Russia Ukraine Conflict ರಷ್ಯಾದ 5 ಯುದ್ಧ ವಿಮಾನ, 1 ಹೆಲಿಕಾಪ್ಟರ್ ಹೊಡೆದುರುಳಿಸಿದ ಉಕ್ರೇನ್
ಉಕ್ರೇನ್ ಸಶಸ್ತ್ರ ಪಡೆಗಳ ವಾಯುಪಡೆಯು ರಷ್ಯಾ ವೈಮಾನಿಕ ದಾಳಿಯನ್ನು ಹಿಮ್ಮೆಟ್ಟಿಸುತ್ತದೆ. ರಾಜ್ಯ ರಕ್ಷಣಾ ಪಡೆಗಳು ಸಂಪೂರ್ಣ ಯುದ್ಧ ಸಿದ್ಧತೆಯಲ್ಲಿವೆ, ರಕ್ಷಣಾತ್ಮಕ ಸ್ಥಾನಗಳನ್ನು ತೆಗೆದುಕೊಂಡಿವೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಉಕ್ರೇನ್ ಹೇಳಿದೆ
ಉಕ್ರೇನ್ (Ukraine) ದೇಶದ ಪೂರ್ವದಲ್ಲಿ ರಷ್ಯಾದ 5 ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಮಿಲಿಟರಿ ಹೇಳಿದೆ. ಲುಹಾನ್ಸ್ಕ್ (Luhansk) ಪ್ರದೇಶದಲ್ಲಿ ಐದು ರಷ್ಯಾದ (Russia) ವಿಮಾನಗಳು ಮತ್ತು ರಷ್ಯಾದ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಮಿಲಿಟರಿ ಹೇಳಿರುವುದಾಗಿ ಎಂದು ರಾಯಿಟರ್ಸ್ ವರದಿ ಮಾಡಿದೆ. ಏತನ್ಮಧ್ಯೆ, ರಷ್ಯಾದ ರಕ್ಷಣಾ ಸಚಿವಾಲಯವು ಉಕ್ರೇನ್‌ನ ವಾಯು ನೆಲೆಗಳು ಮತ್ತು ಮಿಲಿಟರಿ ಮೂಲಸೌಕರ್ಯಗಳನ್ನು ನಾಶಮಾಡಿರುವುದಾಗಿ ಐಎಫ್‌ಎಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಉಕ್ರೇನ್‌ನ ಪಡೆಗಳು “ಇಂದು, ಫೆಬ್ರವರಿ 24, ಮುಂಜಾನೆ 5.00 ಗಂಟೆಗೆ, ರಷ್ಯಾದ ಒಕ್ಕೂಟದ ಸಶಸ್ತ್ರ ಪಡೆಗಳು ಪೂರ್ವದಲ್ಲಿ ನಮ್ಮ ಘಟಕಗಳ ಮೇಲೆ ತೀವ್ರವಾದ ಶೆಲ್ ದಾಳಿಯನ್ನು ಪ್ರಾರಂಭಿಸಿದವು ಮತ್ತು ಬೋರಿಸ್ಪಿಲ್, ಓಜೆರ್ನಾಯ್, ಕುಲ್ಬಾಕಿನ್, ಚುಗೆವ್ನಲ್ಲಿನ ವಾಯುನೆಲೆಗಳ ಮೇಲೆ ರಾಕೆಟ್ ಮತ್ತು ಬಾಂಬ್ ದಾಳಿಗಳನ್ನು ಪ್ರಾರಂಭಿಸಿದವು. ಅದೇ ವೇಳೆ ರಷ್ಯಾ ಉಕ್ರೇನ್‌ನ ಪ್ರದೇಶ ಮತ್ತು ವಸಾಹತುಗಳ ಮೇಲೆ ಫಿರಂಗಿ ಶೆಲ್ ದಾಳಿಯನ್ನು ಪ್ರಾರಂಭಿಸಿದೆ. ಉಕ್ರೇನ್ ಸಶಸ್ತ್ರ ಪಡೆಗಳ ವಾಯುಪಡೆಯು ರಷ್ಯಾ ವೈಮಾನಿಕ ದಾಳಿಯನ್ನು ಹಿಮ್ಮೆಟ್ಟಿಸುತ್ತದೆ. ರಾಜ್ಯ ರಕ್ಷಣಾ ಪಡೆಗಳು ಸಂಪೂರ್ಣ ಯುದ್ಧ ಸಿದ್ಧತೆಯಲ್ಲಿವೆ, ರಕ್ಷಣಾತ್ಮಕ ಸ್ಥಾನಗಳನ್ನು ತೆಗೆದುಕೊಂಡಿವೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಉಕ್ರೇನ್ ಹೇಳಿದೆ. “ಒಡೆಸ್ಸಾದಲ್ಲಿ ರಷ್ಯಾದ ಪಡೆಗಳ ಲ್ಯಾಂಡಿಂಗ್ ಬಗ್ಗೆ ಮಾಹಿತಿಯು ನಿಜವಲ್ಲ … ಒಟ್ಟಿಗೆ ಗೆಲ್ಲೋಣ! ಎಂದು ಉಕ್ರೇನ್ ಸರ್ಕಾರ ಹೇಳಿಕೆ ನೀಡಿದೆ .
