ಚೀನಾದಲ್ಲಿ ಸತ್ತಿದ್ದು 2.10 ಕೋಟಿ ಮಂದಿ, ಬರೀ 4,600 ಅಲ್ವಂತೆ! ಹೇಗೆ?

ವಾಷಿಂಗ್ಟನ್: ಮಹಾಮಾರಿ ಕೊರೊನಾ ತವರೂರು ಚೀನಾದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,600ಎಂದು ಹೇಳಿಕೆ ನೀಡಿದೆ. ಆದ್ರೆ ಅಮೆರಿಕದ ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿ ಹೊರಬಂದಿದ್ದು, ಡ್ರ್ಯಾಗನ್ ನಾಡಿನಲ್ಲಿ ಕೇವಲ ಮೂರೇ ತಿಂಗಳಲ್ಲಿ ಕೊರೊನಾಗೆ 2 ಕೋಟಿ 10 ಲಕ್ಷ ಜನರು ಬಲಿಯಾಗಿದ್ದಾರೆ ಎನ್ನಲಾಗ್ತಿದೆ. ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ ಚೀನಾದಲ್ಲಿ ಬರೋಬ್ಬರಿ 2.10 ಕೋಟಿ ಜನ ಬಲಿಯಾಗಿದ್ದಾರೆ ಎಂದು ಜಗತ್ತನ್ನೇ ನಡುಗಿಸುವ ಅತೀ ಭೀಕರ ಮಾಹಿತಿಯನ್ನು ಅಮೆರಿಕದ ಸರ್ಕಾರಕ್ಕೆ ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ […]

ಚೀನಾದಲ್ಲಿ ಸತ್ತಿದ್ದು 2.10 ಕೋಟಿ ಮಂದಿ, ಬರೀ 4,600 ಅಲ್ವಂತೆ! ಹೇಗೆ?
ಸಾಧು ಶ್ರೀನಾಥ್​

Updated on: Apr 17, 2020 | 2:48 PM

ವಾಷಿಂಗ್ಟನ್: ಮಹಾಮಾರಿ ಕೊರೊನಾ ತವರೂರು ಚೀನಾದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,600ಎಂದು ಹೇಳಿಕೆ ನೀಡಿದೆ. ಆದ್ರೆ ಅಮೆರಿಕದ ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿ ಹೊರಬಂದಿದ್ದು, ಡ್ರ್ಯಾಗನ್ ನಾಡಿನಲ್ಲಿ ಕೇವಲ ಮೂರೇ ತಿಂಗಳಲ್ಲಿ ಕೊರೊನಾಗೆ 2 ಕೋಟಿ 10 ಲಕ್ಷ ಜನರು ಬಲಿಯಾಗಿದ್ದಾರೆ ಎನ್ನಲಾಗ್ತಿದೆ.

ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ
ಚೀನಾದಲ್ಲಿ ಬರೋಬ್ಬರಿ 2.10 ಕೋಟಿ ಜನ ಬಲಿಯಾಗಿದ್ದಾರೆ ಎಂದು ಜಗತ್ತನ್ನೇ ನಡುಗಿಸುವ ಅತೀ ಭೀಕರ ಮಾಹಿತಿಯನ್ನು ಅಮೆರಿಕದ ಸರ್ಕಾರಕ್ಕೆ ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸಹ ಸೋಂಕಿತರ ಸಂಖ್ಯೆಯನ್ನು ಚೀನಾ ಮುಚ್ಚಿಟ್ಟಿದೆ ಎಂದು ಗಂಭೀರ ಆರೋಪ ಮಾಡಿದ್ರು.

ಇದಕ್ಕೆ ಕಾರಣ ಅಮೆರಿಕದಲ್ಲಿ ಕೊರೊನಾಗೆ ಇದುವರೆಗೂ 34 ಸಾವಿರ ಜನರು ಬಲಿಯಾಗಿದ್ರೆ, ಇಟಲಿಯಲ್ಲಿ 22 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಆದ್ರೆ, ಕೊರೊನಾ ವೈರಸ್ ಹುಟ್ಟಿದ ಚೀನಾದಲ್ಲಿ ಕೇವಲ 5 ಸಾವಿರು ಜನರು ಮೃತಪಟ್ಟಿದ್ದಾರೆ ಎಂದು ಚೀನಾ ಹೇಳಿತ್ತು. ಹಾಗಾಗಿ ಚೀನಾ ನೀಡಿದ ಅಂಕಿ ಸಂಖ್ಯೆ ಭಾರೀ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು.

2019ರ ಡಿಸೆಂಬರ್​ನಿಂದ 2020ರ ಮಾರ್ಚ್ ತನಕ 2ಕೋಟಿ 10 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ ಎಂದು ಅಮೆರಿಕದ ಗುಪ್ತಚರರು ಮಾಹಿತಿ ನೀಡಿದ್ದಾರೆ. ಈ ಅವಧಿಯಲ್ಲಿ ಚೀನಾದಲ್ಲಿ 84 ಲಕ್ಷ ಲ್ಯಾಂಡ್ ಲೈನ್ ಫೋನ್ ಸಹ ಬಂದ್ ಆಗಿದ್ದವು. ಚೀನಾದಲ್ಲಿ ವ್ಯಕ್ತಿ ಸತ್ತ ಬಳಿಕ ಮಾತ್ರ ಸೆಲ್ ಫೋನ್ ಖಾತೆ ಬಂದ್ ಆಗುತ್ತೆ. ಏಕೆಂದ್ರೆ ಚೀನಾ ಸಂಪೂರ್ಣ ಡಿಜಿಟಲ್ ದೇಶ. ಚೀನಾದಲ್ಲಿ ಪ್ರತಿಯೊಂದು ಕೆಲಸವೂ ಮೊಬೈಲ್​ನಿಂದ್ಲೇ ಆಗುತ್ತೆ.

Published On - 1:48 pm, Fri, 17 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us