ಬೇಸಿಗೆಯಲ್ಲೂ ಜನರ ಕೈಬೀಸಿ ಕರೆಯುವ ಕಾಫಿನಾಡಿನ ಸ್ವರ್ಗ ಮುಳ್ಳಯ್ಯನಗಿರಿ, ರೈಲಿನಲ್ಲಿ ಹೋಗುವುದು ಹೇಗೆ?

ಈ ಬ್ಯುಸಿ ಜೀವನದಿಂದ ಕೊಂಚ ಬಿಡುವು ಪಡೆದು ಪ್ರಕೃತಿಯ ಸೌಂದರ್ಯವನ್ನು ಸವಿಯಲು ನೀವು ಮುಳ್ಳಯ್ಯನಗಿರಿ(Mullayanagiri)ಗೆ ಒಮ್ಮೆಯಾದರೂ ಹೋಗಲೇಬೇಕು. ಬೇಸಿಗೆಯ ಧಗೆಯಲ್ಲೂ ತಂಪು ನೀಡುತ್ತೆ ಈ ಕಾಫಿನಾಡಿನ ಸ್ವರ್ಗ ಎಂದೇ ಕರೆಸಿಕೊಳ್ಳುವ ಮುಳ್ಳಯ್ಯನಗಿರಿ. ಚ್ಚ ಹಸಿರಿನ ತಂಪಿಗೆ ಮೈ ಒಡ್ಡಿ ನಿಂತರೆ ನಿಮ್ಮೆಲ್ಲಾ ಒತ್ತಡಗಳು ಪಟ್ ಅಂತಾ ನವಾರಣೆಯಾಗುತ್ತದೆ. ಮುಳ್ಳಯ್ಯನಗಿರಿ ಬೆಟ್ಟ ಸಮುದ್ರ ಮಟ್ಟಕ್ಕಿಂತ 1930 ಮೀಟರ್ ಎತ್ತರವಿದ್ದು ಕರ್ನಾಟಕದ ಅತ್ಯುನ್ನತ ಶಿಖರವಾಗಿದೆ. ಮುಳ್ಳಯ್ಯನಗಿರಿ ಬೆಂಗಳೂರಿನಿಂದ 265 ಕಿ.ಮೀ ದೂರ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಮುಳ್ಳಯ್ಯನಗಿರಿ ಪ್ರಕೃತಿ ಪ್ರೇಮಿಗಳ ಸ್ವರ್ಗವಾಗಿದ್ದು […]

ಬೇಸಿಗೆಯಲ್ಲೂ ಜನರ ಕೈಬೀಸಿ ಕರೆಯುವ ಕಾಫಿನಾಡಿನ ಸ್ವರ್ಗ ಮುಳ್ಳಯ್ಯನಗಿರಿ, ರೈಲಿನಲ್ಲಿ ಹೋಗುವುದು ಹೇಗೆ?
ಮುಳ್ಳಯ್ಯನಗಿರಿ
Follow us
|

Updated on:Apr 23, 2024 | 3:21 PM

ಈ ಬ್ಯುಸಿ ಜೀವನದಿಂದ ಕೊಂಚ ಬಿಡುವು ಪಡೆದು ಪ್ರಕೃತಿಯ ಸೌಂದರ್ಯವನ್ನು ಸವಿಯಲು ನೀವು ಮುಳ್ಳಯ್ಯನಗಿರಿ(Mullayanagiri)ಗೆ ಒಮ್ಮೆಯಾದರೂ ಹೋಗಲೇಬೇಕು. ಬೇಸಿಗೆಯ ಧಗೆಯಲ್ಲೂ ತಂಪು ನೀಡುತ್ತೆ ಈ ಕಾಫಿನಾಡಿನ ಸ್ವರ್ಗ ಎಂದೇ ಕರೆಸಿಕೊಳ್ಳುವ ಮುಳ್ಳಯ್ಯನಗಿರಿ. ಚ್ಚ ಹಸಿರಿನ ತಂಪಿಗೆ ಮೈ ಒಡ್ಡಿ ನಿಂತರೆ ನಿಮ್ಮೆಲ್ಲಾ ಒತ್ತಡಗಳು ಪಟ್ ಅಂತಾ ನವಾರಣೆಯಾಗುತ್ತದೆ. ಮುಳ್ಳಯ್ಯನಗಿರಿ ಬೆಟ್ಟ ಸಮುದ್ರ ಮಟ್ಟಕ್ಕಿಂತ 1930 ಮೀಟರ್ ಎತ್ತರವಿದ್ದು ಕರ್ನಾಟಕದ ಅತ್ಯುನ್ನತ ಶಿಖರವಾಗಿದೆ. ಮುಳ್ಳಯ್ಯನಗಿರಿ ಬೆಂಗಳೂರಿನಿಂದ 265 ಕಿ.ಮೀ ದೂರ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಮುಳ್ಳಯ್ಯನಗಿರಿ ಪ್ರಕೃತಿ ಪ್ರೇಮಿಗಳ ಸ್ವರ್ಗವಾಗಿದ್ದು ಮತ್ತು ದಕ್ಷಿಣ ಕರ್ನಾಟಕದ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.

