AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಗತಿಕ ವೇದಿಕೆಯಲ್ಲಿ ಮೋದಿ-ಟ್ರಂಪ್ ಐತಿಹಾಸಿಕ ಭೇಟಿಗೆ ಸಿದ್ಧತೆ: ಫ್ರಾನ್ಸ್ ಜಿ7 ಶೃಂಗಸಭೆಯಿಂದ ಭಾರತ-ಅಮೆರಿಕ ಬಾಂಧವ್ಯಕ್ಕೆ ಹೊಸ ಚೈತನ್ಯ

ಫ್ರಾನ್ಸ್‌ನ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಭೇಟಿ ಭಾರತ-ಅಮೆರಿಕ ಸಂಬಂಧಗಳಿಗೆ ಹೊಸ ಆಯಾಮ ನೀಡಲಿದೆ. ಈ ಐತಿಹಾಸಿಕ ಮಾತುಕತೆಗಳು ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಿ, ವ್ಯಾಪಾರ ಅಡೆತಡೆಗಳನ್ನು ನಿವಾರಿಸಲಿವೆ. ಜಾಗತಿಕ ಮಾರುಕಟ್ಟೆ ಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆಗೆ ಈ ಶೃಂಗಸಭೆ ಮಹತ್ವದ ದಿಕ್ಸೂಚಿಯಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಜಾಗತಿಕ ವೇದಿಕೆಯಲ್ಲಿ ಮೋದಿ-ಟ್ರಂಪ್ ಐತಿಹಾಸಿಕ ಭೇಟಿಗೆ ಸಿದ್ಧತೆ: ಫ್ರಾನ್ಸ್ ಜಿ7 ಶೃಂಗಸಭೆಯಿಂದ ಭಾರತ-ಅಮೆರಿಕ ಬಾಂಧವ್ಯಕ್ಕೆ ಹೊಸ ಚೈತನ್ಯ
ನರೇಂದ್ರ ಮೋದಿ-ಟ್ರಂಪ್ Image Credit source: India Shipping News
ನಯನಾ ರಾಜೀವ್
|

Updated on: Jun 04, 2026 | 9:07 AM

Share

ನವದೆಹಲಿ, ಜೂನ್ 04: ಭಾರತ ಮತ್ತು ಅಮೆರಿಕ ನಡುವಿನ ಆರ್ಥಿಕ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಉನ್ನತ ಮಟ್ಟಕ್ಕೇರಿಸುವ ಅತ್ಯಂತ ಆಶಾದಾಯಕ ಬೆಳವಣಿಗೆಯೊಂದು ಸಂಭವಿಸಿದೆ. ಈ ತಿಂಗಳು ಫ್ರಾನ್ಸ್​​ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭಾಗವಹಿಸುವುದು ಖಚಿತವಾಗಿದೆ. ಉಭಯ ನಾಯಕರ ನಡುವೆ ಜಾಗತಿಕ ಮಟ್ಟದ ದ್ವಿಪಕ್ಷೀಯ ಮಾತುಕತೆಗಳು ನಡೆಯಲಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್​ ಖಾತೆಯಲ್ಲಿ ಜೂನ್ 14 ರಂದು ಶ್ವೇತಭವನದಲ್ಲಿ ನಡೆಯಲಿರುವ ಯುಎಫ್​ಸಿ ವಿಶ್ವ ಚಾಂಪಿಯನ್​ಶಿಪ್ ಮುಗಿದ ತಕ್ಷಣವೇ ಜಿ7 ಶೃಂಗಸಭೆಗಾಗಿ ಫ್ರಾನ್ಸ್​ಗೆ ಪ್ರಯಾಣ ಬೆಳೆಸುವುದುದಾಗಿ ತಿಳಿಸಿದ್ದಾರೆ.

ಫ್ರಾನ್ಸ್‌ನ ಏವಿಯನ್‌ನಲ್ಲಿ ವಿಶ್ವ ನಾಯಕರ ಮಹಾಸಂಗಮ ಜೂನ್ 15 ರಿಂದ 17 ರವರೆಗೆ ಫ್ರಾನ್ಸ್‌ನ ಅತ್ಯಾಕರ್ಷಕ ‘ಏವಿಯನ್-ಲೆಸ್-ಬೈನ್ಸ್’ (Évian-les-Bains) ನಗರದಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ಜಿ7 ಶೃಂಗಸಭೆ ಆಯೋಜನೆಗೊಂಡಿದೆ. ಮಧ್ಯಪ್ರಾಚ್ಯದ ಬಿಕ್ಕಟ್ಟುಗಳ ನಂತರ ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರು ಜಾಗತಿಕ ನಾಯಕರೊಂದಿಗೆ ನೇರ ಮುಖಾಮುಖಿ ಚರ್ಚೆ ನಡೆಸಲು ಈ ಶೃಂಗಸಭೆಯು ಅತ್ಯುತ್ತಮ ವೇದಿಕೆಯನ್ನು ಒದಗಿಸಲಿದೆ.

