Global Remote Work Ranking: ಮನೆಯಿಂದಲೇ ಕಚೇರಿ ಕೆಲಸ; ವಿಶ್ವ ರ‍್ಯಾಂಕಿಂಗ್​​ನಲ್ಲಿ ಕುಸಿದ ಭಾರತ

ಭಾರತದ ಕೆಳ ಶ್ರೇಯಾಂಕವು ಎಲ್ಲಾ ನಾಲ್ಕು ಆಯಾಮಗಳಲ್ಲಿ ಕಳಪೆ ಪ್ರದರ್ಶನದ ಪರಿಣಾಮವಾಗಿದೆ. ವಿಶೇಷವಾಗಿ ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯ (77) ಮತ್ತು ಸಾಮಾಜಿಕ ಸುರಕ್ಷತೆ (74). ಭಾರತದ ಇ-ಮೂಲಸೌಕರ್ಯವು ವಿಶ್ವದಲ್ಲೇ ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿದ್ದು, 95 ನೇ ಸ್ಥಾನವನ್ನು ಗಳಿಸಿದೆ ಎಂದು ವರದಿಯು ಹೈಲೈಟ್ ಮಾಡಿದೆ

Global Remote Work Ranking: ಮನೆಯಿಂದಲೇ ಕಚೇರಿ ಕೆಲಸ; ವಿಶ್ವ ರ‍್ಯಾಂಕಿಂಗ್​​ನಲ್ಲಿ ಕುಸಿದ ಭಾರತ
ವರ್ಕ್ ಫ್ರಮ್ ಹೋಮ್ (ಪ್ರಾತಿನಿಧಿಕ ಚಿತ್ರ)
Follow us
ರಶ್ಮಿ ಕಲ್ಲಕಟ್ಟ
|

Updated on: Oct 19, 2023 | 4:39 PM

ದೆಹಲಿ ಅಕ್ಟೋಬರ್ 19: ಮನೆಯಿಂದಲೇ ಕೆಲಸ ಅಥವಾ ರಿಮೋಟ್ ವರ್ಕ್​​​ನಲ್ಲಿ (Remote Work) ಭಾರತದ ರ‍್ಯಾಂಕಿಂಗ್ ಕುಸಿದೆ. ಈ ಬಗ್ಗೆ ನಡೆದ ಸಮೀಕ್ಷಾ ವರದಿ ಪ್ರಕಾರ 108 ರಾಷ್ಟ್ರಗಳ ಪೈಕಿ ಭಾರತ 64ನೇ ಸ್ಥಾನದಲ್ಲಿದೆ. ಈ ಕುಸಿತವನ್ನು ಪ್ರಾಥಮಿಕವಾಗಿ ಭಾರತದ ಸಬ್‌ಪಾರ್ ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯ ಮತ್ತು ಸಾಮಾಜಿಕ ಸುರಕ್ಷತೆಗೆ ಸಂಬಂಧಿಸಿದ್ದು ಎಂದು ಹೇಳಬಹುದಾಗಿದೆ. ಗ್ಲೋಬಲ್ ರಿಮೋಟ್ ವರ್ಕ್ ಇಂಡೆಕ್ಸ್ (GRWI-Global Remote Work Index), ಸೈಬರ್ ಸೆಕ್ಯುರಿಟಿ ಸಂಸ್ಥೆ ನಾರ್ಡ್‌ಲೇಯರ್ ಈ ಸಮೀಕ್ಷೆ ಪ್ರಕಟಿಸಿದೆ. ಸೈಬರ್ ಸುರಕ್ಷತೆ, ಆರ್ಥಿಕ ಸುರಕ್ಷತೆ, ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯ ಮತ್ತು ಸಾಮಾಜಿಕ ಸುರಕ್ಷತೆಯ ನಾಲ್ಕು ಪ್ರಮುಖ ಮಾನದಂಡಗಳನ್ನು ಆಧರಿಸಿ ದೇಶಗಳನ್ನು ಮೌಲ್ಯಮಾಪನ ಮಾಡಲಾಗಿದೆ.

