‘ಭಾರತ ಎಷ್ಟು ಗಲೀಜಾಗಿದೆ ನೋಡಿ.. ಅದರ ಗಾಳಿಯಲ್ಲಿ ಎಷ್ಟು ಮಾಲಿನ್ಯವಿದೆ ಅಬ್ಬಬ್ಬಾ!’

|

Updated on: Oct 23, 2020 | 2:44 PM

ಚೀನಾನ ಒಮ್ಮೆ ನೋಡಿ. ಎಷ್ಟು ಗಲೀಜಾಗಿದೆ. ಒಮ್ಮೆ ರಷ್ಯಾನ ನೋಡಿ. ಅದೂ ಎಷ್ಟು ಗಲೀಜಾಗಿದೆ. ಮತ್ತೆ ಈ ಇಂಡಿಯಾ.. ಪೂರಾ ಗಲೀಜು.. ಆ ದೇಶದಲ್ಲಿ ಗಾಳಿಯಲ್ಲಿ ಎಷ್ಟು ಮಾಲಿನ್ಯವಿದೆಯೋ ನೋಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಂಗವಾಗಿ ಇಂದು ನಡೆದ ಅಂತಿಮ ನೇರಾನೇರ ಚರ್ಚೆಯಲ್ಲಿ ಹೀಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಧ್ಯಕ್ಷೀಯ ಅಭ್ಯರ್ಥಿಗಳ ಚರ್ಚೆ ವೇಳೆ ಜಾಗತಿಕ ಹವಾಮಾನ ವೈಪರೀತ್ಯದ ಬಗ್ಗೆ ಮಾತನಾಡುತ್ತಿದ್ದ ಅಧ್ಯಕ್ಷ ಟ್ರಂಪ್​ ಈ ಮಾತನ್ನು […]

‘ಭಾರತ ಎಷ್ಟು ಗಲೀಜಾಗಿದೆ ನೋಡಿ.. ಅದರ ಗಾಳಿಯಲ್ಲಿ ಎಷ್ಟು ಮಾಲಿನ್ಯವಿದೆ ಅಬ್ಬಬ್ಬಾ!’
Follow us on

ಚೀನಾನ ಒಮ್ಮೆ ನೋಡಿ. ಎಷ್ಟು ಗಲೀಜಾಗಿದೆ. ಒಮ್ಮೆ ರಷ್ಯಾನ ನೋಡಿ. ಅದೂ ಎಷ್ಟು ಗಲೀಜಾಗಿದೆ. ಮತ್ತೆ ಈ ಇಂಡಿಯಾ.. ಪೂರಾ ಗಲೀಜು.. ಆ ದೇಶದಲ್ಲಿ ಗಾಳಿಯಲ್ಲಿ ಎಷ್ಟು ಮಾಲಿನ್ಯವಿದೆಯೋ ನೋಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಂಗವಾಗಿ ಇಂದು ನಡೆದ ಅಂತಿಮ ನೇರಾನೇರ ಚರ್ಚೆಯಲ್ಲಿ ಹೀಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಧ್ಯಕ್ಷೀಯ ಅಭ್ಯರ್ಥಿಗಳ ಚರ್ಚೆ ವೇಳೆ ಜಾಗತಿಕ ಹವಾಮಾನ ವೈಪರೀತ್ಯದ ಬಗ್ಗೆ ಮಾತನಾಡುತ್ತಿದ್ದ ಅಧ್ಯಕ್ಷ ಟ್ರಂಪ್​ ಈ ಮಾತನ್ನು ಪ್ರಸ್ತಾಪಿಸಿದ್ದಾರೆ. ಪ್ಯಾರಿಸ್​ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದ ನಿರ್ಧಾರವನ್ನು ಸಮರ್ಥಿಸಿಕೊಂಡ ಟ್ರಂಪ್​.. ನಮ್ಮನ್ನು ನ್ಯಾಯಸಮ್ಮತವಾಗಿ ನಡೆಸಿಕೊಳ್ಳುತ್ತಿರಲಿಲ್ಲ. ಪ್ಯಾರಿಸ್​ ಒಪ್ಪಂದದಿಂದ ನಮಗೆ ಭಾರಿ ಅನ್ಯಾಯವಾಗಿದೆ. ಅದರಿಂದ ನಾನು ಸಾವಿರಾರು ಉದ್ಯೋಗಗಳನ್ನು ಕಳೆದುಕೊಳ್ಳಲು ಇಷ್ಟವಿರಲಿಲ್ಲ ಎಂದು ಹೇಳಿದರು.

ಅಂದ ಹಾಗೆ, ಭಾರತದ ಬಗ್ಗೆ ಅಧ್ಯಕ್ಷ ಟ್ರಂಪ್​ ವಿವಾದಾತ್ಮಕ ಹೇಳಿಕೆ ಕೊಟ್ಟಿರುವುದು ಇದೇ ಮೊದಲಲ್ಲ. ಈ ಹಿಂದೆ ನಡೆದಿದ್ದ ಅಧ್ಯಕ್ಷೀಯ ಅಭ್ಯರ್ಥಿಗಳ ಚರ್ಚೆ ವೇಳೆಯೂ ಸಹ ಡೊನಾಲ್ಟ್​ ಟ್ರಂಪ್​ ಕೊರೊನಾ ಬಗ್ಗೆ ಮಾತನಾಡುತ್ತಾ.. ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯನ್ನು ಭಾರತ ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಕಟಕಿಯಾಡಿದ್ದರು.