ಪಾಕಿಸ್ತಾನಕ್ಕೆ ನೀಡುತ್ತಿದ್ದ ಭದ್ರತಾ ನೆರವನ್ನು ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2018ರಲ್ಲಿ ಸ್ಥಗಿತಗೊಳಿಸಿದ್ದರು. ಅದೇ ನೀತಿಯನ್ನು ಈಗಿನ ಅಧ್ಯಕ್ಷ ಜೋ ಬೈಡನ್ ಕೂಡ ಮುಂದುವರಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಚಾರದಲ್ಲಿ ಬದಲಾವಣೆ ಆಗಲಿದೆಯಾ? ಪಾಕಿಸ್ತಾನಕ್ಕೆ ಅಮೆರಿಕದಿಂದ ರಕ್ಷಣಾ ನೆರವು ಸಿಗಲಿದೆಯಾ ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ.
ರಾಷ್ಟ್ರದಲ್ಲಿ ಉಗ್ರರನ್ನು ಮಟ್ಟ ಹಾಕಲು ಪಾಕಿಸ್ತಾನ ಸರಿಯಾಗಿ ಸಹಕಾರ ಕೊಡುತ್ತಿಲ್ಲ ಎಂದು ಆರೋಪಿಸಿದ್ದ ಡೊನಾಲ್ಡ್ ಟ್ರಂಪ್ 2018ರ ಜನವರಿಯಲ್ಲಿ ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ ಎಲ್ಲ ರೀತಿಯ ಭದ್ರತಾ ನೆರವನ್ನೂ ಸ್ಥಗಿತಗೊಳಿಸಿದ್ದರು. ಅದೇ ನೀತಿಯನ್ನು ಮುಂದುವರಿಸುವುದಾಗಿ ಯುಎಸ್ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗನ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.
ಸದ್ಯದ ಮಟ್ಟಿಗೆ ಪಾಕಿಸ್ತಾನಕ್ಕೆ ಯುಎಸ್ನಿಂದ ಯಾವುದೇ ಭದ್ರತಾ ನೆರವು ನೀಡುವುದಿಲ್ಲ. ಇದೇ ಕ್ರಮ ಮುಂದುವರಿಯಲಿದೆಯಾ ಅಥವಾ ಮುಂದಿನ ದಿನಗಳಲ್ಲಿ ಬದಲಾಗಲಿದೆಯಾ ಎಂಬುದರ ಬಗ್ಗೆ ಯಾವುದೇ ಊಹೆ ಮಾಡುವುದಿಲ್ಲ ಎಂದು ಪೆಂಟಗನ್ ಕಚೇರಿಯ ಮಾಧ್ಯಮ ಕಾರ್ಯದರ್ಶಿ ಜಾನ್ ಕಿರ್ಬಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಾಂಗೊದಲ್ಲಿ ಸಿಡಿದ ಜ್ವಾಲಾಮುಖಿ, ಆತಂಕದಲ್ಲಿ ಊರುಬಿಟ್ಟು ಓಡುತ್ತಿರುವ ಜನರಿಗೆ ಭಾರತೀಯ ಸೇನೆಯ ನೆರವು
ಕಾಂಗೊದಲ್ಲಿ ಸಿಡಿದ ಜ್ವಾಲಾಮುಖಿ, ಆತಂಕದಲ್ಲಿ ಊರುಬಿಟ್ಟು ಓಡುತ್ತಿರುವ ಜನರಿಗೆ ಭಾರತೀಯ ಸೇನೆಯ ನೆರವು