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ‘ಮಿಲಿಟರಿ ಕಾರ್ಯಾಚರಣೆ’ಗೆ ಆದೇಶಿಸಿದ ನಂತರ ಉಕ್ರೇನ್ ಬಿಕ್ಕಟ್ಟು ಗುರುವಾರ ಮುಂಜಾನೆ ತೀವ್ರವಾಗಿ ಉಲ್ಬಣಗೊಂಡಿತು. “ನಾನು ಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿದ್ದೇನೆ” ಎಂದು ಅವರು ದೂರದರ್ಶನದಲ್ಲಿ ರಷ್ಯಾದ ಜನರಿಗೆ ಮತ್ತು ಜಗತ್ತನ್ನು ಉದ್ದೇಶಿಸಿ ಹೇಳಿದರು. ಮುಂದಿನ ಗಂಟೆಗಳಲ್ಲಿ ಪೂರ್ವ ಯುರೋಪಿನ ದೇಶದಾದ್ಯಂತ ಹಲವಾರು ಪ್ರಮುಖ ನಗರಗಳಲ್ಲಿ ಸ್ಫೋಟಗಳು ಕೇಳಿಬಂದವು ಮತ್ತು ಸುದ್ದಿ ಸಂಸ್ಥೆ ರಾಯಿಟರ್ಸ್ ರಾಜಧಾನಿ ಕೈವ್‌ನಲ್ಲಿರುವ ಉಕ್ರೇನಿಯನ್ ಮಿಲಿಟರಿ ಸ್ಥಾಪನೆಗಳ ಮೇಲೆ ಕ್ಷಿಪಣಿ ದಾಳಿಗಳನ್ನು ವರದಿ ಮಾಡಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ ಮಾತನಾಡಿದ್ದು, ಬಿಡೆನ್ ರಷ್ಯಾದ ಕ್ರಮಗಳನ್ನು ಖಂಡಿಸಿದ್ದಾರೆ ಎಂದಿದ್ದಾರೆ. ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರು ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವಂತೆ ಪುಟಿನ್ ಅವರನ್ನು ಒತ್ತಾಯಿಸಿದ್ದಾರೆ. “ಅಧ್ಯಕ್ಷ ಪುಟಿನ್, ಮಾನವೀಯತೆಯ ಹೆಸರಿನಲ್ಲಿ ನಿಮ್ಮ ಸೈನ್ಯವನ್ನು ರಷ್ಯಾಕ್ಕೆ ಹಿಂತಿರುಗಿ ಎಂದು ವಿಶ್ವಸಂಸ್ಥೆ ಹೇಳಿದೆ.
ಯುರೋಪಿಯನ್ ವಿಮಾನಗಳು ಉಕ್ರೇನ್‌ನ ಮೇಲೆ ಅಥವಾ ಸಮೀಪದಲ್ಲಿ ಹಾರದಂತೆ ಎಚ್ಚರಿಕೆ ನೀಡಲಾಗಿದೆ. ಭಾರತ ಸರ್ಕಾರವು ಅದರ 20,000 ಕ್ಕೂ ಹೆಚ್ಚು ಪ್ರಜೆಗಳನ್ನು ವಾಪಸು ಕಳುಹಿಸಲು ವೇಗದಲ್ಲಿ ಕೆಲಸ ಮಾಡುತ್ತಿದೆ. ಅವರಲ್ಲಿ ಹಲವಾರು ವೈದ್ಯಕೀಯ ವಿದ್ಯಾರ್ಥಿಗಳಿದ್ದಾರೆ. ಎರಡು ವಿಮಾನಗಳು ಇಲ್ಲಿಯವರೆಗೆ ಬಂದಿಳಿದಿವೆ, 420 ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯಲಾಗಿದೆ, ಕನಿಷ್ಠ ನಾಲ್ಕು ಇನ್ನೂ ಅಲ್ಲಿಂದ ಬರಲಿದೆ ಎಂದು ಸುದ್ದಿಮೂಲಗಳು ಹೇಳಿವೆ.
ಪ್ರಮುಖ ಪಾಶ್ಚಿಮಾತ್ಯ ಶಕ್ತಿಗಳಾದ ಯುಎಸ್, ಯುಕೆ ಮತ್ತು ಯುರೋಪಿಯನ್ ಯೂನಿಯನ್ -ಹಾಗೆಯೇ ಇತರ ದೇಶಗಳು ರಷ್ಯಾದ ವಿರುದ್ಧ ನಿರ್ಬಂಧಗಳನ್ನು ಘೋಷಿಸಿವೆ, ಆದರೆ ಪುಟಿನ್ ಸರ್ಕಾರವು ಇದಕ್ಕೆ ತಲೆಕೆಡಿಸಿಕೊಂಡಿಲ್ಲ.
ಇದನ್ನೂ ಓದಿ: Russia Vs Ukraine: ಸರಿಯಾಗ್ ಮಾತಾಡ್ರೀ: ಗುಪ್ತಚರ ಇಲಾಖೆ ಮುಖ್ಯಸ್ಥನಿಗೆ ತಾಕೀತು ಮಾಡಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
Published On - 11:37 am, Thu, 24 February 22