ಮುಳ್ಳಯ್ಯನಗಿರಿಯ ಆಕರ್ಷಣೆಗಳು ಹೆಚ್ಚುಚಾರಣದ ಅಗತ್ಯವಿಲ್ಲದೆ ಮುಳ್ಳಯ್ಯನಗಿರಿ ಶಿಖರವನ್ನು ರಸ್ತೆ ಮೂಲಕ ತಲುಪಬಹುದು. ಮುಳ್ಳಯ್ಯನಗಿರಿ ಶಿಖರವನ್ನು ತಲುಪಲು ವಾಹನ ನಿಲುಗಡೆ ಸ್ಥಳದಿಂದ 500 ಮೆಟ್ಟಿಲುಗಳನ್ನು ಒಳಗೊಂಡ ಸಣ್ಣ ಚಾರಣವಷ್ಟೇ ಸಾಕಾಗಿದೆ. ಮುಳ್ಳಯ್ಯನಗಿರಿ ಶಿಖರವು ಪಶ್ಚಿಮ ಘಟ್ಟಗಳ ನಯನ ಮನೋಹರ ನೋಟವನ್ನು ನೀಡುತ್ತದೆ. ತಂಪಾದ ಗಾಳಿ, ಮೈ ನವಿರೇಳಿಸುವ ಸೂರ್ಯಾಸ್ತ ಇತರ ಆಕರ್ಷಣೆಗಳಾಗಿವೆ.

ಬೆಟ್ಟದ ತುದಿ ತಲುಪುತ್ತಿದ್ದಂತೆಯೇ ಮೋಡವನ್ನು ಚುಂಬಿಸುವಷ್ಟರ ಮಟ್ಟಿಗೆ ಮಂಜು ಆವರಿಸುತ್ತದೆ. ಮೋಡಗಳ ನಡುವೆ ಚಲಿಸುತ್ತಿದ್ದರೆ ಸ್ವರ್ಗದ ದಾರಿಯಲ್ಲಿ ಚಲಿಸುತ್ತಿದ್ದೇವೆಯೇನೋ ಎಂಬ ಅನುಭವ ಎದುರಾಗುತ್ತದೆ. ನಮ್ಮ ಪಕ್ಕದಲ್ಲಿರುವ ವ್ಯಕ್ತಿ/ವಸ್ತುಗಳೇ ಕಾಣದಷ್ಟು ಮಂಜು ಆವರಿಸುವ ಮೂಲಕ ನಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ.

ಎಲ್ಲಾ ಋತುವಿನಲ್ಲೂ ಭೇಟಿ ನೀಡಬಹುದು  : ಮುಳ್ಳಯ್ಯನಗಿರಿ ಶಿಖರವನ್ನು ವರ್ಷಪೂರ್ತಿ ಭೇಟಿ ಮಾಡಬಹುದು. ದೇವಾಲಯ: ಮುಳ್ಳಯ್ಯನಗಿರಿ ಬೆಟ್ಟದ ತುದಿಯಲ್ಲಿ ಶಿವನಿಗೆ ಅರ್ಪಿತವಾದ ಸಣ್ಣ ದೇವಾಲಯವಿದೆ.ಮುಳ್ಳಯ್ಯನಗಿರಿಗೆ ಹೋಗುವ ದಾರಿಯಲ್ಲಿ ಸೀತಾಳಯ್ಯನಗಿರಿ ಬೆಟ್ಟ, ದೇವಸ್ಥಾನವಿದೆ. ಬಾಬಾಬುಡನಗಿರಿ ಮತ್ತು ಮಾಣಿಕ್ಯಾಧರ ಜಲಪಾತಗಳು (ಮುಳ್ಳಯ್ಯನಗಿರಿ ಯಿಂದ 26 ಕಿ.ಮೀ) ಹತ್ತಿರದ ನೋಡಲೇಬೇಕಾದ ತಾಣಗಳಾಗಿವೆ.