“ಕೆಲವು ದೊಡ್ಡ ಟೆಕ್ ಕಂಪನಿಗಳು ಇತ್ತೀಚೆಗೆ ತಮ್ಮ ಉದ್ಯೋಗಿಗಳನ್ನು ಕಚೇರಿಗೆ ಮರಳಿ ಕರೆತಂದರೂ ಅಥವಾ ಹೈಬ್ರಿಡ್ ಕೆಲಸದ ಮಾದರಿಯನ್ನು ಪರಿಚಯಿಸಿದರೂ, ರಿಮೋಟ್ ಕೆಲಸವೂ ಮುಂದುವರಿದಿದೆ. ಇದು ಕೇವಲ ಪ್ರವೃತ್ತಿಯಲ್ಲ ನಾವು ಉತ್ಪಾದಕತೆ ಮತ್ತು ಕೆಲಸ-ಜೀವನ ಸಮತೋಲನವನ್ನು ಹೇಗೆ ಸಮೀಪಿಸುತ್ತೇವೆ ಎಂಬುದರ ಮೂಲಭೂತ ಬದಲಾವಣೆಯಾಗಿದೆ ಎಂದು ನಾರ್ಡ್‌ಲೇಯರ್‌ನ ವ್ಯವಸ್ಥಾಪಕ ನಿರ್ದೇಶಕ ಡೊನಾಟಾಸ್ ಟಮೆಲಿಸ್ ಹೇಳಿದ್ದಾರೆ

ಭಾರತದ ಕೆಳ ಶ್ರೇಯಾಂಕವು ಎಲ್ಲಾ ನಾಲ್ಕು ಆಯಾಮಗಳಲ್ಲಿ ಕಳಪೆ ಪ್ರದರ್ಶನದ ಪರಿಣಾಮವಾಗಿದೆ. ವಿಶೇಷವಾಗಿ ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯ (77) ಮತ್ತು ಸಾಮಾಜಿಕ ಸುರಕ್ಷತೆ (74). ಭಾರತದ ಇ-ಮೂಲಸೌಕರ್ಯವು ವಿಶ್ವದಲ್ಲೇ ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿದ್ದು, 95 ನೇ ಸ್ಥಾನವನ್ನು ಗಳಿಸಿದೆ ಎಂದು ವರದಿಯು ಹೈಲೈಟ್ ಮಾಡಿದೆ. ಇದಲ್ಲದೆ, ಭಾರತದ ಇಂಟರ್ನೆಟ್ ಸಂಪರ್ಕವು ದುಬಾರಿ (78 ನೇ) ಮತ್ತು ಗುಣಮಟ್ಟದಲ್ಲಿ (70 ನೇ) ಕೊರತೆಯಿದೆ.

ಇದನ್ನೂ ಓದಿ:  Viral Video: ಐದನೇ ಮಹಡಿಯಿಂದ ಸೂಪರ್ ಮ್ಯಾನ್​​ನಂತೆ ಜಿಗಿದ ಶ್ವಾನ, ಮುಂದೇನಾಯಿತು? ನೋಡಿ   

ಸಾಮಾಜಿಕ ಸುರಕ್ಷತೆಯ ಸಂದರ್ಭದಲ್ಲಿ, ಕಡಿಮೆ ವೈಯಕ್ತಿಕ ಹಕ್ಕುಗಳ ಸೂಚ್ಯಂಕ (88) ಮತ್ತು ಒಳಗೊಳ್ಳುವಿಕೆಯ ಕೊರತೆಯಿರುವ ಪರಿಸರದೊಂದಿಗೆ (65) ಭಾರತವು ಜಾಗತಿಕವಾಗಿ ಹೆಚ್ಚು ಪ್ರತ್ಯೇಕವಾಗಿರುವ ದೇಶಗಳಲ್ಲಿ ಒಂದಾಗಿದೆ. ಸೈಬರ್ ಮತ್ತು ಆರ್ಥಿಕ ಸುರಕ್ಷತೆಗೆ ಸಂಬಂಧಿಸಿದಂತೆ, ಭಾರತದ ಕಾರ್ಯಕ್ಷಮತೆಯನ್ನು ಕ್ರಮವಾಗಿ 56 ಮತ್ತು 55 ರ ಶ್ರೇಯಾಂಕಗಳೊಂದಿಗೆ ಸರಾಸರಿ ಎಂದು ಪರಿಗಣಿಸಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್