Corona Vaccine ಅಮೆರಿಕಾದಲ್ಲಿ ಬಳಕೆಗೆ ಲಭ್ಯವಾ ಫೈಜರ್, ಬಯೋಎನ್​ಟೆಕ್ ಲಸಿಕೆ?

| Updated By: ganapathi bhat

Updated on: Apr 07, 2022 | 10:46 AM

ಫೈಜರ್ ಮತ್ತು ಬಯೋಎನ್​ಟೆಕ್ ಲಸಿಕೆ USನಲ್ಲಿ ಬಳಕೆಗೆ ಲಭ್ಯವಾಗುವ ಸೂಚನೆ ಸಿಕ್ಕಿದೆ. ಅಮೆರಿಕಾದಲ್ಲಿ 3 ಲಕ್ಷ ಜೀವಗಳನ್ನು ಬಲಿ ಪಡೆದುಕೊಂಡ ಕೊವಿಡ್ ವೈರಾಣುವಿನ ಅಂತ್ಯಕಾಲ ಆರಂಭವಾಗಲಿದೆ ಎನ್ನಲಾಗುತ್ತಿದೆ.

Corona Vaccine ಅಮೆರಿಕಾದಲ್ಲಿ ಬಳಕೆಗೆ ಲಭ್ಯವಾ ಫೈಜರ್, ಬಯೋಎನ್​ಟೆಕ್ ಲಸಿಕೆ?
ಸಾಂದರ್ಭಿಕ ಚಿತ್ರ
Follow us on

ಯುಎಸ್​ನಲ್ಲಿ ಕೊವಿಡ್ 19 ವಿರುದ್ಧದ ಫೈಜರ್ ಮತ್ತು ಬಯೊಎನ್​ಟೆಕ್ ಲಸಿಕೆಯ ಬಳಕೆಗೆ ಇನ್ನು ಒಂದೇ ಹೆಜ್ಜೆ ಬಾಕಿ ಉಳಿದಿದೆ. ಲಸಿಕೆಯನ್ನು ತುರ್ತು ಬಳಕೆಗೆ ಲಭ್ಯವಾಗುವಂತೆ ಅನುಮತಿ ನೀಡಿ ಅಮೆರಿಕಾ ಸರ್ಕಾರ ಆದೇಶ ನೀಡಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಅಮೆರಿಕಾದಲ್ಲಿ 3 ಲಕ್ಷ ಜೀವಗಳನ್ನು ಬಲಿ ಪಡೆದುಕೊಂಡ ಕೊವಿಡ್ ವೈರಾಣುವಿನ ಅಂತ್ಯಕಾಲ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಆರೋಗ್ಯ ಕಾರ್ಯಕರ್ತರು ಮತ್ತು ದಾದಿಯರಿಗೆ ಮೊದಲ ಸುತ್ತಿನಲ್ಲಿ ಲಸಿಕೆ ನೀಡುವ ಬಗ್ಗೆ ಮಾಹಿತಿ ದೊರಕಿದೆ. ಅಮೆರಿಕಾದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್​ನಿಂದ (FDA) ಫೈಜರ್ ಮತ್ತು ಜರ್ಮನ್​ನ ಬಯೋಎನ್​ಟೆಕ್ ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮತಿ ಸಿಗಬೇಕಿದೆ.

ಲಸಿಕೆಯ ಮೊದಲ ಡೋಸ್​ಗಳನ್ನು ಯುಎಸ್, ಬ್ರಿಟನ್ ಮತ್ತು ಇತರ ಕೆಲ ದೇಶಗಳು ಸೇರಿ ಪ್ರಯೋಗಿಸುವ ಬಗ್ಗೆಯೂ ಹೇಳಲಾಗುತ್ತಿದೆ. ಚಳಿಗಾಲದ ಅವಧಿಯಲ್ಲಿ ಈ ಕಾರ್ಯ ಪೂರ್ಣಗೊಳಿಸುವ ಬಗ್ಗೆ ಉದ್ದೇಶಿಸಲಾಗಿದೆ ಎಂದೂ ತಿಳಿದುಬಂದಿದೆ. ಈ ಬಗ್ಗೆ FDA ಅಧ್ಯಯನ ನಡೆಸುತ್ತಿದೆ. FDA ಬಹಳ ನಿಧಾನಗತಿಯಿಂದ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಟ್ರಂಪ್ ಆಡಳಿತದಿಂದ ಬಹಳಷ್ಟು ಒತ್ತಡ ಅನುಭವಿಸಿದೆ ಮತ್ತು FDA ಮುಖ್ಯಸ್ಥ ಸ್ಟೀಫನ್ ಹಾನ್​ರನ್ನು ಹುದ್ದೆಯಿಂದ ತೆಗೆಯುವ ಬಗ್ಗೆಯೂ ಒತ್ತಡವಿದೆ ಎಂಬ ಮಾತುಗಳು ಕೇಳಿಬಂದಿವೆ.

ಫೈಜರ್ ಮತ್ತು ಬಯೋಎನ್​ಟೆಕ್ ಬಳಕೆಗೆ ಲಭ್ಯವಾದರೆ ಯುಎಸ್ ಇತಿಹಾಸದಲ್ಲೇ ಅತಿ ದೊಡ್ಡ ಲಸಿಕೆ ವಿತರಣಾ ಕಾರ್ಯಕ್ರಮ ನಡೆಯಲಿದೆ. ಇದರಿಂದ ಅಮೆರಿಕಾವನ್ನು ಹಿಂಬಾಲಿಸುವ ಇತರ ರಾಷ್ಟ್ರಗಳಿಗೂ ಸಹಾಯವಾಗಲಿದೆ. ಕೊವಿಡ್ ಸಂಕಷ್ಟದಿಂದ ಪಾರಾಗಲು ವಿಶ್ವದ ರಾಷ್ಟ್ರಗಳು ಲಸಿಕೆಗಾಗಿ ಕಾಯುತ್ತಿವೆ. ಫೈಜರ್ ಮತ್ತು ಬಯೋಎನ್​ಟೆಕ್ ಲಸಿಕೆಗಳು ಮೊದಲು ಸಿದ್ಧವಾಗಿ ವಿಶ್ವ ಮಾರುಕಟ್ಟೆಗೆ ದಾಪುಗಾಲು ಇಡುವ ಸೂಚನೆ ಸಿಕ್ಕಿದೆ.

ಅಮೆರಿಕಾವು ಮಾಡೆರ್ನಾ ಲಸಿಕೆಯನ್ನೂ ನಂತರದ ಸ್ಥಾನದಲ್ಲಿ ಪರಿಗಣಿಸಿದ್ದು, ಜನವರಿ ತಿಂಗಳ ಮೊದಲಾರ್ಧದಲ್ಲಿ ಜಾನ್​ಸನ್ & ಜಾನ್​ಸನ್ ಲಸಿಕೆ ಸಿದ್ಧವಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಒಂದೇ ದಿನ 635 ಮಂದಿಯಲ್ಲಿ ಕೊರೊನಾ ಸೋಂಕುಪತ್ತೆ: ರಾಜ್ಯದಲ್ಲಿ ಒಟ್ಟು 1210 ಹೊಸ ಪ್ರಕರಣಗಳು

Published On - 5:46 pm, Sat, 12 December 20