ತಲುಪುವುದು ಹೇಗೆ? ಮಂಗಳೂರಿನಿಂದ ಸುಮಾರು 172 ಕಿ.ಮೀ ದೂರದಲ್ಲಿದ್ದು, ಉಡುಪಿಯಿಂದ 187 ಕಿ.ಮೀ, ಬೆಂಗಳೂರಿನಿಂದ 264 ಕಿ.ಮೀ, ಉಜಿರೆಯಿಂದ 106 ಕಿ.ಮೀ. ದೂರದಲ್ಲಿದೆ. ಮುಳ್ಳಯ್ಯನಗಿರಿಗೆ ಮಂಗಳೂರು-ಉಜಿರೆ-ಚಾರ್ಮಾಡಿ ಮಾರ್ಗವಾಗಿ ಹೋಗಬಹುದು. ಇದಲ್ಲದೆ ಮಂಗಳೂರು-ಕಾರ್ಕಳ-ಕಳಸ-ಬಾಳೆಹೊನ್ನೂರು ಮಾರ್ಗವಾಗಿಯೂ ಇಲ್ಲಿಗೆ ತಲುಪಬಹುದು. ಇಲ್ಲಿಗೆ ಸಾಕಷ್ಟು ಸಂಖ್ಯೆಯ ಖಾಸಗಿ ಹಾಗೂ ಸರ್ಕಾರಿ ಸಾರಿಗೆ ಬಸ್‍ಗಳ ಸೇವೆ ಲಭ್ಯವಿದೆ. ಚಿಕ್ಕಮಗಳೂರು ಜಿಲ್ಲೆಯಿಂದ ಇಲ್ಲಿಗೆ ಬಾಡಿಗೆ ಟ್ಯಾಕ್ಸಿ ವ್ಯವಸ್ಥೆಯೂ ಇದೆ. ಸ್ವಂತ ವಾಹನಗಳು ಇಲ್ಲದ ಮಂದಿ ಬಾಡಿಗೆ ವಾಹನಗಳನ್ನು ಮಾಡಿಕೊಂಡು ಈ ಸ್ಥಳವನ್ನು ತಲುಪಬಹುದು.

ಕಡೂರ್ ಜಂಕ್ಷನ್ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ (ಮುಳ್ಳಯ್ಯನಗಿರಿಯಿಂದ 60 ಕಿ.ಮೀ) ಮತ್ತು ಮಂಗಳೂರು ಹತ್ತಿರದ ವಿಮಾನ ನಿಲ್ದಾಣ (180 ಕಿ.ಮೀ). ಚಿಕ್ಕಮಗಳೂರು (ಮುಳ್ಳಯ್ಯನಗಿರಿ ಯಿಂದ 22 ಕಿ.ಮೀ) ವರೆಗೆ ಬಸ್ಸುಗಳು ಲಭ್ಯವಿದೆ. ಚಿಕ್ಕಮಗಳೂರು ಅಥವಾ ಕಡೂರಿನಿಂದ ಟ್ಯಾಕ್ಸಿ ಪಡೆದು ಮುಳ್ಳಯ್ಯನಗಿರಿ ಯನ್ನು ತಲುಪಬಹುದು. ಕೊನೆಯ ಕೆಲವು ಕಿ.ಮೀ.ಗಳು ಕಿರಿದಾದ ರಸ್ತೆಯಾಗಿದ್ದು, ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾಗುತ್ತದೆ.

ವಸತಿ : ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವಾರು ಐಷಾರಾಮಿ ರೆಸಾರ್ಟ್‌ಗಳು ಮತ್ತು ಕೈಗೆಟುಕುವ ಹೋಂ ಸ್ಟೇಗಳು ಲಭ್ಯವಿದೆ. ಚಿಕ್ಕಮಗಳೂರು ಪಟ್ಟಣದಲ್ಲಿ ಬಜೆಟ್ ಹೋಟೆಲ್‌ಗಳು ಲಭ್ಯವಿದೆ.

