ದೆಹಲಿ: ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಯುಕೆ ಮಾಜಿ ಚಾನ್ಸೆಲರ್ ರಿಷಿ ಸುನಕ್(Rishi Sunak) ಅವರು ಮೊದಲ ಸುತ್ತಿನ ಮತದಾನದಲ್ಲಿ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಹಾಗೂ ಯುಕೆ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗುವ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ರಿಷಿ ಸುನಕ್ 88 ಮತಗಳನ್ನು ಗಳಿಸಿದ್ದು, ಪೆನ್ನಿ ಮೊರ್ಡಾಂಟ್, 67 ಮತಗಳು ಮತ್ತು ಟ್ರಸ್ ಲಿಜ್ 50 ಮತಗಳು ಗಳಿಸಿದ್ದಾರೆ. ಹೀಗಾಗಿ ಪೆನ್ನಿ ಮೊರ್ಡಾಂಟ್ ಮತ್ತು ಟ್ರಸ್ ಲಿಜ್ರನ್ನು ಮೀರಿಸಿ ರಿಷಿ ಸುನಾಕ್ ಮುಂದಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಹಣಕಾಸು ಸಚಿವ ನಧಿಮ್ ಜಹಾವಿ ಮತ್ತು ಮಾಜಿ ಕ್ಯಾಬಿನೆಟ್ ಸಚಿವ ಜೆರೆಮಿ ಹಂಟ್ ಎಲಿಮಿನೆಟ್ ಆಗಿದ್ದಾರೆ. ಹಾಗೂ ಇನ್ನೊಬ್ಬ ಭಾರತೀಯ ಮೂಲದ ಸಂಸತ್ತಿನ ಸದಸ್ಯರಾದ ಅಟಾರ್ನಿ ಜನರಲ್ ಸುಯೆಲ್ಲಾ ಬ್ರಾವರ್‌ಮನ್ ಕೂಡ ಈ ರೇಸ್‌ನಲ್ಲಿದ್ದಾರೆ. ಚುನಾವಣಾ ವೇಳಾಪಟ್ಟಿಯಡಿಯಲ್ಲಿ, ಕನ್ಸರ್ವೇಟಿವ್ ನಾಯಕನಾಗಿ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯನ್ನು ಸೆಪ್ಟೆಂಬರ್ 5 ರಂದು ಘೋಷಿಸಲಾಗುವುದು ಎಂದು ತಿಳಿಸಲಾಗಿದೆ. ಏಕೆಂದರೆ ಪಕ್ಷವು ತಡೆರಹಿತ ಹಗರಣದಿಂದ ಬಿದ್ದ ನಂತರ ಅದರ ಜನಪ್ರಿಯ ಬೆಂಬಲವನ್ನು ಪುನರ್ನಿರ್ಮಿಸಲು ಪ್ರಯತ್ನಿಸುತ್ತಿದೆ.