ಬೇಸಿಗೆಯಲ್ಲಿ ಪ್ರವಾಸ ಮಾಡಲು ಕುದುರೆಮುಖ ಬೆಸ್ಟ್ ಪ್ಲೇಸ್​, ಅಲ್ಲಿಗೆ ಹೋಗುವ ಮುನ್ನ ಈ ವಿಚಾರಗಳು ತಿಳಿದಿರಲಿ

ಉರಿ ಉರಿ ಬೇಸಿಗೆ ಈ ಸಿಟಿಯಲ್ಲಿ ಯಾರಿರ್ತಾರಪ್ಪ ಅನ್ನೋರು ವೀಕೆಂಡ್​ನಲ್ಲಿ ಚಿಕ್ಕಮಗಳೂರಿನ ಕುದುರೆಮುಖಕ್ಕೆ ಭೇಟಿ ನೀಡಬಹುದು. ಕುದುರೆಮುಖ ಬೆಂಗಳೂರಿನಿಂದ 340 ಕಿ.ಮೀ ದೂರ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಹಚ್ಚ ಹಸಿರಿನ ಅರಣ್ಯ ಪ್ರದೇಶವಾಗಿದೆ. ರಾಷ್ಟ್ರೀಯ ಉದ್ಯಾನವನವು 600 ಚದರ ಕಿ.ಮೀ ವಿಸ್ತೀರ್ಣದಲ್ಲಿದೆ

ಬೇಸಿಗೆಯಲ್ಲಿ ಪ್ರವಾಸ ಮಾಡಲು ಕುದುರೆಮುಖ  ಬೆಸ್ಟ್ ಪ್ಲೇಸ್​, ಅಲ್ಲಿಗೆ ಹೋಗುವ ಮುನ್ನ ಈ ವಿಚಾರಗಳು ತಿಳಿದಿರಲಿ
ಕುದುರೆಮುಖImage Credit source: Praks the explorer
Follow us
|

Updated on:Apr 23, 2024 | 3:20 PM

ಕರ್ನಾಟಕದ ಸುಂದರ ಗಿರಿಧಾಮಗಳಲ್ಲಿ ಕುದುರೆ ಮುಖ(Kudremukh) ಕೂಡ ಒಂದು. ಎತ್ತ ಕಣ್ಣು ಹಾಯಿಸಿದರೂ ಹಸಿರು, ವಿಶಾಲವಾದ ಪರ್ವತ ಶ್ರೇಣಿ. ಇದು ಚಿಕ್ಕಮಗಳೂರಿನಿಂದ ಕೇವಲ 65 ಕಿ.ಮೀ ದೂರದಲ್ಲಿದೆ. ಕುದುರೆಮುಖ ಬೆಂಗಳೂರಿನಿಂದ 340 ಕಿ.ಮೀ ದೂರ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಹಚ್ಚ ಹಸಿರಿನ ಅರಣ್ಯ ಪ್ರದೇಶವಾಗಿದೆ. ರಾಷ್ಟ್ರೀಯ ಉದ್ಯಾನವನವು 600 ಚದರ ಕಿ.ಮೀ ವಿಸ್ತೀರ್ಣದಲ್ಲಿದೆ ಮತ್ತು ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಈ ಮೂರು ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಟ್ರೆಕ್ಕಿಂಗ್ ಮಾಡಲು ಸೂಕ್ತ ತಾಣ. ಅರಣ್ಯ ಅಧಿಕಾರಿಗಳ ಅನುಮತಿ ಪಡೆದರೆ ಕುದುರೆಮುಖ ಬೆಟ್ಟಗಳಲ್ಲಿ ಒಂದು ದಿನದ ಚಾರಣವನ್ನು ನೀವು ಮಾಡಬಹುದು.

ಕುದುರೆಮುಖಕ್ಕೆ ತಲುಪುವುದು ಹೇಗೆ? ಕುದುರೆಮುಖಕ್ಕೆ ಸಮೀಪದ ರೈಲು ನಿಲ್ದಾಣವೆಂದರೆ ಮಂಗಳೂರು, ಇಲ್ಲ್ಲಿಂದಲೂ 95 ಕಿ.ಮೀ ದೂರದಲ್ಲಿದೆ. ಬಸ್​, ಟ್ಯಾಕ್ಸಿ ಮೂಲಕವೂ ತೆರಳಬಹುದು.

1892 ಮೀಟರ್ ಎತ್ತರವಿರುವ ಕುದುರೆಮುಖ ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರವಾಗಿದೆ. ಎತ್ತರದ ಶಿಖರವು ದೂರದಿಂದ ನೋಡಿದಾಗ ಕುದುರೆಯ ಮುಖವನ್ನು ಹೋಲುತ್ತದೆ ಹಾಗಾಗಿ ಈ ಹೆಸರು ಬಂದಿದೆ.

