲಿದೆ. ಜನವರಿ ಅಂತ್ಯದಲ್ಲಿ ಬ್ರೆಜಿಲ್‌ಗೆ ಹಿಂದಿರುಗುವ ಉದ್ದೇಶವನ್ನು ಸಾರ್ವಜನಿಕವಾಗಿ ಘೋಷಿಸಿದ ನಂತರ, ಬೋಲ್ಸನಾರೊ ಈ ವಾರದ ಆರಂಭದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇನ್ನೂ ಆರು ತಿಂಗಳ ಕಾಲ ಉಳಿಯಲು ಹೊಸ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರ ಪುತ್ರರಲ್ಲಿ ಒಬ್ಬರಾದ ಸೆನೆಟರ್ ಫ್ಲೇವಿಯೊ ಬೋಲ್ಸನಾರೊ ಕಳೆದ ವಾರ ಮಾಜಿ ಅಧ್ಯಕ್ಷರು ಯಾವಾಗ ಹಿಂತಿರುಗುತ್ತಾರೆ ಎಂದು ತಿಳಿದಿಲ್ಲ ಎಂದು ಹೇಳಿದ್ದಾರೆ.

“ಇದು ನಾಳೆ ಅಥವಾ ಈಗ ಆರು ತಿಂಗಳ ನಂತರ ಇರಬಹುದು, ಅಥವಾ ಅವರು ಎಂದಿಗೂ ಹಿಂತಿರುಗುವುದಿಲ್ಲ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.ಮಂಗಳವಾರ, ಒರ್ಲ್ಯಾಂಡೊ ರೆಸ್ಟೋರೆಂಟ್‌ನಲ್ಲಿ, ಬೋಲ್ಸನಾರೊ “ಬ್ರೆಜಿಲಿಯನ್ ರಾಜಕೀಯದಲ್ಲಿ ಸಕ್ರಿಯವಾಗಿರಲು” ಭರವಸೆ ನೀಡಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್