ಈ ಪೃಥ್ವಿಯಿಂದ ಕಣ್ಮರೆಯಾಗುವ ಭಯದಲ್ಲಿ ದಕ್ಷಿಣ ಕೊರಿಯಾ, ಕಾರಣವೇನು?

ದಕ್ಷಿಣ ಕೊರಿಯಾವು ಈ ಪೃಥ್ವಿಯಿಂದ ಕಣ್ಮರೆಯಾಗುವ ಭಯದಲ್ಲಿದೆ. ಕ್ಷಿಪ್ರ ಆಧುನೀಕರಣ ಮತ್ತು ಆರ್ಥಿಕ ಬೆಳವಣಿಗೆಗೆ ಒಂದು ಕಾಲದಲ್ಲಿ ಹೆಸರಾದ ದಕ್ಷಿಣ ಕೊರಿಯಾ ಈಗ ಫಲವತ್ತತೆ ಬಿಕ್ಕಟ್ಟನ್ನು ಎದುರಿಸುತ್ತಿದೆ. ಜನಸಂಖ್ಯೆಯಲ್ಲಿ ನಿರಂತರ ಇಳಿಕೆ ಕಂಡುಬರುತ್ತಿದೆ, ಈ ಸಮಸ್ಯೆ ಪರಿಹರಿಸಲು ರಾಷ್ಟ್ರ ಹೆಣಗಾಡುತ್ತಿದೆ. ದಕ್ಷಿಣ ಕೊರಿಯಾದಲ್ಲಿ ಜನನ ಪ್ರಮಾಣವು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಜನಸಂಖ್ಯೆಯ ಗಾತ್ರ ಮೂರನೇ ಒಂದು ಭಾಗಕ್ಕೆ ಕಡಿಮೆಯಾಗುತ್ತದೆ.

ಈ ಪೃಥ್ವಿಯಿಂದ ಕಣ್ಮರೆಯಾಗುವ ಭಯದಲ್ಲಿ ದಕ್ಷಿಣ ಕೊರಿಯಾ, ಕಾರಣವೇನು?
ಜನಸಂಖ್ಯೆ
Follow us
ನಯನಾ ರಾಜೀವ್
|

Updated on: Dec 02, 2024 | 11:38 AM

ದಕ್ಷಿಣ ಕೊರಿಯಾವು ಈ ಪೃಥ್ವಿಯಿಂದ ಕಣ್ಮರೆಯಾಗುವ ಭಯದಲ್ಲಿದೆ. ಕ್ಷಿಪ್ರ ಆಧುನೀಕರಣ ಮತ್ತು ಆರ್ಥಿಕ ಬೆಳವಣಿಗೆಗೆ ಒಂದು ಕಾಲದಲ್ಲಿ ಹೆಸರಾದ ದಕ್ಷಿಣ ಕೊರಿಯಾ ಈಗ ಫಲವತ್ತತೆ ಬಿಕ್ಕಟ್ಟನ್ನು ಎದುರಿಸುತ್ತಿದೆ. ಜನಸಂಖ್ಯೆಯಲ್ಲಿ ನಿರಂತರ ಇಳಿಕೆ ಕಂಡುಬರುತ್ತಿದೆ, ಈ ಸಮಸ್ಯೆ ಪರಿಹರಿಸಲು ರಾಷ್ಟ್ರ ಹೆಣಗಾಡುತ್ತಿದೆ. ದಕ್ಷಿಣ ಕೊರಿಯಾದಲ್ಲಿ ಜನನ ಪ್ರಮಾಣವು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಜನಸಂಖ್ಯೆಯ ಗಾತ್ರ ಮೂರನೇ ಒಂದು ಭಾಗಕ್ಕೆ ಕಡಿಮೆಯಾಗುತ್ತದೆ.

