Viral Video: ಕರಾಚಿಯ ಆರ್​ಸಿಬಿ ಹೋಟೆಲ್​ನಲ್ಲಿ ದೊರೆಯಲಿದೆ ಚಾಕಲೇಟ್ ಬಿರಿಯಾನಿ; ಹೊಸ ಪ್ರಯತ್ನಕ್ಕೆ ಕಾಲೆಳೆದ ನೆಟ್ಟಿಗರು!

RCB: ಪಾಕಿಸ್ತಾನದ ಕರಾಚಿಯ ಆರ್​ಸಿಬಿ ಅಂಗಡಿಯಲ್ಲಿ ಚಾಕಲೇಟ್ ಬಿರಿಯಾನಿ ಲಭ್ಯವಿದೆ. ಇದಕ್ಕೆ ಆಹಾರ ಪ್ರಿಯರು ಅಚ್ಚರಿ ವ್ಯಕ್ತಪಡಿಸಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Viral Video: ಕರಾಚಿಯ ಆರ್​ಸಿಬಿ ಹೋಟೆಲ್​ನಲ್ಲಿ ದೊರೆಯಲಿದೆ ಚಾಕಲೇಟ್ ಬಿರಿಯಾನಿ; ಹೊಸ ಪ್ರಯತ್ನಕ್ಕೆ ಕಾಲೆಳೆದ ನೆಟ್ಟಿಗರು!
ಚಾಕಲೇಟ್ ಬಿರಿಯಾನಿ
Follow us
TV9 Web
| Updated By: shivaprasad.hs

Updated on:Jul 31, 2021 | 11:35 AM

ಬಿರಿಯಾನಿ ಮತ್ತು ಚಾಕಲೇಟ್ ಎರಡೂ ಪ್ರತ್ಯೇಕ ರುಚಿಯನ್ನು ಹೊಂದಿರುವ ಪದಾರ್ಥಗಳು. ಆದರೆ ಅವೆರಡನ್ನೂ ಒಟ್ಟಿಗೇ ಸೇರಿಸಿದರೆ ಏನಾದೀತು? ಚಾಕಲೇಟ್ ಪ್ರಿಯರು ಅದನ್ನು ಒಪ್ಪಲಾರರು. ಬಿರಿಯಾನಿ ಪ್ರಿಯರಂತೂ ಅದನ್ನು ಕನಸಲ್ಲೂ ಯೋಚಿಸಲು ಸಾಧ್ಯವಿಲ್ಲ. ಕಾರಣ, ಅವೆರಡೂ ತಮ್ಮ ವಿಶಿಷ್ಟ ಟೇಸ್ಟ್​ನಿಂದಾಗಿ ಆಹಾರ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿರುವಂಥವು. ಆದರೆ ಪಾಕಿಸ್ತಾನದ ‘ಆರ್​ಸಿಬಿ’ ಹೋಟೆಲ್​ನಲ್ಲಿ ಇವೆರಡನ್ನೂ ಮಿಶ್ರಣ ಮಾಡಿದ ಬಿರಿಯಾನಿ ಸಿಗುತ್ತದೆ. ಅರೇ, ಆರ್​ಸಿಬಿ ಹೋಟೆಲ್ ಪಾಕಿಸ್ತಾನದಲ್ಲಿದೆಯೇ ಎಂಬ ಯೋಚನೆ ಬಂತೇ? ತಡೆಯಿರಿ. ಈ ಆರ್​ಸಿಬಿ ಹೋಟೆಲ್ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡವಲ್ಲ.ಈ ಆರ್​ಸಿಬಿ ಬೇರೆಯೇ. ಪಾಕಿಸ್ತಾನದ ಕರಾಚಿಯಲ್ಲಿರುವ ಒಂದು ಪುಟ್ಟ ಹೋಟೆಲ್​ನ ಹೆಸರು ಆರ್​ಸಿಬಿ.

ಅಲ್ಲಿ ಬಿರಿಯಾನಿಗೆ ಚಾಕಲೇಟ್​ ಫ್ಲೇವರ್​ ಅನ್ನು ಹಾಕಿ ಕೊಡಲಾಗುತ್ತದೆ. ಇದನ್ನು ತಿಂದಿರುವ ಆಹಾರ ಪ್ರಿಯರು ಅಚ್ಚರಿಪಡುತ್ತಿದ್ಧಾರೆ. ಕರಾಚಿಯ ಫುಡ್ ಬ್ಲಾಗರ್ ಒಬ್ಬ ಈ ಕುರಿತು ವಿಡಿಯೊವೊಂದನ್ನು ಮಾಡಿದ್ದು ಅದರಲ್ಲಿ ಆರ್​ಸಿಬಿ ಹೊಟೆಲ್​ನ ಈ ಚಮತ್ಕಾರವನ್ನು ಬೆಳಕಿಗೆ ತಂದಿದ್ದಾನೆ. ಆದರೆ ವಿಡಿಯೊಕ್ಕೆ ಬಹಳ ಒಳ್ಳೆಯ ವಿಮರ್ಶೆಯನ್ನೇನೂ ನೆಟ್ಟಿಗರು ನೀಡಿಲ್ಲ. ‘ಇನ್ನು ಮುಂದೆ ವೆನಿಲ್ಲಾ ಪಲಾವ್ ಕೂಡಾ ತಿನ್ನಬೇಕಾದೀತೇನೊ…’ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಹಲವರು ‘ಆತ ಆಸ್ಕರ್ ಗೆಲ್ಲುವಂತಹ ನಟನೆ ಮಾಡಿದ್ದಾನೆ’ ಎಂದು ಕುಟುಕಿದ್ದಾರೆ.

