AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಎಸ್-ಕೆನಡಾ ವಾಣಿಜ್ಯ ಯುದ್ಧ : ಕೆನಡಾದ ಹಾಲು-ಮದ್ಯ, ಬೈಕ್ ಆಮದಿಗೆ ಅಮೆರಿಕ ಬ್ರೇಕ್

ಅಮೆರಿಕ ಮತ್ತು ಕೆನಡಾ ನಡುವಿನ ವಾಣಿಜ್ಯ ಯುದ್ಧ ತೀವ್ರಗೊಂಡಿದೆ. ಅಮೆರಿಕ ತನ್ನ ಉತ್ಪನ್ನಗಳ ಮೇಲಿನ ಕೆನಡಾದ ಸುಂಕಗಳಿಗೆ ಪ್ರತಿಕಾರವಾಗಿ ಕೆನಡಾದಿಂದ ಆಮದಾಗುವ ಡೈರಿ, ಮದ್ಯ ಮತ್ತು ಮೋಟಾರ್‌ಸೈಕಲ್‌ಗಳ ಮೇಲೆ ನಿಷೇಧ ಹೇರಿದೆ. ಇದರಿಂದ ಕೆನಡಾದ ಆರ್ಥಿಕತೆಗೆ ಅಲ್ಪಾವಧಿಯ ಹೊಡೆತ ಬೀಳಲಿದ್ದು, ಕೆನಡಾ ಪ್ರಧಾನಿ ಅಮೆರಿಕ ಮೇಲಿನ ಅವಲಂಬನೆ ಕಡಿಮೆಗೊಳಿಸಲು ಮತ್ತು ಮಾರುಕಟ್ಟೆ ವೈವಿಧ್ಯೀಕರಣಕ್ಕೆ ಒತ್ತು ನೀಡುತ್ತಿದ್ದಾರೆ.

ಯುಎಸ್-ಕೆನಡಾ ವಾಣಿಜ್ಯ ಯುದ್ಧ : ಕೆನಡಾದ ಹಾಲು-ಮದ್ಯ, ಬೈಕ್ ಆಮದಿಗೆ ಅಮೆರಿಕ ಬ್ರೇಕ್
ಡೊನಾಲ್ಡ್​ ಟ್ರಂಪ್, ಮಾರ್ಕ್​Image Credit source: bloomberg News
ನಯನಾ ರಾಜೀವ್
|

Updated on: Sep 09, 2026 | 7:58 AM

Share

ವಾಷಿಂಗ್ಟನ್ , ಸೆಪ್ಟೆಂಬರ್ 09: ಅಮೆರಿಕ ಮತ್ತು ಕೆನಡಾ ನಡುವಿನ ಆರ್ಥಿಕ ಹಾಗೂ ವಾಣಿಜ್ಯ ಸಂಘರ್ಷ ತಾರಕಕ್ಕೇರಿದ್ದು, ಕೆನಡಾದಿಂದ ಆಮದಾಗುವ ಡೈರಿ ಉತ್ಪನ್ನಗಳು, ಹೆಚ್ಚಿನ ಮದ್ಯಯುಕ್ತ ಪಾನೀಯಗಳು ಮತ್ತು ಮೋಟಾರ್‌ಸೈಕಲ್‌ಗಳ ಮೇಲೆ ಅಮೆರಿಕ ಸಂಪೂರ್ಣ ನಿಷೇಧ ಹೇರಿದೆ. ಅಮೆರಿಕದ ಸರಕುಗಳ ಮೇಲೆ ಕೆನಡಾ ಬರೋಬ್ಬರಿ 20 ಬಿಲಿಯನ್ ಡಾಲರ್ ಮೌಲ್ಯದ ಪ್ರತೀಕಾರದ ಸುಂಕ ವಿಧಿಸಿದ ಬೆನ್ನಲ್ಲೇ ಶ್ವೇತಭವನ ಈ ಕಠಿಣ ಕ್ರಮ ಕೈಗೊಂಡಿದ್ದು, ಮೂರು ವಾರಗಳಲ್ಲಿ ನೂತನ ನಿಷೇಧ ಜಾರಿಗೆ ಬರಲಿದೆ.

ಕೆನಡಾ ಸರ್ಕಾರ ಅಮೆರಿಕನ್ ಉತ್ಪನ್ನಗಳಿಗೆ ಸಮಾನ ಮತ್ತು ಮುಕ್ತ ಮಾರುಕಟ್ಟೆ ಅವಕಾಶ ನೀಡುವವರೆಗೂ, ಯಾವುದೇ ದೊಡ್ಡ ಮಟ್ಟದ ದೀರ್ಘಾವಧಿ ಸರ್ಕಾರಿ ಗುತ್ತಿಗೆಗಳಿಗೆ ಕೆನಡಾದ ಕಂಪನಿಗಳನ್ನು ಪರಿಗಣಿಸದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಎಸ್ ಜನರಲ್ ಸರ್ವೀಸಸ್ ಅಡ್ಮಿನಿಸ್ಟ್ರೇಷನ್‌ಗೆ ನಿರ್ದೇಶನ ನೀಡಿದ್ದಾರೆ.

