ಬಿಗ್ ಟ್ವಿಸ್ಟ್..! ಆಕ್ರಮಿತ ಜಾಗ ರಷ್ಯಾಗೆ ಬಿಟ್ಟುಕೊಡಲು ಸಿದ್ಧ… ಆದರೆ… ಉಕ್ರೇನ್ ಅಧ್ಯಕ್ಷ ಜೆಲೆನ್ಸ್​ಕಿ ಷರುತ್ತು

|

Updated on: Dec 01, 2024 | 6:00 PM

Russia Ukraine war updates: ರಷ್ಯಾದಿಂದ ಆಕ್ರಮಿತವಾಗಿರುವ ಉಕ್ರೇನ್​ನ ಭೂಭಾಗವನ್ನು ರಷ್ಯಾಗೆ ಬಿಟ್ಟುಕೊಡಲು ಸಿದ್ಧ ಇರುವುದಾಗಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್​ಕಿ ಹೇಳಿದ್ದಾರೆ. ಆದರೆ, ಕೆಲ ಷರತ್ತುಗಳನ್ನೂ ಮುಂದಿಟ್ಟಿದ್ದಾರೆ. ರಷ್ಯಾಗೆ ಬಿಟ್ಟುಕೊಡುವುದು ತಾತ್ಕಾಲಿಕವಾಗಿ ಮಾತ್ರ ಎಂದಿದ್ದಾರೆ. ಹಾಗೆಯೇ, ಉಕ್ರೇನ್​ಗೆ ನ್ಯಾಟೋ ಸದಸ್ಯತ್ವ ನೀಡಬೇಕು ಎಂಬುದು ಅದರ ಪ್ರಮುಖ ಷರತ್ತು.

ಬಿಗ್ ಟ್ವಿಸ್ಟ್..! ಆಕ್ರಮಿತ ಜಾಗ ರಷ್ಯಾಗೆ ಬಿಟ್ಟುಕೊಡಲು ಸಿದ್ಧ... ಆದರೆ... ಉಕ್ರೇನ್ ಅಧ್ಯಕ್ಷ ಜೆಲೆನ್ಸ್​ಕಿ ಷರುತ್ತು
ವೊಲೋಡಿಮಿರ್ ಝೆಲೆನ್ಸ್​ಕಿ
Follow us on

ನವದೆಹಲಿ, ಡಿಸೆಂಬರ್ 1: ಇಡೀ ವಿಶ್ವಕ್ಕೆ ತಲೆನೋವಾಗಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಅಂತ್ಯಗೊಳ್ಳುವ ಸಾಧ್ಯತೆ ತೋರತೊಡಗಿದೆ. ಈ ನಿಟ್ಟಿನಲ್ಲಿ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್​ಕಿ ಸುಳಿವು ನೀಡಿದ್ದಾರೆ. ಶಾಂತಿಗೋಸ್ಕರ ರಷ್ಯಾ ಆಕ್ರಮಿತ ಉಕ್ರೇನ್ ಜಾಗವನ್ನು ತ್ಯಾಗ ಮಾಡಲು ತಾನು ಸಿದ್ಧ ಇರುವುದಾಗಿ ಅವರು ಹೇಳಿರುವುದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಒಂದು ಪ್ರಮುಖ ಷರತ್ತನ್ನೂ ಮುಂದಿಟ್ಟಿದ್ದಾರೆ. ಈ ಷರತ್ತು ರಷ್ಯಾಗೂ ಒಂದು ರೀತಿಯಲ್ಲಿ ನೆತ್ತಿಯ ಮೇಲಿನ ಕತ್ತಿಯಂತಾಗುವ ಸಾಧ್ಯತೆಯೂ ಇದೆ.

ಉಕ್ರೇನ್ ಅಧ್ಯಕ್ಷರು ಮುಂದಿಟ್ಟಿರುವ ಷರತ್ತೇನು?

ರಷ್ಯಾ ಆಕ್ರಮಿಸಿಕೊಂಡಿರುವ ಉಕ್ರೇನ್​ನ ಪ್ರದೇಶಗಳನ್ನು ತಾತ್ಕಾಲಿಕವಾಗಿ ರಷ್ಯಾಗೆ ಬಿಟ್ಟುಕೊಡುತ್ತೇವೆ. ಅದಕ್ಕೆ ಬದಲಾಗಿ ಉಕ್ರೇನ್ ದೇಶಕ್ಕೆ ನ್ಯಾಟೋ ಸದಸ್ಯತ್ವ ಸಿಗಬೇಕು ಎಂಬುದು ಅವರ ಷರುತ್ತು. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಉಕ್ರೇನ್ ತಾತ್ಕಾಲಿಕವಾಗಿ ಮಾತ್ರ ರಷ್ಯಾಗೆ ಈ ಪ್ರದೇಶಗಳನ್ನು ನೀಡಲಿದೆ. ಮುಂದೆ ನ್ಯಾಟೋ ಭದ್ರತೆ ಸಿಕ್ಕ ಬಳಿಕ ರಾಜತಾಂತ್ರಿಕವಾಗಿ ಆ ಪ್ರದೇಶಗಳನ್ನು ವಾಪಸ್ ಪಡೆಯಲು ಪ್ರಯತ್ನಿಸಲಿದೆ ಎಂದೂ ಝೆಲೆನ್ಸ್​ಕಿ ಹೇಳಿದ್ದಾರೆ.