ಪ್ರಧಾನಿ ಮೋದಿ ಭೇಟಿ ಖಚಿತಪಡಿಸಿದ ಫ್ರಾನ್ಸ್ ಸರ್ಕಾರ ಭಾರತವು ಜಿ7 ಒಕ್ಕೂಟದ ಅಧಿಕೃತ ಸದಸ್ಯ ರಾಷ್ಟ್ರವಲ್ಲದಿದ್ದರೂ, ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಪ್ರಭಾವವನ್ನು ಪರಿಗಣಿಸಿ ಫ್ರಾನ್ಸ್ ಪ್ರಧಾನಿ ಮೋದಿಯವರನ್ನು ವಿಶೇಷ ಪಾಲುದಾರ ರಾಷ್ಟ್ರದ ನಾಯಕರಾಗಿ ಆಹ್ವಾನಿಸಿದೆ.

ಭಾರತದ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಹಾಗೂ ಫ್ರೆಂಚ್ ವಿದೇಶಾಂಗ ಸಚಿವ ಜೀನ್ ನೋಯೆಲ್ ಬ್ಯಾರಟ್ ನಡುವೆ ನಡೆದ ಸಭೆಯ ಬಳಿಕ ಪ್ರಧಾನಿ ಮೋದಿ ಈ ಶೃಂಗಸಭೆಲ್ಲಿ ಭಾಗವಹಿಸುವುದನ್ನು ಫ್ರಾನ್ಸ್​ ವಿದೇಶಾಂಗ ಸಚಿವಾಲಯವು ಅಧಿಕೃತ ಪ್ರಕರಣೆ ಊಲಕ ಸ್ವಾಗತಿಸಿದೆ. ಸ್ಥೂಲ ಆರ್ಥಿಕ ಅಸಮತೋಲನ ನಿವಾರಣೆ ಮತ್ತು ಅಂತಾರಾಷ್ಟ್ರೀಯ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಜಿ7 ಒಕ್ಕೂಟಕ್ಕೆ ಭಾರತ ನೀಡಲಿರುವ ಕೊಡುಗೆಯನ್ನು ಫ್ರಾನ್ಸ್ ಮುಕ್ತಕಂಠದಿಂದ ಶ್ಲಾಘಿಸಿದೆ.

ವ್ಯಾಪಾರ ಮತ್ತು ಆರ್ಥಿಕ ಪ್ರಗತಿಯ ಹೊಸ ಆಶಾಕಿರಣ ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರು ಕೊನೆಯ ಬಾರಿಗೆ ಕಳೆದ ವರ್ಷದ ಫೆಬ್ರವರಿಯಲ್ಲಿ ಮುಖಾಮುಖಿಯಾಗಿದ್ದರು. ಆನಂತರ ಸುಂಕಗಳು, ವ್ಯಾಪಾರ ಒಪ್ಪಂದಗಳು ಹಾಗೂ ಜಾಗತಿಕ ತೈಲ ಮಾರುಕಟ್ಟೆಯ ಚಲನೆಗಳ ಕಾರಣದಿಂದಾಗಿ ಉಭಯ ದೇಶಗಳ ನಡುವೆ ಸಣ್ಣಮಟ್ಟದ ಭಿನ್ನಾಭಿಪ್ರಾಯಗಳು ಮೂಡಿದ್ದರೂ, ಇಬ್ಬರೂ ನಾಯಕರು ದೂರವಾಣಿ ಸಂಭಾಷಣೆಗಳ ಮೂಲಕ ನಿರಂತರ ಸ್ನೇಹವನ್ನು ಕಾಯ್ದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ವ್ಯವಹಾರಗಳ ತಜ್ಞ ರಾಬಿಂದರ್ ಸಚ್‌ದೇವ್ ಅವರ ಪ್ರಕಾರ, ಈ ಮುಖಾಮುಖಿ ಭೇಟಿಯು ವಾಷಿಂಗ್ಟನ್ ಮತ್ತು ನವದೆಹಲಿ ನಡುವಿನ ವ್ಯಾಪಾರ ಒಪ್ಪಂದಗಳಿಗೆ ಇದ್ದ ಅಡೆತಡೆಗಳನ್ನು ನಿವಾರಿಸಲಿದೆ. ಟ್ರಂಪ್ ಅವರ ಸುಂಕದ ನೀತಿಗಳ ಕುರಿತು ಉಭಯ ದೇಶಗಳ ನಡುವೆ ಪರಸ್ಪರ ಉತ್ತಮ ತಿಳುವಳಿಕೆ ಮತ್ತು ಒಮ್ಮತ ಮೂಡಲು ಹಾಗೂ ದ್ವಿಪಕ್ಷೀಯ ಬಾಂಧವ್ಯವನ್ನು ಪುನಃಸ್ಥಾಪಿಸಲು ಈ ಶೃಂಗಸಭೆಯು ಅತ್ಯಂತ ಮಹತ್ವದ ಮೈಲಿಗಲ್ಲಾಗಲಿದೆ.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ ಹಾಗೂ ಅತ್ಯಂತ ಶಕ್ತಿಶಾಲಿ ದೇಶ ಅಮೆರಿಕದ ನಾಯಕರು ಒಟ್ಟಾಗಿ ಕೈಗೊಳ್ಳಲಿರುವ ಈ ನಿರ್ಧಾರಗಳು ಜಾಗತಿಕ ಮಾರುಕಟ್ಟೆಯ ಸ್ಥಿರತೆ ಮತ್ತು ವಿಶ್ವದ ಆರ್ಥಿಕ ಬೆಳವಣಿಗೆಗೆ ಹೊಸ ದಿಕ್ಸೂಚಿಯಾಗಲಿವೆ ಎಂದು ರಾಜಕೀಯ ವಿಶ್ಲೇಷಕರು ಆಶಾವಾದ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಬಿಲ್ ಕಟ್ಟಲೂ ಹಣ ಇಲ್ವೇ: ಕತ್ತಲಲ್ಲಿ ಮುಳುಗಿದ ಬೆಳಗಾವಿ ತಹಶೀಲ್ದಾರ್ ಕಚೇರಿ
ಬಿಲ್ ಕಟ್ಟಲೂ ಹಣ ಇಲ್ವೇ: ಕತ್ತಲಲ್ಲಿ ಮುಳುಗಿದ ಬೆಳಗಾವಿ ತಹಶೀಲ್ದಾರ್ ಕಚೇರಿ
ಧರ್ಮಸ್ಥಳ ಬುರುಡೆ ಪ್ರಕರಣದ SIT ತಂಡ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ
ಧರ್ಮಸ್ಥಳ ಬುರುಡೆ ಪ್ರಕರಣದ SIT ತಂಡ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ
ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ:ಕಾಂಗ್ರೆಸ್ ಶಾಸಕರು ರೆಸಾರ್ಟ್​​ಗೆ
ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ:ಕಾಂಗ್ರೆಸ್ ಶಾಸಕರು ರೆಸಾರ್ಟ್​​ಗೆ
ಅಜ್ಜಿಯ ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟ ವಿಜಯ್ ರಾಘವೇಂದ್ರ ಮಗ ಶೌರ್ಯ
ಅಜ್ಜಿಯ ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟ ವಿಜಯ್ ರಾಘವೇಂದ್ರ ಮಗ ಶೌರ್ಯ
ಆರ್‌ಎಸ್‌ಎಸ್​ನವರು ಹಿಂದುಗಳಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ
ಆರ್‌ಎಸ್‌ಎಸ್​ನವರು ಹಿಂದುಗಳಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ
66 ರೌಡಿಶೀಟರ್​ಗಳಿಗೆ ಮುಕ್ತಿ ಸದ್ಯಕ್ಕಿಲ್ಲ: ಕ್ರಮ ತಡೆಹಿಡಿದ ಸಚಿವ ಖರ್ಗೆ
66 ರೌಡಿಶೀಟರ್​ಗಳಿಗೆ ಮುಕ್ತಿ ಸದ್ಯಕ್ಕಿಲ್ಲ: ಕ್ರಮ ತಡೆಹಿಡಿದ ಸಚಿವ ಖರ್ಗೆ
ತಾಯಿ ಪಾರ್ಥೀವ ಶರೀರದ ಎದುರು ಕಣ್ಣೀರು ಹಾಕಿದ ಶ್ರೀಮುರಳಿ
ತಾಯಿ ಪಾರ್ಥೀವ ಶರೀರದ ಎದುರು ಕಣ್ಣೀರು ಹಾಕಿದ ಶ್ರೀಮುರಳಿ
ಸಿಎಂ ಡಿಕೆಶಿಗೆ ಮೋಹನ್ ದಾಸ್ ಪೈ ಸಲಹೆ: ಉದ್ಯಮಿ ಹೇಳಿದ್ದೇನು?
ಸಿಎಂ ಡಿಕೆಶಿಗೆ ಮೋಹನ್ ದಾಸ್ ಪೈ ಸಲಹೆ: ಉದ್ಯಮಿ ಹೇಳಿದ್ದೇನು?
ಕೊನೆಗೂ ಖಾತೆ ವಹಿಸಿಕೊಂಡ ಸಚಿವ ಕೃಷ್ಣ ಭೈರೇಗೌಡ: ಜಿಬಿಎ ಕಚೇರಿಯಲ್ಲಿ ಸಭೆ
ಕೊನೆಗೂ ಖಾತೆ ವಹಿಸಿಕೊಂಡ ಸಚಿವ ಕೃಷ್ಣ ಭೈರೇಗೌಡ: ಜಿಬಿಎ ಕಚೇರಿಯಲ್ಲಿ ಸಭೆ
ಹುಬ್ಬಳ್ಳಿ ಭಂಡಿವಾಡದಲ್ಲಿ ಹತ್ತೇ ನಿಮಿಷದಲ್ಲಿ ಉಳೀತು ಇನ್ನೂರು ಮಕ್ಕಳ ಜೀವ
ಹುಬ್ಬಳ್ಳಿ ಭಂಡಿವಾಡದಲ್ಲಿ ಹತ್ತೇ ನಿಮಿಷದಲ್ಲಿ ಉಳೀತು ಇನ್ನೂರು ಮಕ್ಕಳ ಜೀವ