ಸಮಸ್ಯೆಯ ಆರಂಭ 1960ರ ದಶಕದಲ್ಲಿ ಆರಂಭವಾದ ಕುಟುಂಬ ಯೋಜನಾ ನೀತಿಯೇ ಇದಕ್ಕೆಲ್ಲಾ ಕಾರಣ. ಜನನ ಪ್ರಮಾಣ ಕಡಿಮೆ ಮಾಡಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಯಿತು. ಆ ಸಮಯದಲ್ಲಿ ದಕ್ಷಿಣ ಕೊರಿಯಾದ ತಲಾ ಆದಾಯವು ಜಾಗತಿಕ ಸರಾಸರಿಯ ಕೇವಲ 20 ಪ್ರತಿಶತದಷ್ಟಿತ್ತು. ಫಲವತ್ತತೆಯ ದರವು ಪ್ರತಿ ಒಬ್ಬ ಮಹಿಳೆ 6ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುತ್ತಿದ್ದರು. 1982 ರ ಹೊತ್ತಿಗೆ, ಆರ್ಥಿಕ ಬೆಳವಣಿಗೆಯೊಂದಿಗೆ, ಫಲವತ್ತತೆಯ ದರವು 2.4 ಕ್ಕೆ ಇಳಿಯಿತು.

1983ರಿಂದ ಫಲವತ್ತತೆ ದರ ನಿಯಂತ್ರಣದಲ್ಲಿತ್ತು, ಅಂದಿನಿಂದ ಕಡಿಮೆಯಾಗಿರಲಿಲ್ಲ. ದಕ್ಷಿಣ ಕೊರಿಯಾವು ತನ್ನ ಜನಸಂಖ್ಯೆಯ ಶೇ.70ರಷ್ಟು ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಕೇವಲ 14 ಮಿಲಿಯನ್ ಜನರು ಮಾತ್ರ ದೇಶದಲ್ಲಿರುತ್ತಾರೆ, ಇದು ಆರ್ಥಿಕತೆಯನ್ನು ಅಸ್ಥಿರಗೊಳಿಸುವ ಆತಂಕಕಾರಿ ಪರಿಸ್ಥಿತಿ ಎಂದು ಕೆಲವು ವಿಶ್ಲೇಷಕರು ಹೇಳಿದ್ದಾರೆ.

ಮತ್ತಷ್ಟು ಓದಿ: World Population Day 2024 : ದೇಶದ ಅಭಿವೃದ್ಧಿಗೆ ಹೊರೆಯಾಗದಿರಲಿ ಜನ ಸಂಖ್ಯೆ ಹೆಚ್ಚಳ

ಇತ್ತೀಚೆಗೆ ಯುವಕರು ತಮ್ಮ ಕೆರಿಯರ್ ಬಗ್ಗೆ ಹೆಚ್ಚಿನ ಗಮನವಹಿಸುತ್ತಿದ್ದಾರೆ. ಮದುವೆಯಾಗುವವರು, ಮಹಿಳೆಯರು ಮನೆಯ ಜವಾಬ್ದಾರಿಗಳಲ್ಲಿ ಹೆಚ್ಚು ಸಮಾನತೆಯನ್ನು ಬಯಸುತ್ತಾರೆ. 2024 ರ ಸಮೀಕ್ಷೆಯಲ್ಲಿ, ಮೂರನೇ ಒಂದು ಭಾಗದಷ್ಟು ಮಹಿಳೆಯರು ಮದುವೆಯಾಗಲು ಬಯಸುವುದಿಲ್ಲ. 93 ಪ್ರತಿಶತ ಮಹಿಳೆಯರು ಮನೆಗೆಲಸದ ಹೊರೆ ಮತ್ತು ಮಕ್ಕಳ ಪೋಷಣೆಯನ್ನು ಉಲ್ಲೇಖಿಸಿ ಮದುವೆಯಾಗಲು ಬಯಸುವುದಿಲ್ಲ.

ಮಕ್ಕಳನ್ನು ನೋಡಿಕೊಳ್ಳಳು ವಿದೇಶಿ ಮನೆಗೆಲಸಗಾರರನ್ನು ನೇಮಿಸಿಕೊಳ್ಳುವುದು, ತೆರಿಗೆಯಿಂದ ವಿನಾಯಿತಿ, 30 ವರ್ಷದೊಳಗಿನ ಪುರುಷರು 3 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದರೆ ಕಡ್ಡಾಯ ಮಿಲಿಟರಿ ಸೇವೆಯಿಂದ ವಿನಾಯಿತಿ ನೀಡುವುದು ಸೇರಿ ಸಾಕಷ್ಟು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