ಕುದುರೆಮುಖವನ್ನು ಕಬ್ಬಿಣದ ಅದಿರು ಗಣಿಗಾರಿಕೆ ಪಟ್ಟಣವಾಗಿ ಅಭಿವೃದ್ಧಿಪಡಿಸಲಾಯಿತು, ಅಲ್ಲಿ ಸರ್ಕಾರವು ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್, (ಕೆಐಒಸಿಎಲ್) ಕಾರ್ಯ ನಿರ್ವಹಿಸುತ್ತಿದೆ.

ಮತ್ತಷ್ಟು ಓದಿ: ಬೇಸಿಗೆಯಲ್ಲೂ ಜನರ ಕೈಬೀಸಿ ಕರೆಯುವ ಕಾಫಿನಾಡಿನ ಸ್ವರ್ಗ ಮುಳ್ಳಯ್ಯನಗಿರಿ, ರೈಲಿನಲ್ಲಿ ಹೋಗುವುದು ಹೇಗೆ?

ಕುದುರೆಮುಖ ರಾಷ್ಟ್ರೀಯ ಉದ್ಯಾನ ಪ್ರಮುಖ ಆಕರ್ಷಣೆಗಳು ಕುದುರೆಮುಖದಲ್ಲಿ ಪಕ್ಷಿ ವೀಕ್ಷಣೆ: ವಲಸೆ ಅವಧಿಯಲ್ಲಿ 200 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಇಲ್ಲಿ ವಾಸಿಸುತ್ತವೆ ಅಥವಾ ಕುದುರೆಮುಖದ ಕಾಡುಗಳಿಗೆ ಭೇಟಿ ನೀಡುತ್ತವೆ.

ಕುದುರೆಮುಖ ಮುಖ ಚಾರಣ: ಅರಣ್ಯ ಅಧಿಕಾರಿಗಳ ಅನುಮತಿಯೊಂದಿಗೆ ಕುದುರೆಮುಖ ಬೆಟ್ಟಗಳಲ್ಲಿ ದಿನದ ಚಾರಣವನ್ನು ಕೈಗೊಳ್ಳಬಹುದು. ಕ್ಯಾಂಪಿಂಗ್ ಅನ್ನು ಅನುಮತಿಸಲಾಗುವುದಿಲ್ಲ. ಸೂರ್ಯಾಸ್ತದ ಮೊದಲು ಚಾರಣಿಗರು ಹಿಂತಿರುಗಬೇಕಾಗಿದೆ. ಕುಡುರೆಮುಖ ಶಿಖರದ ಜನಪ್ರಿಯ ಚಾರಣದ ಹೊರತಾಗಿ, ಕುರಿಂಜಾಲ್ ಗುಡ್ಡ, ಗಂಗಡಿಕಲ್ಲು ಗುಡ್ಡ , ಸೀತಾಭೂಮಿ ಶಿಖರಮತ್ತು ನರಸಿಂಹ ಪರ್ವತ ಇತರ ಚಾರಣ ಮಾರ್ಗಗಳಾಗಿವೆ.

ಕುದುರೆಮುಖ ಬಳಿ ಭೇಟಿ ನೀಡಬೇಕಾದ ಸ್ಥಳಗಳು: ಕದಂಬಿ ಜಲಪಾತ, ಹನುಮಾನ್ ಗುಂಡಿ ಜಲಪಾತ, ಲಖ್ಯಾ ಅಣೆಕಟ್ಟು, ಗಂಗಮೂಲಾ ವ್ಯೂ ಪಾಯಿಂಟ್, ಶೃಂಗೇರಿ, ಸಿರಿಮನೆ ಜಲಪಾತಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಜೊತೆಗೆ ಭೇಟಿ ನೀಡಬಹುದಾದ ಇತರ ಆಕರ್ಷಣೆಗಳು. ಈ ಎಲ್ಲಾ ಆಕರ್ಷಣೆಗಳು ಕುದುರೆಮುಖದಿಂದ 20-30 ಕಿ.ಮೀ ವ್ಯಾಪ್ತಿಯಲ್ಲಿವೆ.

ಕುದುರೆಮುಖ ಬಳಿ ಉಳಿಯಲು ಸ್ಥಳಗಳು:

ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ಕುದುರೆಮುಖ ಅರಣ್ಯ ಪ್ರದೇಶದೊಳಗೆ ಭಗವತಿ ನೇಚರ್ ಕ್ಯಾಂಪ್ ಅನ್ನು ನಿರ್ವಹಿಸುತ್ತಿದೆ. ಕುದುರೆಮುಖದಲ್ಲಿ ಕೆಲವು ಹೋಂಸ್ಟೇಗಳು ಮತ್ತು ಪರಿಸರ ಸ್ನೇಹಿ ರೆಸಾರ್ಟ್‌ಗಳು ಲಭ್ಯವಿದೆ. ಹತ್ತಿರದ ಪಟ್ಟಣಗಳಾದ ಕಾರ್ಕಳ, ಶೃಂಗೇರಿಯಲ್ಲಿ ಕೂಡ ತಂಗಬಹುದು.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:50 pm, Tue, 23 April 24

ತಾಜಾ ಸುದ್ದಿ
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು