ನವದೆಹಲಿ: ಸಿಯಾಚಿನ್‌ನಲ್ಲಿ ಹೆಲಿಕಾಪ್ಟರ್ ಪತನವಾಗಿ ಪಾಕಿಸ್ತಾನ ಸೇನೆಯ ಇಬ್ಬರು ಸೇನಾಧಿಕಾರಿಗಳು ಮೃತಪಟ್ಟಿದ್ದಾರೆ. ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಹಿಮನದಿಯಲ್ಲಿ ಇಂದು ಹೆಲಿಕಾಪ್ಟರ್ ಪತನವಾಗಿದ್ದು, ಇಬ್ಬರು ಪಾಕಿಸ್ತಾನಿ ಸೇನಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಮಿಲಿಟರಿ ಮಾಧ್ಯಮ ವಿಭಾಗ ಮಾಹಿತಿ ನೀಡಿದೆ. ಈ ಘಟನೆಯಲ್ಲಿ ಮೇಜರ್ ಇರ್ಫಾನ್ ಬೆರ್ಚಾ ಮತ್ತು ಮೇಜರ್ ರಾಜಾ ಜೀಶನ್ ಜಹಾಂಜೇಬ್ ಹುತಾತ್ಮರಾಗಿದ್ದಾರೆ ಎಂದು ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಷನ್ಸ್ ಪಾಕಿಸ್ತಾನ್ ತಿಳಿಸಿದೆ.
ಸಿಯಾಚಿನ್‌ನಲ್ಲಿ ಹೆಲಿಕಾಪ್ಟರ್ ಪತನಗೊಂಡಾಗ ಕನಿಷ್ಠ ಇಬ್ಬರು ಪಾಕಿಸ್ತಾನದ ಸೇನಾ ಅಧಿಕಾರಿಗಳು ಹುತಾತ್ಮರಾಗಿದ್ದಾರೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ಸೋಮವಾರ ಹೇಳಿಕೆ ತಿಳಿಸಿದೆ. ಪಾಕಿಸ್ತಾನ ಸೇನೆಯು ಹುತಾತ್ಮರಾದ ಅಧಿಕಾರಿಗಳನ್ನು ಮೇಜರ್ ಇರ್ಫಾನ್ ಬೆರ್ಚಾ ಮತ್ತು ಮೇಜರ್ ರಾಜಾ ಜೀಶನ್ ಜಹಾಂಜೆಬ್ ಎಂದು ಗುರುತಿಸಿದೆ.
ಸುಮಾರು ಒಂದು ವರ್ಷದ ಹಿಂದೆ ಗಿಲ್ಗಿಟ್-ಬಾಲ್ಟಿಸ್ತಾನ್‌ನ ಪ್ರದೇಶದಲ್ಲಿ ಗಾಯಾಳುಗಳನ್ನು ಸ್ಥಳಾಂತರಿಸುವಾಗ ತಾಂತ್ರಿಕ ಕಾರಣಗಳಿಂದಾಗಿ ಪಾಕಿಸ್ತಾನ ಸೇನೆಯ ಏವಿಯೇಷನ್ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಸಿಯಾಚಿನ್ ಹಿಮನದಿಯು ಪ್ರಪಂಚದ ಎತ್ತರದ ಶಿಖರಗಳಿಂದ ಆವೃತವಾಗಿದೆ. ಕಾಶ್ಮೀರದ ಮಿಲಿಟರಿ ಪ್ರದೇಶದಲ್ಲಿ ಭಾರತದ ವಾಸ್ತವಿಕ ಗಡಿಯ ಸಮೀಪದಲ್ಲಿದೆ. ಇದು 1947ರಲ್ಲಿ ಸ್ವಾತಂತ್ರ್ಯ ಸಿಕ್ಕ ನಂತರ ಎರಡು ದೇಶಗಳ ನಡುವೆ 2-3 ಯುದ್ಧಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ಸಿಯಾಚಿನ್‌ನಲ್ಲಿ ಹಿಮಕುಸಿತ: ಇಬ್ಬರು ನಾಗರಿಕರು, ನಾಲ್ವರು ಯೋಧರು ಹುತಾತ್ಮ
ಚಳಿಗಾಲದಲ್ಲಿ ಪ್ರವಾಸ ಹೋಗಬಹುದಾದ ಈ ಸ್ಥಳಗಳು ನಿಸ್ಸಂದೇಹವಾಗಿ ಭೂಮಿ ಮೇಲಿನ ಸ್ವರ್ಗಗಳು!