ರಾಜ್ಯದ ಇತರೆ ಸುದ್ದುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:31 pm, Sun, 21 April 24

ತಾಜಾ ಸುದ್ದಿ
ವಿದ್ಯುತ್ ದೀಪದ ಬೆಳಕಲ್ಲಿ ಕಣ್ಮನ ಸೆಳೆದ ತುಂಗಭದ್ರಾ ಜಲಾಶಯ, ವಿಡಿಯೋ
ವಿದ್ಯುತ್ ದೀಪದ ಬೆಳಕಲ್ಲಿ ಕಣ್ಮನ ಸೆಳೆದ ತುಂಗಭದ್ರಾ ಜಲಾಶಯ, ವಿಡಿಯೋ
ಪ್ರಶ್ನೆಗಳಿಗೆ ಉತ್ತರಿಸುವ ಬದಲು ಸಿಎಂ ಹೇಡಿಯಂತೆ ಓಡಿಹೋಗಿದ್ದಾರೆ: ಅಶೋಕ
ಪ್ರಶ್ನೆಗಳಿಗೆ ಉತ್ತರಿಸುವ ಬದಲು ಸಿಎಂ ಹೇಡಿಯಂತೆ ಓಡಿಹೋಗಿದ್ದಾರೆ: ಅಶೋಕ
ಮುಡಾ ಹಗರಣ: ನ್ಯಾಯ ಕೇಳಲು ರಾಜ್ಯಪಾಲರಲ್ಲಿಗೆ ಹೋದ ವಿರೋಧ ಪಕ್ಷಗಳ ಶಾಸಕರು
ಮುಡಾ ಹಗರಣ: ನ್ಯಾಯ ಕೇಳಲು ರಾಜ್ಯಪಾಲರಲ್ಲಿಗೆ ಹೋದ ವಿರೋಧ ಪಕ್ಷಗಳ ಶಾಸಕರು
ಶಿರೂರು ಗುಡ್ಡ ಕುಸಿತ: ನದಿಯಲ್ಲಿ ತೇಲಿಬಂತು ಟ್ರಕ್​ನಲ್ಲಿದ್ದ ಮರದ ತುಂಡು
ಶಿರೂರು ಗುಡ್ಡ ಕುಸಿತ: ನದಿಯಲ್ಲಿ ತೇಲಿಬಂತು ಟ್ರಕ್​ನಲ್ಲಿದ್ದ ಮರದ ತುಂಡು
ಬಿಜೆಪಿ ನಾಯಕರಿಂದ ಹೂವು ನೀಡಿ ಮನವೊಲಿಸುವ ಪ್ರಯತ್ನಕ್ಕೂ ಮಣಿಯದ ಸ್ಪೀಕರ್
ಬಿಜೆಪಿ ನಾಯಕರಿಂದ ಹೂವು ನೀಡಿ ಮನವೊಲಿಸುವ ಪ್ರಯತ್ನಕ್ಕೂ ಮಣಿಯದ ಸ್ಪೀಕರ್
ಅರ್ಜುನ್ ಮತ್ತಿಬ್ಬರ ಶೋಧ ಜಾರಿ, ಡ್ರೋನ್ ಮತ್ತು ಕೋಸ್ಟ್ ಗಾರ್ಡ್ ಚಾಪರ್ ಬಳಕೆ
ಅರ್ಜುನ್ ಮತ್ತಿಬ್ಬರ ಶೋಧ ಜಾರಿ, ಡ್ರೋನ್ ಮತ್ತು ಕೋಸ್ಟ್ ಗಾರ್ಡ್ ಚಾಪರ್ ಬಳಕೆ
ಮೃತ ಮಾಲೀಕನಿಗಾಗಿ ಹುಡುಕಾಡುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ ಇಲ್ಲಿದೆ
ಮೃತ ಮಾಲೀಕನಿಗಾಗಿ ಹುಡುಕಾಡುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ ಇಲ್ಲಿದೆ
13 ವರ್ಷದ ಹಿಂದೆ ಜೈಲಿನಲ್ಲಿದ್ದಾಗ ದರ್ಶನ್ ಹೇಗಿದ್ದರು: ಜೈಲಧಿಕಾರಿ ನೆನಪು
13 ವರ್ಷದ ಹಿಂದೆ ಜೈಲಿನಲ್ಲಿದ್ದಾಗ ದರ್ಶನ್ ಹೇಗಿದ್ದರು: ಜೈಲಧಿಕಾರಿ ನೆನಪು
ವಾತಾವರಣ ಅನುಕೂಲಕರವಾಗಿದೆ, ಬಿಜೆಪಿ ಸದಸ್ಯರು ಪಾದಯಾತ್ರೆ ಮಾಡಲಿ: ಖರ್ಗೆ
ವಾತಾವರಣ ಅನುಕೂಲಕರವಾಗಿದೆ, ಬಿಜೆಪಿ ಸದಸ್ಯರು ಪಾದಯಾತ್ರೆ ಮಾಡಲಿ: ಖರ್ಗೆ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಜನರ ಹುಚ್ಚಾಟ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಜನರ ಹುಚ್ಚಾಟ