AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರೀ ಮಳೆ ಹಿನ್ನೆಲೆ ಕುದುರೆಮುಖದಲ್ಲಿ ಟ್ರೆಕ್ಕಿಂಗ್‌ಗೆ ತಾತ್ಕಾಲಿಕ ಬ್ರೇಕ್: ಚಾರಣಿಗರಿಗೆ ನಿರಾಸೆ

ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಪ್ರವಾಸಿಗರು ಹಾಗೂ ಚಾರಣಿಗರ ಸುರಕ್ಷತೆಯನ್ನು ಪರಿಗಣಿಸಿ ಟ್ರೆಕ್ಕಿಂಗ್ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಮುಂಗಡ ಬುಕ್ ಮಾಡಿದ ಚಾರಣಿಗರಿಗೆ ಹಣ ಮರುಪಾವತಿಸಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರೀ ಮಳೆ ಹಿನ್ನೆಲೆ ಕುದುರೆಮುಖದಲ್ಲಿ ಟ್ರೆಕ್ಕಿಂಗ್‌ಗೆ ತಾತ್ಕಾಲಿಕ ಬ್ರೇಕ್: ಚಾರಣಿಗರಿಗೆ ನಿರಾಸೆ
ಕುದುರೆಮುಖದಲ್ಲಿ ಟ್ರೆಕ್ಕಿಂಗ್‌ಗೆ ತಾತ್ಕಾಲಿಕ ಬ್ರೇಕ್
ಪ್ರಸನ್ನ ಹೆಗಡೆ
|

Updated on:Aug 04, 2026 | 7:46 PM

Share

ಮುಖ್ಯಾಂಶಗಳು

  • ಕಳೆದ ಕೆಲವು ದಿನಗಳಿಂದ ಭಾರಿ ಮಳೆಯ ಎಫೆಕ್ಟ್​​
  • ಕುದುರೆಮುಖದಲ್ಲಿ ಟ್ರೆಕ್ಕಿಂಗ್‌ಗೆ ತಾತ್ಕಾಲಿಕ ನಿಷೇಧ
  • ವನ್ಯಜೀವಿ ವಿಭಾಗದ ಅಧಿಕಾರಿಗಳಿಂದ ಮಾಹಿತಿ

ಚಿಕ್ಕಮಗಳೂರು, ಆಗಸ್ಟ್​​ 04: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯ ಟ್ರೆಕ್ಕಿಂಗ್ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಕುದುರೆಮುಖ, ಬೆಳ್ತಂಗಡಿ ಹಾಗೂ ಕೆರೆಕಟ್ಟೆ ವಲಯಗಳ ವ್ಯಾಪ್ತಿಯಲ್ಲಿರುವ ಟ್ರೆಕ್ಕಿಂಗ್ ಮಾರ್ಗಗಳನ್ನು ಸುರಕ್ಷತಾ ಕಾರಣಗಳಿಂದ ಮುಚ್ಚಲಾಗಿದೆ. ನಿರಂತರ ಮಳೆಯಿಂದಾಗಿ ಜಾರು ಹಾದಿಗಳು, ಉಕ್ಕಿ ಹರಿಯುತ್ತಿರುವ ಹೊಳೆಗಳು ಹಾಗೂ ಮರ ಮತ್ತು ಕೊಂಬೆಗಳು ಬೀಳುವ ಅಪಾಯ ಹೆಚ್ಚಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮಾನ

ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ. ಕಳಸ ಸಮೀಪದ ಸೇತುವೆಯೊಂದರ ಮೇಲೆ ನೀರಿನ ಮಟ್ಟ ತಾತ್ಕಾಲಿಕವಾಗಿ ಏರಿಕೆಯಾಗಿದ್ದರೂ ನಂತರ ಇಳಿಕೆಯಾಗಿದೆ. ಹವಾಮಾನ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ. ಮಳೆಯ ಪ್ರಮಾಣ ಮತ್ತು ಟ್ರೆಕ್ಕಿಂಗ್ ಮಾರ್ಗಗಳ ಸ್ಥಿತಿಯನ್ನು ಅವಲೋಕಿಸಿ, ಟ್ರೆಕ್ಕಿಂಗ್ ಪುನರಾರಂಭದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ತುಂಗಾ, ಭದ್ರಾ ಅಬ್ಬರಕ್ಕೆ ಹೊಲ-ಗದ್ದೆಗಳು ಜಲಾವೃತ

ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಅನಾಹುತ ವರದಿಯಾಗಿಲ್ಲ. ಆದರೆ ಹಲವು ಕಡೆ ಮರಗಳು ಉರುಳಿರುವ ಘಟನೆಗಳು ದಾಖಲಾಗಿವೆ. ಇದೇ ವೇಳೆ, ಕೊಡಚಾದ್ರಿ ಸಫಾರಿ ಸೇವೆ ಎಂದಿನಂತೆ ಮುಂದುವರಿದಿದೆ. ಮಳೆಯ ತೀವ್ರತೆ ಮತ್ತು ಟ್ರೆಕ್ಕಿಂಗ್ ಮಾರ್ಗಗಳ ಸ್ಥಿತಿಯ ಬಗ್ಗೆ ವಲಯ ಮಟ್ಟದ ಅಧಿಕಾರಿಗಳ ವರದಿ ಆಧರಿಸಿ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಚೆಕ್‌ಪೋಸ್ಟ್‌ಗಳು ಮತ್ತು ಅರಣ್ಯ ಶಿಬಿರಗಳಲ್ಲಿ ಸಿಬ್ಬಂದಿ ನಿಯೋಜಿಸಲಾಗಿದ್ದು, ಉರುಳಿದ ಮರಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಮಳೆಗಾಲದಲ್ಲಿ ಇಂತಹ ಮುನ್ನೆಚ್ಚರಿಕಾ ಕ್ರಮಗಳು ಸಾಮಾನ್ಯವಾಗಿದ್ದು, ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಟ್ರೆಕ್ಕಿಂಗ್ ಮಾರ್ಗಗಳನ್ನು ಮತ್ತೆ ತೆರೆಯಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಅರಣ್ಯ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಮುಂಗಡ ಬುಕ್ಕಿಂಗ್ ಮಾಡಿದ್ದ ಪ್ರವಾಸಿಗರಿಗೆ ರದ್ದುಗೊಂಡ ಟ್ರೆಕ್ಕಿಂಗ್‌ಗೆ ಹಣ ಮರುಪಾವತಿ (ರಿಫಂಡ್) ಮಾಡಲಾಗುವುದು. ಜೊತೆಗೆ, ನೋಂದಾಯಿತ ಟ್ರೆಕ್ಕರ್‌ಗಳಿಗೆ ಈ ಕುರಿತು ಮಾಹಿತಿ ಸಂದೇಶಗಳನ್ನೂ ಕಳುಹಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:48 pm, Tue, 4 August 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