ವಾಷಿಂಗ್ಟನ್ ಅಕ್ಟೋಬರ್ 21: ಟರ್ಬನ್ (Turban) ಧರಿಸಿದ್ದಕ್ಕಾಗಿ ಬಸ್ಸಿನಲ್ಲಿ ಸಿಖ್ ಯುವಕನ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ 26 ವರ್ಷದ ವ್ಯಕ್ತಿಯನ್ನು ಅಮೆರಿಕದಲ್ಲಿ(US) ಬಂಧಿಸಿ ದ್ವೇಷದ ಅಪರಾಧದ (hate crime) ಆರೋಪ ಹೊರಿಸಲಾಗಿದೆ. ಕಳೆದ ವಾರ ಕ್ವೀನ್ಸ್‌ನ 118 ನೇ ಸ್ಟ್ರೀಟ್ ಮತ್ತು ಲಿಬರ್ಟಿ ಅವೆನ್ಯೂ ಬಳಿ ಬಸ್‌ನಲ್ಲಿ ನಡೆದ ಘಟನೆಯ ನಂತರ ಪೊಲೀಸರು ಕ್ರಿಸ್ಟೋಫರ್ ಫಿಲಿಪ್ಪೋಕ್ಸ್ ಅವರನ್ನು ಬಂಧಿಸಿ ದ್ವೇಷದ ಅಪರಾಧದ ಆರೋಪ ಹೊರಿಸಿದ್ದಾರೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ಕ್ರಿಸ್ಟೋಫರ್ ಫಿಲಿಪ್ಪೋಕ್ಸ್ ನ್ಯೂಯಾರ್ಕ್ ಸಿಟಿ MTA ಬಸ್‌ನಲ್ಲಿ 19 ವರ್ಷದ ಸಿಖ್ ಹುಡುಗನ ಬಳಿಗೆ ಬಂದು, “ನಾವು ಈ ದೇಶದಲ್ಲಿ ಅದನ್ನು ಧರಿಸುವುದಿಲ್ಲ” ಎಂದು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಯುವಕನ್ನು ಮಾಸ್ಕ್ ತೆಗೆಯುವಂತೆ ಹೇಳಿದ್ದು ಆತನ ಮುಖ, ಬೆನ್ನು ಮತ್ತು ಅವನ ತಲೆಯ ಹಿಂಭಾಗದಲ್ಲಿ ಗುದ್ದಿದ್ದಾನೆ. ಟರ್ಬನ್ ತೆಗೆದುಹಾಕಲು ಪ್ರಯತ್ನಿಸುವಾಗ ನೋವುಂಟು ಮಾಡಿದ್ದಾನೆ. ನಂತರ ಅವರು ಬಸ್‌ನಿಂದ ಇಳಿದು ಲಿಬರ್ಟಿ ಅವೆನ್ಯೂದಲ್ಲಿ ಓಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮ್ಯಾನ್‌ಹ್ಯಾಟನ್ ನಲ್ಲಿ ದರೋಡೆಗೆ ಯತ್ನಿಸಿದ ಅಪರಾಧಕ್ಕಾಗಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ರಾಜ್ಯ ಜೈಲಿನಲ್ಲಿ ಸೇವೆ ಸಲ್ಲಿಸಿದ ನಂತರ ಜುಲೈ 2021 ರಲ್ಲಿ ಕ್ರಿಸ್ಟೋಫರ್ ಫಿಲಿಪ್ಪಾಕ್ಸ್ ನ್ನು ಷರತ್ತುಬದ್ಧವಾಗಿ ಪೆರೋಲ್ ಮೂಲಕ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ದಾಖಲೆಗಳು ತೋರಿಸಿವೆ ಎಂದು ವರದಿ ಹೇಳಿದೆ. ದಾಖಲೆಗಳ ಪ್ರಕಾರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಅವರನ್ನು ಈ ಹಿಂದೆ ಬಂಧಿಸಲಾಗಿದೆ.
ಇದನ್ನೂ ಓದಿ: 2024ರಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದರೆ ದೇಶ ತೊರೆಯುತ್ತೇನೆ: ಪಾಪ್ ಗಾಯಕಿ ಚೆರ್
ಹಲ್ಲೆಯಿಂದ ತಾನು ಜರ್ಜರಿತನಾಗಿದ್ದು ಕೋಪಗೊಂಡಿದ್ದೇನೆ ಎಂದು ಸಿಖ್ ಯುವಕ ಹೇಳಿದ್ದು, ಅವರು ಹೇಗೆ ಕಾಣುತ್ತಾರೆ ಎಂಬ ಕಾರಣದಿಂದ ಯಾರಿಗೂ ಕಿರುಕುಳ ನೀಡಬಾರದು ಎಂದು ಆತ ಹೇಳಿದ್ದಾರೆ. ಯುವಕ ತುಂಬಾ ಆಘಾತಕ್ಕೊಳಗಾಗಿದ್ದಾರೆ. ಕುಟುಂಬವು ಅವನ ಬಗ್ಗೆ ತುಂಬಾ ಹೆದರುತ್ತಿದೆ ಎಂದು ಸಮುದಾಯದ ಕಾರ್ಯಕರ್ತ ಜಪ್ನೀತ್ ಸಿಂಗ್ ಉಲ್ಲೇಖಿಸಿದ್ದಾರೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.
ನಾನು ವಿಡಿಯೊ ನೋಡಿದ್ದು ನಾನು ಕೋಪಗೊಂಡಿದ್ದೇನೆ. ನಾನು ಆಕ್ರೋಶಗೊಂಡಿದ್ದೇನೆ ಮತ್ತು ಸಂತ್ರಸ್ತನಿಗೆ ಏನಾಯಿತು ಎಂದು ನಾನು ಮನನೊಂದಿದ್ದೇನೆ. ನಾವು ನಮ್ಮ ನಗರಕ್ಕೆ ಜನರನ್ನು ಸ್ವಾಗತಿಸುವ ರೀತಿ ಅಲ್ಲ ಎಂದು MTA ಯ ಕಾರ್ಯನಿರ್ವಾಹಕ ಮುಖ್ಯ ಗ್ರಾಹಕ ಅಧಿಕಾರಿ ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