ಇದನ್ನೂ ಓದಿ: ಟ್ರಂಪ್ ಈಗ ಸುರಕ್ಷಿತವಾಗಿಲ್ಲ ಎಂದ ರಷ್ಯಾ ಅಧ್ಯಕ್ಷ ಪುಟಿನ್

2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದೆ. ಕಳೆದ 33 ತಿಂಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಯುದ್ಧದಲ್ಲಿ ಉಕ್ರೇನ್ ನಿರೀಕ್ಷೆಮೀರಿದ ರೀತಿಯಲ್ಲಿ ಪ್ರತಿರೋಧ ತೋರುತ್ತಿದೆ. ಈ ಆಕ್ರಮಣದಲ್ಲಿ ಉಕ್ರೇನ್​ನ ಡೋನೆಸ್ಕ್ ಮತ್ತು ಲುಹಾನ್ಸ್​ಕ್ ಪ್ರಾಂತ್ಯದ ಬಹುಭಾಗಗಳು ಈಗ ರಷ್ಯಾ ನಿಯಂತ್ರಣದಲ್ಲಿವೆ. ಇವು ಉಕ್ರೇನ್​ನ ಶೇ. 27 ಭೂಭಾಗದಷ್ಟಿದೆ.

2014ರಲ್ಲಿ ಉಕ್ರೇನ್​ನ ಕ್ರಿಮಿಯಾ ಪ್ರದೇಶವನ್ನು ರಷ್ಯಾ ಆಕ್ರಮಿಸಿಕೊಂಡಿದೆ. ಆದರೆ, ಉಕ್ರೇನ್ ಇದನ್ನು ರಷ್ಯಾಗೆ ಅಧಿಕೃತವಾಗಿ ಬಿಟ್ಟುಕೊಟ್ಟಿಲ್ಲ. ಈಗ ಕದನ ವಿರಾಮ ಘೋಷಣೆ ಮಾಡಿದರೆ ಈ ಎಲ್ಲಾ ಆಕ್ರಮಿತ ಪ್ರದೇಶಗಳನ್ನು ಅಧಿಕೃತವಾಗಿ ಮತ್ತು ತಾತ್ಕಾಲಿಕವಾಗಿ ರಷ್ಯಾಗೆ ಬಿಟ್ಟುಕೊಡುವುದಾಗಿ ಉಕ್ರೇನ್ ಹೇಳಿದೆ.

ಉಕ್ರೇನ್​ಗೆ ನ್ಯಾಟೋ ಸದಸ್ಯತ್ವ ಸಿಗಬೇಕು. ಆ ಬಳಿಕ ರಾಜತಾಂತ್ರಿಕ ಮಾರ್ಗದಲ್ಲಿ ಕ್ರಿಮಿಯಾ ಸೇರಿದಂತೆ ಎಲ್ಲಾ ರಷ್ಯಾ ಆಕ್ರಮಿತ ಪ್ರದೇಶಗಳನ್ನು ವಾಪಸ್ ಪಡೆಯಲು ಯತ್ನಿಸುವ ಪ್ಲಾನ್ ಅನ್ನು ಝೆಲೆನ್ಸ್​ಕಿ ಹೊಂದಿದ್ದಾರೆ.

ಇದನ್ನೂ ಓದಿ: ಹಿಂಸಾಚಾರದ ನಡುವೆ ಪಾಕ್​ನಿಂದ ಶಸ್ತ್ರಾಸ್ತ್ರಗಳ ಖರೀದಿಸಿದ ಬಾಂಗ್ಲಾದೇಶ

ರಷ್ಯಾ ಇದಕ್ಕೆ ಒಪ್ಪೀತಾ?

ಅಮೆರಿಕ ನಾಯಕತ್ವದ ನ್ಯಾಟೋ ಸಂಘಟನೆಯು ಉಕ್ರೇನ್ ಬಳಿ ನೆಲೆ ಸ್ಥಾಪಿಸಲು ಹೊರಟಿದ್ದು, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಲು ಪ್ರಮುಖ ಕಾರಣ. ಈಗ ಉಕ್ರೇನ್​ಗೆ ನ್ಯಾಟೋ ಸದಸ್ಯತ್ವ ಸಿಕ್ಕಲ್ಲಿ ರಷ್ಯಾ ಬಗುಲಲ್ಲಿ ಪ್ರಬಲ ವೈರಿಶಕ್ತಿ ಸ್ಥಾಪಿತವಾದಂತೆ. ರಷ್ಯಾ ಈ ಷರತ್ತಿಗೆ ಒಪ್ಪದೇ ಹೋಗಬಹುದು ಎನ್ನುತ್ತಾರೆ ಕೆಲ ತಜ್ಞರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