ಮೊದಲ ಬಾರಿಗೆ ಒಬ್ಬರನ್ನು ಅರೆಸ್ಟ್​ ಮಾಡಿದ್ದೇನೆ ಎಂದು ಹೆಮ್ಮೆಯಿಂದ ಪತ್ನಿಗೆ ಮೆಸೇಜ್ ಮಾಡಿದ್ದ ಪೊಲೀಸ್ ಅಧಿಕಾರಿ​ ಶವವಾಗಿ ಪತ್ತೆ

ನಾನು ಒಬ್ಬರನ್ನು ಅರೆಸ್ಟ್​ ಮಾಡಿದ್ದೇನೆ ಎಂದು ಹೆಮ್ಮೆಯಿಂದ ಪತ್ನಿಗೆ ಮೆಸೇಜ್ ಮಾಡಿದ್ದ ಪೊಲೀಸ್​ ಅಧಿಕಾರಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಇತ್ತೀಚೆಗಷ್ಟೇ ಪೊಲೀಸ್​ ಇಲಾಖೆ ಸೇರಿದ್ದರು. ಇದು ಅವರ ಮೊದಲ ಬಂಧನವಾಗಿತ್ತು.

ಮೊದಲ ಬಾರಿಗೆ ಒಬ್ಬರನ್ನು ಅರೆಸ್ಟ್​ ಮಾಡಿದ್ದೇನೆ ಎಂದು ಹೆಮ್ಮೆಯಿಂದ ಪತ್ನಿಗೆ ಮೆಸೇಜ್ ಮಾಡಿದ್ದ ಪೊಲೀಸ್ ಅಧಿಕಾರಿ​ ಶವವಾಗಿ ಪತ್ತೆ
ಪೊಲೀಸ್​
Image Credit source: NDTV

Updated on: Feb 21, 2024 | 8:58 AM

ಎಲ್ಲರಿಗೂ ಅವರವರ ವೃತ್ತಿ ಬಗ್ಗೆ ಹೆಮ್ಮೆ ಇರುತ್ತದೆ, ತಮ್ಮ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಿದಾಗ ಅಥವಾ ಮೊದಲ ಹೆಜ್ಜೆ ಇಟ್ಟಾಗ ತುಂಬಾ ಹೆಮ್ಮೆಯಾಗುತ್ತದೆ. ಹಾಗೆಯೇ ಅಮೆರಿಕದ ಪೊಲೀಸ್​ ಅಧಿಕಾರಿಯೊಬ್ಬರು ತಮ್ಮ ವೃತ್ತಿಯಲ್ಲಿ ಮೊದಲ ಬಾರಿಗೆ ಒಬ್ಬರನ್ನು ಬಂಧಿಸಿದ್ದರು. ಈ ಖುಷಿಯ ವಿಚಾರವನ್ನು ಪತ್ನಿಗೆ ಮೆಸೇಜ್ ಕೂಡ ಮಾಡಿದ್ದರು, ಆದರೆ ಮರುದಿನ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

35 ವರ್ಷದ ಪೊಲೀಸ್​ ಅಧಿಕಾರಿ ಟೆನ್ನೆಸ್ಸೀ ರಾಜ್ಯದಲ್ಲಿ ಹೊಸದಾಗಿ ಕರ್ತವ್ಯಕ್ಕೆ ನೇಮಕಗೊಂಡಿದ್ದರು. ಅವರ ಹೆಸರು ರಾಬರ್ಟ್​ ಜಾನ್ ಲಿಯೊನಾರ್ಡ್​. ಆದರೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​ ಇದ್ದು ಪೊಲೀಸ್​ ಅಧಿಕಾರಿಯ ಜತೆ ಮಹಿಳೆಯ ಶವವೂ ಪತ್ತೆಯಾಗಿದೆ.

ಮಾಹಿತಿ ಪ್ರಕಾರ ಜಾನ್ ಮಹಿಳೆಯನ್ನು ಬಂಧಿಸಿದ್ದರು, ಇದು ಅವರ ಮೊದಲ ಬಂಧನವಾಗಿದ್ದು, ಪತ್ನಿಗೆ ಈ ಕುರಿತು ಸಂದೇಶ ಕಳುಹಿಸಿದ್ದರು.
ಪ್ರೇಮಿಗಳ ದಿನದಂದು ರಾತ್ರಿ 10 ಗಂಟೆ ಸುಮಾರಿಗೆ ಓರ್ವ ಪುರುಷ ಹಾಗೂ ಓರ್ವ ಮಹಿಳೆ ಸೇತುವೆ ಮೇಲೆ ಜಗಳವಾಡುತ್ತಿದ್ದಾರೆ ಎನ್ನುವ ಮಾಹಿತಿ 911 ಮೂಲಕ ಪೊಲೀಸರಿಗೆ ತಲುಪಿತ್ತು. ಮಹಿಳೆಯನ್ನು ಜಾನ್ ಲಿಯೋನಾರ್ಡ್​ ಬಂಧಿಸಿದ್ದರು.

ಮತ್ತಷ್ಟು ಓದಿ: ನಿರ್ಮಾಣ ಹಂತದ ಕಟ್ಟಡದಲ್ಲಿ ಯುವತಿಯ ಶವ ಪತ್ತೆ, ಸ್ಥಳಕ್ಕೆ ಧಾವಿಸಿದ ಸಂಪಂಗಿರಾಮನಗರ ಪೊಲೀಸರು

ಬಳಿಕ ಲಿಯೋನಾರ್ಡ್​ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು, ಬಳಿಕ ಶೋಧ ತಂಡ ಹುಡುಕಾಟ ಆರಂಭಿಸಿತ್ತು. ಪೊಲೀಸರು ಕಾರನ್ನು ಪತ್ತೆ ಹಚ್ಚಲು ಉಪಗ್ರಹ ಟ್ರ್ಯಾಕಿಂಗ್ ಬಳಸಿದ್ದಾರೆ, ಗುರುವಾರ ಟೆನ್ನೆಸ್ಸೀ ನದಿಯಿಂದ ಇಬ್ಬರ ಮೃತದೇಹವನ್ನು ಹೊರ ತೆಗೆಯಲಾಯಿತು.

ಕಾರು ನದಿಗೆ ಹೇಗೆ ಬಿದ್ದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ನದಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಲಿಯೋನಾರ್ಡ್​ ಈ ಮೊದಲು ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಪೊಲೀಸ್ ಕೆಲಸ ಸಿಕ್ಕಿತ್ತು.

ಅವರು ಡಿಸೆಂಬರ್​ನಲ್ಲಿ ಪೊಲೀಸ್ ಸೇವೆಗೆ ಸೇರಿದ್ದರು. ಲಿಯೋನಾರ್ಡ್​ಗೆ ಐದು ಮಕ್ಕಳಿದ್ದಾರೆ. ಅವರ ಕನಸನ್ನು ನನಸು ಮಾಡಿಕೊಳ್ಳಲು ಅವರು ಪೊಲೀಸ್​ ಸೇವೆಗೆ ಸೇರಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