ಅರ್ಜೆಂಟೀನಾ: ಸಮುದ್ರದ ಮಟ್ಟ ಏರಿವಿಕೆಯ ಕಾರಣದಿಂದ ಎರಡು ಅಂತಸ್ತಿನ ಬೃಹತ್ ಕಟ್ಟಡವೊಂದು ನೋಡನೋಡುತ್ತಿದ್ದಂತೆ ಸಮುದ್ರದ ಪಾಲಾಗಿದೆ. ಅರ್ಜೆಂಟೀನಾದ ಬ್ಯೂನೋಸ್ ಏರ್ಸ್ನಲ್ಲಿ ಜುಲೈ 28ರಂದು ಘಟನೆ ನಡೆದಿದ್ದಾಗಿ ಡೈಲಿ ಮೈಲ್ ವರದಿ ಮಾಡಿದೆ. ದಕ್ಷಿಣ ಅಟ್ಲಾಂಟಿಕ್ ಸಾಗರದ ದಂಡೆಯಲ್ಲಿರುವ ಈ ಬಂಗಲೆಯು, ಸಮುದ್ರದ ಅಲೆಗಳ ಹೊಡೆತಕ್ಕೆ ಮೊದಲು ತನ್ನ ಫೌಂಡೇಶನ್ ಭಾಗವನ್ನು ಕಳೆದುಕೊಂಡಿತ್ತು. ಅಲೆಗಳ ಪರಿಣಾಮ ತೀವ್ರವಾಗುತ್ತಿರುವಂತೆಯೇ ಇಡೀ ಬಂಗಲೆ ಸಮುದ್ರಶಾಹಿಯಾಗಿದೆ. ಘಟನೆ ನಡೆಯುವಾಗ ಮನೆಯ ಸದಸ್ಯರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದ ಕಾರಣ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಮನೆ ಸಮುದ್ರಪಾಲಾಗುವುದನ್ನು ಸ್ಥಳದಲ್ಲಿದ್ದವರು ವಿಡಿಯೊ ಮೂಲಕ ದಾಖಲಿಸಿದ್ದಾರೆ. ವಿಡಿಯೊದಲ್ಲಿ ಸಮುದ್ರದ ಅಲೆಗಳ ಹೊಡೆತದಿಂದ ಮನೆಯ ಫೌಂಡೇಶನ್ ಕೊರೆದು ಹೋಗಿರುವುದನ್ನು ಕಾಣಬಹುದು. ಕೊನೆಯಲ್ಲಿ ಇಡೀ ಮನೆ ಕುಸಿದಿರುವುದೂ ವಿಡಿಯೊದಲ್ಲಿ ಸೆರೆಯಾಗಿದೆ.
ಘಟನೆಯ ವಿಡಿಯೊ ಇಲ್ಲಿದೆ:
ಸಮುದ್ರ ಮಟ್ಟದ ಏರಿಕೆ ಮತ್ತು ಪರಿಣಾಮದ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ:
ಸಮುದ್ರದ ಮಟ್ಟದ ಏರುವಿಕೆಯು ಹಲವಾರು ಕಾರಣಗಳಿಂದ ಉಂಟಾಗುತ್ತದೆ. ಗ್ಲೋಬಲ್ ವಾರ್ಮಿಂಗ್ ಒಂದು ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಅರ್ಜೆಂಟೀನಾದಂತಹ ದೇಶಗಳಲ್ಲಿ ಭೂ ಮಟ್ಟವು ಸಮುದ್ರ ಮಟ್ಟಕ್ಕಿಂತ ಬಹಳ ಎತ್ತರದಲ್ಲಿರುವುದಿಲ್ಲ. ಇದರಿಂದಾಗಿ ಸಮುದ್ರ ಮಟ್ಟ ಏರಿಕೆಯಾದರೆ ಸಮುದ್ರ ತೀರದ ಪ್ರದೇಶಗಳಿಗೆ ತೀವ್ರ ಹಾನಿಯಾಗುತ್ತದೆ. ಸಮುದ್ರದ ಅಲೆಗಳ ಬಡಿಯುವಿಕೆಯನ್ನು ತಡೆಗಟ್ಟುವುದಕ್ಕಾಗಿ ತಡೆಗೋಡೆಗಳನ್ನು ನಿರ್ಮಿಸಲಾಗಿರುತ್ತದೆ. ಒಂದು ವೇಳೆ ಅವುಗಳು ದುರ್ಬಲವಾಗಿದ್ದರೂ ತೀರ ಪ್ರದೇಶಗಳಿಗೆ ಹಾನಿಯಾಗುತ್ತದೆ.