ಕೆನಡಾದ ಪ್ರತೀಕಾರ ಸಮರ್ಥನೆ: “ಅಮೆರಿಕ ನಮ್ಮ ಕಂಪನಿಗಳ ಮೇಲೆ ಸುಂಕ ಹೇರುತ್ತಿರುವಾಗ ನಾವು ಕೈಕಟ್ಟಿ ಕುಳಿತು ಅವರ ಸರಕುಗಳಿಗೆ ಉಚಿತ ಪ್ರವೇಶ ನೀಡಲು ಸಾಧ್ಯವಿಲ್ಲ. ಕೆನಡಾದ ಕಾರ್ಮಿಕರ ಹಿತಾಸಕ್ತಿ ಕಾಯಲು ಈ ಸುಂಕ ಅನಿವಾರ್ಯ” ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಮತ್ತಷ್ಟು ಓದಿ: ಇರಾನ್ ವಿರುದ್ಧದ ಯುದ್ಧ ಗೆದ್ದರೆ ಪೆಟ್ರೋಲ್ ಬೆಲೆ ಗ್ಯಾಲನ್‌ಗೆ 2 ಡಾಲರ್‌ಗಿಂತ ಕಡಿಮೆ: ಅಮೆರಿಕ ಅಧ್ಯಕ್ಷ ಟ್ರಂಪ್ ಭವಿಷ್ಯ

ಅಮೆರಿಕದ ಮೇಲೆ ಕೆನಡಾ ಸಂಪೂರ್ಣವಾಗಿ ಅವಲಂಬಿತವಾಗಿರುವುದನ್ನು ತಪ್ಪಿಸಲು ಪ್ರಧಾನಿ ಕಾರ್ನಿ ಕಾರ್ಯತಂತ್ರ ರೂಪಿಸಿದ್ದು, ಯುರೋಪಿಯನ್ ಒಕ್ಕೂಟದೊಂದಿಗೆ (EU) ಆಳವಾದ ಮುಕ್ತ ವ್ಯಾಪಾರ ಒಪ್ಪಂದಗಳನ್ನು ವಿಸ್ತರಿಸಲು ಪ್ರಾಂತೀಯ ಸರ್ಕಾರಗಳು ಮತ್ತು ಕಾರ್ಮಿಕ ಸಂಘಟನೆಗಳೊಂದಿಗೆ ಆಂತರಿಕ ಸಮಾಲೋಚನೆ ನಡೆಸುತ್ತಿದ್ದಾರೆ.

ಪ್ರಸ್ತುತ ಕೆನಡಾದ ಒಟ್ಟು ರಫ್ತು ವಹಿವಾಟಿನ ಶೇಕಡಾ 70 ಹೆಚ್ಚು ಪಾಲು ನೇರವಾಗಿ ಅಮೆರಿಕದ ಮಾರುಕಟ್ಟೆಯನ್ನೇ ಅವಲಂಬಿಸಿದೆ. ಈ ವ್ಯಾಪಾರ ಸಮರವು ಅಲ್ಪಾವಧಿಯಲ್ಲಿ ಕೆನಡಾದ ಡೈರಿ ಹಾಗೂ ವಾಹನ ತಯಾರಿಕಾ ರಂಗಕ್ಕೆ ಭಾರಿ ಆರ್ಥಿಕ ಹೊಡೆತ ನೀಡುವ ನಿರೀಕ್ಷೆಯಿದೆ.

ಮಾರುಕಟ್ಟೆ ವೈವಿಧ್ಯೀಕರಣಕ್ಕೆ ವೇಗ: ಈ ಸಂಕಷ್ಟವನ್ನು ಅವಕಾಶವಾಗಿ ಪರಿವರ್ತಿಸಲು ನಿರ್ಧರಿಸಿರುವ ಕೆನಡಾ, ಮುಂದಿನ ಒಂದು ದಶಕದಲ್ಲಿ ಅಮೆರಿಕೇತರ ಇತರ ದೇಶಗಳಿಗೆ ತನ್ನ ರಫ್ತು ಪ್ರಮಾಣವನ್ನು ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ಮೂಲಸೌಕರ್ಯ ಮತ್ತು ಬಂಡವಾಳ ಹೂಡಿಕೆಗೆ ವೇಗ ನೀಡಲು ನಿರ್ಧರಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More