Video: ತೂಕಡಿಕೆ ಜಾಗತಿಕ ಸಮಸ್ಯೆ !-ಕೋಪ್​ 26 ಶೃಂಗಸಭೆಯಲ್ಲಿ ನಿದ್ದೆಗೆ ಜಾರಿದ ಯುಎಸ್ ಅಧ್ಯಕ್ಷ ಜೋ ಬೈಡನ್​

| Updated By: Lakshmi Hegde

Updated on: Nov 02, 2021 | 3:08 PM

ಜೋ ಬೈಡನ್​  ನಿದ್ದೆಗೆ ಜಾರಿದ್ದು ಕೋಪ್​ 26 ಶೃಂಗಸಭೆಯ ಪ್ರಾರಂಭಿಕ ಭಾಷಣದ ವೇಳೆಗೆ ಎನ್ನಲಾಗಿದೆ. ಮಾಸ್ಕ್​ ಹಾಕಿ ಕುಳಿತ ಅವರು ಒಂದು ಬಾರಿ ಕಣ್ಮುಚ್ಚಿ ಮತ್ತೊಮ್ಮೆ ಎಚ್ಚರಗೊಳ್ಳುತ್ತಾರೆ.

Video: ತೂಕಡಿಕೆ ಜಾಗತಿಕ ಸಮಸ್ಯೆ !-ಕೋಪ್​ 26 ಶೃಂಗಸಭೆಯಲ್ಲಿ ನಿದ್ದೆಗೆ ಜಾರಿದ ಯುಎಸ್ ಅಧ್ಯಕ್ಷ ಜೋ ಬೈಡನ್​
ನಿದ್ದೆಗೆ ಜಾರಿದ ಜೋ ಬೈಡನ್​
Follow us on

ತೂಕಡಿಕೆ ಒಂದು ಜಾಗತಿಕ ಸಮಸ್ಯೆ ! ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden)​ ಅವರಿಗೂ ಇದು ಬಿಟ್ಟಿಲ್ಲ. ಹೀಗೊಂದು ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಸದ್ಯ ಯುಕೆಯ ಗ್ಲಾಸ್ಗೋದಲ್ಲಿ  ನಡೆಯುತ್ತಿರುವ ಕೋಪ್​ 26 ಶೃಂಗಸಭೆ (ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಸಮ್ಮೇಳನ)ಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್​, ಪ್ರಧಾನಿ ಮೋದಿ, ಯುಕೆ ಪ್ರಧಾನಿ ಬೋರಿಸ್​ ಜಾನ್ಸನ್​ ಸೇರಿ ಹಲವು ರಾಷ್ಟ್ರ ನಾಯಕರು ಪಾಲ್ಗೊಂಡಿದ್ದಾರೆ. ಈ ಸಮ್ಮೇಳನ ನವೆಂಬರ್ 12ರವರೆಗೂ ನಡೆಯಲಿದೆ.

ನಿನ್ನೆಯಿಂದ ಶುರುವಾದ ಸಮ್ಮೇಳನದಲ್ಲಿ ವಿವಿಧ ರಾಷ್ಟ್ರಗಳ ನಾಯಕರು ಒಬ್ಬೊಬ್ಬರಾಗಿ ತಮ್ಮ ಭಾಷಣ ಮಾಡುತ್ತಿದ್ದಾರೆ. ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆ, ಅದರ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮಗಳು ಹೀಗೆ ವಿವಿಧ ಆಯಾಮಗಳು, ವಿಚಾರಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡುತ್ತಿದ್ದಾರೆ. ಆದರೆ ಈ ಭಾಷಣ ಕೇಳುತ್ತ ಕೇಳುತ್ತ ಯುಎಸ್​ ಅಧ್ಯಕ್ಷ ಜೋ ಬೈಡನ್​ ಅವರು ನಿದ್ದೆ ಬಂದು ಒಂದು ಕ್ಷಣ ತೂಕಡಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟೆ ವೈರಲ್ ಆಗಿದೆ.

