ಸಿಯಾಚಿನ್ನಲ್ಲಿ ಹಿಮಕುಸಿತ: ಇಬ್ಬರು ನಾಗರಿಕರು, ನಾಲ್ವರು ಯೋಧರು ಹುತಾತ್ಮ
ದೆಹಲಿ: ಕಾರಾಕೋರಂ ಪರ್ವತ ಶ್ರೇಣಿಯಲ್ಲಿರುವ ಸಿಯಾಚಿನ್ನಲ್ಲಿ ಹಿಮದಡಿ ಸಿಲುಕಿದ್ದ 6 ಯೋಧರು ಹುತಾತ್ಮರಾಗಿದ್ದಾರೆ. ಸಮುದ್ರ ಮಟ್ಟದಿಂದ 18 ಸಾವಿರ ಅಡಿ ಎತ್ತರದಲ್ಲಿರುವ ಸಿಯಾಚಿನ್ನ ಉತ್ತರ ಭಾಗದಲ್ಲಿ ಇಂದು ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಭಾರೀ ಹಿಮಪಾತವಾಗಿತ್ತು. ಹಿಮದಡಿ 8 ಯೋಧರು ಸಿಲುಕಿಕೊಂಡಿದ್ದರು. ಎಲ್ಲ 8 ಜನರನ್ನು ಹಿಮಪಾತದಿಂದ ಭಾರತೀಯ ಸೇನೆ ಹೊರ ತೆಗೆದಿತ್ತು. ಆದ್ರೆ, ಹಿಮ ಕೊರೆತದಿಂದಾಗಿ 8 ಮಂದಿಯಲ್ಲಿ ಇಬ್ಬರು ಹಮಾಲಿಗಳ ಮತ್ತು ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಉಳಿದ ಇಬ್ಬರು ಯೋಧರಿಗೆ ಹತ್ತಿರದ ಸೇನಾ […]
ದೆಹಲಿ: ಕಾರಾಕೋರಂ ಪರ್ವತ ಶ್ರೇಣಿಯಲ್ಲಿರುವ ಸಿಯಾಚಿನ್ನಲ್ಲಿ ಹಿಮದಡಿ ಸಿಲುಕಿದ್ದ 6 ಯೋಧರು ಹುತಾತ್ಮರಾಗಿದ್ದಾರೆ.
ಸಮುದ್ರ ಮಟ್ಟದಿಂದ 18 ಸಾವಿರ ಅಡಿ ಎತ್ತರದಲ್ಲಿರುವ ಸಿಯಾಚಿನ್ನ ಉತ್ತರ ಭಾಗದಲ್ಲಿ ಇಂದು ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಭಾರೀ ಹಿಮಪಾತವಾಗಿತ್ತು. ಹಿಮದಡಿ 8 ಯೋಧರು ಸಿಲುಕಿಕೊಂಡಿದ್ದರು. ಎಲ್ಲ 8 ಜನರನ್ನು ಹಿಮಪಾತದಿಂದ ಭಾರತೀಯ ಸೇನೆ ಹೊರ ತೆಗೆದಿತ್ತು. ಆದ್ರೆ, ಹಿಮ ಕೊರೆತದಿಂದಾಗಿ 8 ಮಂದಿಯಲ್ಲಿ ಇಬ್ಬರು ಹಮಾಲಿಗಳ ಮತ್ತು ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಉಳಿದ ಇಬ್ಬರು ಯೋಧರಿಗೆ ಹತ್ತಿರದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.