2024ರಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದರೆ ದೇಶ ತೊರೆಯುತ್ತೇನೆ: ಪಾಪ್ ಗಾಯಕಿ ಚೆರ್

ನ್ಯೂಯಾರ್ಕ್ ಟೈಮ್ಸ್ ಪ್ರಕಾರ, 12 ರಿಪಬ್ಲಿಕನ್, ಮೂರು ಡೆಮೋಕ್ರಾಟ್ ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳನ್ನು ಒಳಗೊಂಡಂತೆ 17 ಜನರು 2024 ರಲ್ಲಿ ಯುಎಸ್ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಲಿದ್ದಾರೆ. ಪಾಪ್ ಐಕಾನ್ ಚೆರ್ ತನ್ನ ಮುಂಬರುವ 'ಕ್ರಿಸ್‌ಮಸ್' ಆಲ್ಬಂ, ತನ್ನ ವೃತ್ತಿಜೀವನದ ಆರಂಭಿಕ ಹಂತಗಳ ಬಗ್ಗೆ ಮಾತನಾಡಿದ್ದು ,  ಟ್ರಂಪ್ ಮತ್ತೊಮ್ಮೆ ಆಯ್ಕೆಯಾಗುವ ಸಾಧ್ಯತೆಯ ಬಗ್ಗೆ ಅವರ ನಿಲುವು ಈ ರೀತಿ ವ್ಯಕ್ತ ಪಡಿಸಿದ್ದಾರೆ.

2024ರಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದರೆ ದೇಶ ತೊರೆಯುತ್ತೇನೆ: ಪಾಪ್ ಗಾಯಕಿ ಚೆರ್
ಗಾಯಕಿ, ನಟಿ ಚೆರ್
Follow us
ರಶ್ಮಿ ಕಲ್ಲಕಟ್ಟ
|

Updated on: Oct 19, 2023 | 1:15 PM

ವಾಷಿಂಗ್ಟನ್ ಡಿಸಿ ಅಕ್ಟೋಬರ್ 19 : 2024ರಲ್ಲಿ ಡೊನಾಲ್ಡ್ ಟ್ರಂಪ್ (Donald Trump) ಅಮೆರಿಕ ಅಧ್ಯಕ್ಷರಾಗಿ ಮರು ಆಯ್ಕೆಯಾದರೆ ದೇಶ ತೊರೆಯುವುದಾಗಿ ಅಮೆರಿಕದ ಗಾಯಕಿ (American singer), ನಟಿ ಚೆರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ದಿ ಗಾರ್ಡಿಯನ್‌ಗೆ ನೀಡಿದ ಸಂದರ್ಶನದಲ್ಲಿ, ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧಿಕಾರಕ್ಕೇರುವ ಸಾಧ್ಯತೆಯ ಬಗ್ಗೆ ಆಕೆಯ ಅಭಿಪ್ರಾಯ ಕೇಳಲಾಗಿತ್ತು. ಆಗ ಚೆರ್ (Cher), ಕಳೆದ ಬಾರಿಯೇ ನನಗೆ ಸಾಕು ಸಾಕಾಗಿತ್ತು, ಈ ಬಾರಿ ಬರುತ್ತಾರಾ ಯಾರಿಗೆ ಗೊತ್ತು?, ಈ ಬಾರಿ ಅವರು ಅಧಿಕಾರಕ್ಕೇರಿದರೆ ನಾನು  ದೇಶ ತೊರೆಯುತ್ತೇನೆ ಎಂದು ಆಕೆ ಹೇಳಿದ್ದಾರೆ.

ನ್ಯೂಯಾರ್ಕ್ ಟೈಮ್ಸ್ ಪ್ರಕಾರ, 12 ರಿಪಬ್ಲಿಕನ್, ಮೂರು ಡೆಮೋಕ್ರಾಟ್ ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳನ್ನು ಒಳಗೊಂಡಂತೆ 17 ಜನರು 2024 ರಲ್ಲಿ ಯುಎಸ್ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಲಿದ್ದಾರೆ. ಪಾಪ್ ಐಕಾನ್ ಚೆರ್ ತನ್ನ ಮುಂಬರುವ ‘ಕ್ರಿಸ್‌ಮಸ್’ ಆಲ್ಬಂ, ತನ್ನ ವೃತ್ತಿಜೀವನದ ಆರಂಭಿಕ ಹಂತಗಳ ಬಗ್ಗೆ ಮಾತನಾಡಿದ್ದು ,  ಟ್ರಂಪ್ ಮತ್ತೊಮ್ಮೆ ಆಯ್ಕೆಯಾಗುವ ಸಾಧ್ಯತೆಯ ಬಗ್ಗೆ ಅವರ ನಿಲುವು ಈ ರೀತಿ ವ್ಯಕ್ತ ಪಡಿಸಿದ್ದಾರೆ.