ತೂಕಡಿಕೆ ಸಾಮಾನ್ಯ. ತಾಸುಗಟ್ಟಲೆ ಉಪನ್ಯಾಸ ಕೇಳಬೇಕು..ಭಾಷಣ ಕೇಳಬೇಕಾಗಿ ಬಂದಾಗ ಹೀಗೆ ಕುಳಿತಲ್ಲೇ ನಿದ್ದೆ ಒತ್ತರಿಸಿ ಬಂದು ತೂಕಡಿಕೆ ಉಂಟಾಗುತ್ತದೆ. ಭಾರತದಲ್ಲಿ ಕೂಡ ಹಲವು ರಾಜಕಾರಣಿಗಳು ಸಭೆಯಲ್ಲಿ, ವೇದಿಕೆಯ ಮೇಲೆ ಕುಳಿತೇ ಗೋಣು ಆಡಿಸಿದ ವಿಡಿಯೋಗಳನ್ನು ಈಗಾಗಲೇ ಹಲವು ಬಾರಿ ನೋಡಿದ್ದೇವೆ. ಆದರೆ ಇದೀಗ ಜೋ ಬೈಡನ್​ ತೂಕಡಿಕೆ ತುಸು ಜಾಸ್ತಿಯೇ ಸುದ್ದಿಯಾಗಿದೆ..ಹೇಳಿಕೇಳಿ ಒಂದು ರಾಷ್ಟ್ರದ ಅಧ್ಯಕ್ಷರು ನೋಡಿ ಅದಕ್ಕೇ ಇರಬೇಕು !

ಜೋ ಬೈಡನ್​  ನಿದ್ದೆಗೆ ಜಾರಿದ್ದು ಕೋಪ್​ 26 ಶೃಂಗಸಭೆಯ ಪ್ರಾರಂಭಿಕ ಭಾಷಣದ ವೇಳೆಗೆ ಎನ್ನಲಾಗಿದೆ. ಮಾಸ್ಕ್​ ಹಾಕಿ ಕುಳಿತ ಅವರು ಒಂದು ಬಾರಿ ಕಣ್ಮುಚ್ಚಿ ಮತ್ತೊಮ್ಮೆ ಎಚ್ಚರಗೊಳ್ಳುತ್ತಾರೆ. ಆದರೆ ಕೆಲ ಕ್ಷಣದಲ್ಲಿ ಮತ್ತೆ ಅವರಿಗೆ ನಿದ್ದೆ ಆವರಿಸುತ್ತದೆ. ಅಷ್ಟರಲ್ಲಿ ಅವರ ಬಳಿ ಬಂದ ಅಧಿಕಾರಿಯೊಬ್ಬರು ಏನೋ ಕೇಳುತ್ತಾರೆ. ಈ ಮೂಲಕ ಅವರನ್ನು ಎಚ್ಚರಿಸುತ್ತಾರೆ. ಅಧ್ಯಕ್ಷ ನಿದ್ದೆ ಮಾಡುತ್ತಿರುವುದನ್ನು ನೋಡಿ, ಮುಜುಗರ ತಪ್ಪಿಸಲೆಂದೇ ಆ ಅಧಿಕಾರಿ ಬಂದರೋ ಅಥವಾ ಕಾಕತಾಳಿಯವೋ ಗೊತ್ತಾಗಲಿಲ್ಲ. ಆದರೆ ಯುಎಸ್​ ಅಧ್ಯಕ್ಷರ ತೂಕಡಿಕೆ ವಿಡಿಯೋ ಮಾತ್ರ ತುಂಬ ವೈರಲ್​ ಆಗುತ್ತಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವಿವಿಧ ರೀತಿಯ ಕಾಮೆಂಟ್​ಗಳು ಬರುತ್ತಿವೆ. ಅವರಿಗೆ 78 ವರ್ಷವಾಯಿತು. ಈ ವಯಸ್ಸಿನಲ್ಲಿ ಸುಸ್ತು ಸಾಮಾನ್ಯ ಎಂಬಂಥ ಬೈಡನ್​ ಪರ ಮಾತುಗಳೂ ಕೇಳಿಬಂದಿವೆ. ಹಾಗೇ, ಇನ್ನು ಕೆಲವರು ಇಂಥದ್ದೆಕ್ಕ ಕ್ಷಮೆಯೇ ಇಲ್ಲ. ಬೈಡನ್​ ಭಾಷಣವನ್ನೂ ಸರಿಯಾಗಿ ಮಾಡಲಿಲ್ಲ. ಅವರಿಗೆ ಹೆಸರುಗಳೆಲ್ಲ ಮರೆತು ಹೋಗಿತ್ತು ಎಂಬ ವಿರೋಧದ ಕಾಮೆಂಟ್​ಗಳನ್ನೂ ಮಾಡಲಾಗಿದೆ.

ಇದನ್ನೂ ಓದಿ: Gold Smuggling Case ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಮತ್ತು ಇತರರಿಗೆ ಕೇರಳ ಹೈಕೋರ್ಟ್ ಜಾಮೀನು

Viral Photo: ಡಿಐಜಿಯಾಗಿರುವ ಅಪ್ಪನಿಗೆ ಸಲ್ಯೂಟ್ ಮಾಡಿದ ಪೊಲೀಸ್ ಅಧಿಕಾರಿ ಮಗಳು; ಹೆಮ್ಮೆಯ ಕ್ಷಣದ ಫೋಟೋ ವೈರಲ್

 

Published On - 3:05 pm, Tue, 2 November 21