ಪಾಕಿಸ್ತಾನದ ವಿಲಾಗರ್ ಮಾಡಿದ ವಿಡಿಯೊ ಇಲ್ಲದೆ:

ಅರೇ, ಈ ವಿಡಿಯೊ ಭಾರತದಲ್ಲಿ ಹೇಗೆ ಜನಪ್ರಿಯವಾಯಿತು ಎಂದು ಯೋಚಿಸುತ್ತಿದ್ದೀರಾ? ಅದಕ್ಕೂ ಉತ್ತರವಿದೆ. ಭಾರತದ ‘ಸ್ಲೇ ಪಾಯಿಂಟ್’ ಎಂಬ ಹಿಂದಿ ಭಾಷೆಯ ಚಾನೆಲ್​ ಒಂದು ಅಂತರ್ಜಾಲದಲ್ಲಿ ಟ್ರೆಂಡಿಂಗ್ ಆದ ವಿಡಿಯೊಗಳ ಕಾಲೆಳೆಯುವ ಕೆಲಸ ಮಾಡುತ್ತದೆ. ಅದರಲ್ಲಿ ಪಾಕಿಸ್ತಾನದ ವಿಲಾಗರ್ ಬಿರಿಯಾನಿ- ಚಾಕಲೇಟ್ ಮಿಶ್ರಣಕ್ಕೆ ಕೊಟ್ಟಿರುವ ರಿಯಾಕ್ಷನ್​ ಅನ್ನು ಸ್ಲೇ ಪಾಯಿಂಟ್ ಟೀಕಿಸಿದ್ದು, ಆತನ ರಿಯಾಕ್ಷನ್ ‘ಆಸ್ಕರ್ ವಿನ್ನಿಂಗ್ ರಿಯಾಕ್ಷನ್’ ಎಂದಿದೆ. ಹೋಟೆಲ್​ಗೆ ಆರ್​ಸಿಬಿ ಹೆಸರಿರುವುದರಿಂದ ಕ್ರಿಕೆಟ್ ಪ್ರೇಮಿಗಳೂ ಈ ಕುರಿತು ಕಾಮೆಂಟ್ ಮಾಡುತ್ತಿದ್ದಾರೆ.

ಸ್ಲೇ ಪಾಯಿಂಟ್ ಮಾಡಿದ ವಿಡಿಯೊ ಇಲ್ಲಿದೆ (1.05 ನಿಮಿಷದಿಂದ – 2.00ಂ ನಿಮಿಷದವರೆಗೆ):

ಫಾಸ್ಟ್​ಫುಡ್ ಮತ್ತು ಸಿಕ್ಕ ಸಿಕ್ಕ ಫ್ಲೇವರ್​ಗಳನ್ನು ವಿ-ಲಾಗ್ ನೆಪದಲ್ಲಿ ಮಿಶ್ರಣ ಮಾಡುವುದರ ಕುರಿತು ಎಚ್ಚರ ಮೂಡಿಸಲು ವಿಡಿಯೊ ಮಾಡಿರುವುದಾಗಿ ಸ್ಲೇ ಪಾಯಿಂಟ್ ಹೇಳಿಕೊಂಡಿದೆ. ಜೊತೆಗೆ ಭಾರತೀಯ ತಿನಿಸುಗಳನ್ನು ಹೊಸ ರುಚಿ ಎಂಬ ಪ್ರಯೋಗದಲ್ಲಿ ಹೇಗೆ ಕುಲಗೆಡಿಸಬಹುದು ಎಂಬುದನ್ನು ತಿಳಿಸಲು ಈ ವಿಡಿಯೊ ಮಾಡಿದ್ದಾಗಿ ಅದು ಹೇಳಿದೆ. ತನ್ನ ವಿಡಿಯೊದಲ್ಲಿ ಆರ್​ಸಿಬಿ ಹೆಸರನ್ನು ಆ ಹೊಟೆಲ್ ಇಟ್ಟಿರುವುದಕ್ಕೂ ಕಾಲೆಳೆದಿರುವ ಅವರು, ನೂರು ವರ್ಷಗಳಿಂದಲೂ ಕಪ್ ಗೆಲ್ಲದ ಆರ್​ಸಿಬಿಯ ಹೆಸರು ಕೊನೆಗೆ ಹೀಗೆ ಕಾಣುತ್ತಿದೆ ಎಂದೂ; ಆರ್​ಸಿಬಿ ಇಲ್ಲೂ ಯಡವಟ್ಟು ಮಾಡಿಕೊಂಡಿದೆ ಎಂದೂ ಕಾಲೆಳೆದಿದ್ದಾರೆ. ಯೂಟ್ಯೂಬ್​ನಲ್ಲಿ ಈ ವಿಡಿಯೊ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: ಕೋಮು ಸೌಹಾರ್ದ: ಅನಾಥೆಯನ್ನು ಮಗಳಂತೆ ಪೋಷಿಸಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಟ್ಟ ಮುಸ್ಲಿಂ ವ್ಯಕ್ತಿ

ಇದನ್ನೂ ನೋಡಿ: ಜಿಮ್ನಾಸ್ಟಿಕ್ ಸ್ಪರ್ಧಿಗಳನ್ನು ತನ್ನ ಬೇಟೆ ಎಂದು ಭಾವಿಸಿದ ಮುದ್ದಾದ ಬೆಕ್ಕು; ವಿಡಿಯೊ ವೈರಲ್

(Pakistan Vlogger makes Chocolate Biriyani Review from a hotel called RCB and Netizens go with Mixed reactions)

Published On - 11:32 am, Sat, 31 July 21