ವಾಷಿಂಗ್ಟನ್: ಜನರ ದೇಹ ಹೊಕ್ಕಿ ಲಕ್ಷ ಲಕ್ಷ ಜನರ ಪ್ರಾಣ ತೆಗೆದ್ರೂ ಹೆಮ್ಮಾರಿ ಕೊರೊನಾ ಕೋಪ ಕಮ್ಮಿಯಾಗಿಲ್ಲ. ಎದುರಿಗಿರೋ ಕೋಟೆಯನ್ನ ಧೂಳಿಪಟ ಮಾಡಿ ಅಟ್ಟಹಾಸ ಮೆರೆಯುತ್ತಿದೆ. ಕ್ರೂರಿ ಕೊರೊನಾಗೆ ವಿಶ್ವದ ದೊಡ್ಡಣ ಅಮೆರಿಕ ಸಹ ತತ್ತರಿಸಿ ಹೋಗಿದೆ.
ಅಮರಿಕದಲ್ಲಿ ಕೊರೊನಾ ದಿಂದ ದಿನಕ್ಕೆ ಸಾವಿರಾರು ಜನ ಸಾವಿಗೀಡಾಗುತ್ತಿದ್ದಾರೆ. ಹಾಗಾಗಿ ಕೊರೊನಾದಿಂದ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ಗೀಲೆಡ್ ಸೈನ್ಸಸ್ ಕಂಪನಿಯ ರೆಮ್‌ಡಿಸಿವಿರ್ ಔಷಧಿ ನೀಡಲು ಅಮೆರಿಕದ FDA(ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಒಪ್ಪಿಗೆ ನೀಡಿದೆ.
ರೆಮ್‌ಡಿಸಿವಿರ್ ಔಷಧಿ ಸೇವಿಸಿದ ಶೇಕಡಾ 50 ರಷ್ಟು ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಗಂಭೀರ ಸ್ಥಿತಿಯಲ್ಲಿ ಇರುವ ರೋಗಿಗಳಿಗೆ ಐದು ದಿನಗಳ ಕಾಲ ರೆಮ್‌ಡಿಸಿವಿರ್ ಔಷಧಿ ನೀಡಲು ಎಫ್ಡಿಎ ಒಪ್ಪಿಗೆ ನೀಡಿದೆ. ಇದರಿಂದ ಕ್ರೂರಿ ಕೊರೊನಾದಿಂದ ಮೃತಪಡುವವರ ಸಂಖ್ಯೆ ಇಳಿಕೆಯಾಗುವ ಸಾಧ್ಯತೆ ಇದೆ.
Published On - 9:25 am, Sat, 2 May 20