ಟ್ರಾನ್ಸ್ ಹಕ್ಕುಗಳ ಸಮಸ್ಯೆ ಮತ್ತು ಟ್ರಾನ್ಸ್-ವಿರೋಧಿ ಕಾನೂನುಗಳ ಬಗ್ಗೆಯೂ ಅವರು ಮಾತನಾಡಿದ್ದು , ಇದು ಅವರು ಪಾಸ್ ಮಾಡಲು ಪ್ರಯತ್ನಿಸುತ್ತಿರುವ 500 ಮಸೂದೆಗಳಂತಿದೆ. ನಾನು ರಾತ್ರಿ ಇಬ್ಬರು ಟ್ರಾನ್ಸ್ ಹುಡುಗಿಯರೊಂದಿಗೆ ಇದ್ದೆ, ನನ್ನ ಸ್ವಂತ ಮಗುವೂ ಇತ್ತು. ಟ್ರಾನ್ಸ್ ಆಗಿರುವ ಚೆರ್, ನಾನು ‘ನಾವು ಒಟ್ಟಿಗೆ ನಿಲ್ಲಬೇಕು’ ಎಂದು ಹೇಳುತ್ತೇನೆ. ಟ್ರಾನ್ಸ್ ಜನರಿಗಾಗಿ ಅವರ ಅಂತಿಮ ಯೋಜನೆ ಏನೆಂದು ನನಗೆ ತಿಳಿದಿಲ್ಲ. ನಾನು ಅವರ ಕೈಬಿಡುವುದಿಲ್ಲ ಎಂದು ಹೇಳಿರುವುದಾಗಿ ದಿ ಗಾರ್ಡಿಯನ್ ವರದಿ ಮಾಡಿದೆ.

ಇದನ್ನೂ ಓದಿ: ಜೋ ಬೈಡನ್ ಬಳಿಕ ಇದೀಗ ಇಸ್ರೇಲ್​ಗೆ ಭೇಟಿ ನೀಡಲಿದ್ದಾರೆ ಬ್ರಿಟನ್ ಪ್ರಧಾನಿ ರಿಷಿ ಸುನಕ್

ತನ್ನ ಆಲ್ಬಂ ಬಗ್ಗೆ ಮಾತನಾಡಿದ ಚೆರ್, ನಾನು ಹಾಲಿಡೇ ಆಲ್ಬಂ ಮಾಡಲು ಬಯಸಿದ್ದೇನೆ”ಅದು ಪ್ರತಿ ಸೆಕೆಂಡಿಗೆ ‘ಕ್ರಿಸ್‌ಮಸ್’ ಎಂದು ಕಿರುಚುವುದಿಲ್ಲ. ಹಾಡುಗಳು ಹೆಸರಿನಿಂದಲೇ ತುಂಬಿಲ್ಲ ಎಂದು ಹೇಳಿದ್ದಾರೆ. ಚೆರ್ ಅವರ ಆಲ್ಬಂ ಅಕ್ಟೋಬರ್ 20 ರಂದು ಬಿಡುಗಡೆಯಾಗಲಿದ್ದು ರೋಲಿಂಗ್ ಸ್ಟೋನ್ ಪ್ರಕಾರ ಸ್ಟೀವಿ ವಂಡರ್, ಟೈಗಾ, ಸಿಂಡಿ ಲಾಪರ್, ಮೈಕೆಲ್ ಬಬಲ್ ಮತ್ತು ಇತರರ ಹಾಡುಗಳನ್ನೂ ಒಳಗೊಂಡಿದೆ. ಈ ಆಲ್ಬಂ 13 ಟ್ರ್ಯಾಕ್‌ಗಳನ್ನು ಹೊಂದಿರುತ್ತದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