ಸಮುದ್ರದ ಉಬ್ಬರವಿಳಿತಗಳನ್ನು ತಡೆಯುವ ಸಾಮರ್ಥ್ಯವು ಪ್ರತೀ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಉದಾಹರಣೆಗೆ ಯುರೋಪ್ ಖಂಡದ ಹಲವು ಭಾಗಗಳಲ್ಲಿ ಸಮುದ್ರ ಮಟ್ಟದ ಏರುವಿಕೆಯ ಭೀತಿಯಿದೆ. ಒಂದು ವರದಿಯ ಪ್ರಕಾರ ಇಂಗ್ಲೆಂಡ್ ಮತ್ತು ವೇಲ್ಸ್ನ ಭೂಭಾಗದಲ್ಲಿ ಸುಮಾರು 1,13,000 ವಾಸದ ಸ್ಥಳಗಳು, 9,000 ಖಾಸಗಿ ಸ್ಥಳಗಳು ಹಾಗೂ ಸುಮಾರು 5,000 ಹೆಕ್ಟೇರ್ ಕೃಷಿ ಭೂಮಿ ಸಮುದ್ರದ ಮಟ್ಟ ಏರಿದರೆ ಅಪಾಯಕ್ಕೆ ಒಳಗಾಗಲಿದೆ.
ಇದು ಇಂಗ್ಲೆಂಡ್ನಂತಹ ಸಣ್ಣ ದೇಶಕ್ಕೆ ಬಹಳ ದೊಡ್ಡ ಹಾನಿಯನ್ನುಂಟು ಮಾಡಲಿದ್ದು, ಒಂದು ವೇಳೆ ಹಾನಿಯಾದರೆ ಸುಮಾರು 7.7ಬಿಲಿಯನ್ ಯೂರೋ ನಷ್ಟವಾಗಬಹುದು ಎಂದು DEFRA 2001ರಲ್ಲಿ ಅಂದಾಜಿಸಿತ್ತು ಎಂದು ಡೈಲಿ ಮೈಲ್ ವರದಿ ಮಾಡಿದೆ.
ಇದನ್ನೂ ಓದಿ: ನೆರೆ ಸಂತ್ರಸ್ತರ ಕರೆ ಬಂದರೆ ಫೋನ್ ಎಸೆಯಬೇಕಂತ ಅನಿಸುತ್ತೆ; ಅಥಣಿ ಶಾಸಕ ಮಹೇಶ್ ಕುಮಟ್ಟಳ್ಳಿಯ ಅಸಡ್ಡೆ ಮಾತುಗಳು ಫುಲ್ ವೈರಲ್
ಇದನ್ನೂ ಓದಿ: Viral Video: ಕರಾಚಿಯ ಆರ್ಸಿಬಿ ಹೋಟೆಲ್ನಲ್ಲಿ ದೊರೆಯಲಿದೆ ಚಾಕಲೇಟ್ ಬಿರಿಯಾನಿ; ಹೊಸ ಪ್ರಯತ್ನಕ್ಕೆ ಕಾಲೆಳೆದ ನೆಟ್ಟಿಗರು!
(Two floor building collapses to ocean because of sea tides in Argentina)