ಅಮೆರಿಕ: ವಾಟರ್​ಪಾರ್ಕ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, ಇಬ್ಬರು ಮಕ್ಕಳು ಸೇರಿ 8 ಮಂದಿಗೆ ಗಾಯ

|

Updated on: Jun 16, 2024 | 12:04 PM

ಅಮೆರಿಕದ ವಾಟರ್​ಪಾರ್ಕ್​ನಲ್ಲಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಬಳಿಕ ಆತನ ಶವವೂ ಪತ್ತೆಯಾಗಿದೆ, ಘಟನೆಯಲ್ಲಿ ಮಕ್ಕಳು ಸೇರಿ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಮೆರಿಕ: ವಾಟರ್​ಪಾರ್ಕ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, ಇಬ್ಬರು ಮಕ್ಕಳು ಸೇರಿ 8 ಮಂದಿಗೆ ಗಾಯ
Image Credit source: India TV
Follow us on

ಅಮೆರಿಕದ ಮಿಚಿಗನ್ ರಾಜ್ಯದ ಅತಿದೊಡ್ಡ ನಗರವಾದ ಡೆಟ್ರಾಯಿಟ್​ ಬಳಿಯ ವಾಟರ್​ಪಾರ್ಕ್​ನಲ್ಲಿ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 8 ಮಂದಿ ಗಾಯಗೊಂಡಿದ್ದಾರೆ. ರೋಷೆಸ್ಟರ್​ ಹಿಲ್ಸ್​ನ ಚಿಲ್ಡ್ರನ್ ವಾಟರ್ ಪಾ್ಕ್​ನಲ್ಲಿ ಈ ದಾಳಿ ನಡೆದಿದೆ.

ಓಕ್ಲ್ಯಾಂಡ್​ ಕೌಂಟಿಯಲ್ಲಿ ಆರೋಪಿ ಗುಂಡಿನ ದಾಳಿಯ ನಂತರ ಹತ್ತಿರದ ಮನೆಯೊಂದರಲ್ಲಿ ಅಡಗಿಕುಳಿತಿದ್ದ. ಪೊಲೀಸರು ಮನೆಯನ್ನು ಸುತ್ತುವರೆದು ಒಳಗೆ ಪ್ರವೇಶಿಸಿದಾಗ ಶಂಕಿತ ವ್ಯಕ್ತಿಯ ಶವ ಅಲ್ಲಿ ಇತ್ತು. ಗುಂಡಿನ ದಾಳಿಯಲ್ಲಿ ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ.

ಶನಿವಾರ ಸಂಜೆ 5ಗಂಟೆ ವೇಳೆಗೆ ರೋಚೆಸ್ಟರ್​ ಹಿಲ್ಸ್​ನ ಆಬರ್ನ್​ ಸ್ಪ್ಲಾಶ್​ ಪ್ಯಾಡ್​ಗೆ ಆಗಮಿಸಿದ್ದ ಆರೋಪಿ ತನ್ನ ವಾಹನದಿಂದ ಇಳಿದು ಗುಂಡು ಹಾರಿಸಲು ಶುರು ಮಾಡಿದ್ದ, 9 ಎಂಎಂ ಸೆಮಿ ಆಟೋಮ್ಯಾಟಿಕ್ ಗ್ಲಾಕ್​ನಿಂದ 28 ಸುತ್ತು ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಅಮೆರಿಕದಲ್ಲಿ ಮನೆಯಲ್ಲಿ ಗುಂಡಿನ ದಾಳಿ; 6 ತಿಂಗಳ ಮಗು, ತಾಯಿ ಸೇರಿ 6 ಜನ ಸಾವು

ಘಟನಾ ಸ್ಥಳದಿಂದ ಬಂದೂಕು ಹಾಗೂ ಮೂರು ಖಾಲಿ ಮ್ಯಾಗಜೀನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಂದೂಕಿನಿಂದ ಗುಂಡಿನ ದಾಳಿ ನಡೆದಿದೆ ಎಂದು ಹೇಳಲಾಗಿದೆ.

ಸದ್ಯ ಪೊಲೀಸರು ಘಟನಾ ಸ್ಥಳದಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ, ಅಪಾಯ ಇನ್ನೂ ಇದೆ ಎಂದಿದ್ದಾರೆ. 2021ರಲ್ಲಿ ರೋಚೆಸ್ಟರ್​ ಹಿಲ್ಸ್​ನ ಉತ್ತರಕ್ಕೆ 15 ಮೈಲುಗಳಷ್ಟು ದೂರದಲ್ಲಿರುವ ಆಕ್ಸ್​ಫರ್ಡ್​ನ ಹೈಸ್ಕೂಲ್​ನಲ್ಲಿ ಗುಂಡಿನ ದಾಳಿ ನಡೆದಿದ್ದು, ಇದರಲ್ಲಿ ನಾಲ್ಕು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