UFO- ಐದನೇ ಬಲೂನು ಶೂಟ್ ಮಾಡಿದ ಅಮೆರಿಕ; ಇತ್ತ ಚೀನಾ ಕಣ್ಣಿಗೂ ಬಿದ್ದಿದೆ ಹಾರುವ ವಸ್ತು

|

Updated on: Feb 13, 2023 | 9:21 AM

US Shoots Down 5th Flying Object: ಚೀನಾಗೆ ಸೇರಿದ ಸ್ಪೈ ಬಲೂನನ್ನು ಹೊಡೆದುರಳಿಸಿದ ಬಳಿಕ ಅಮೆರಿಕ ಮತ್ತು ಕೆನಡಾ ದೇಶಗಳು ಸಾಲುಸಾಲಾಗಿ ನಾಲ್ಕು ಅಪರಿಚಿತ ಹಾರುವ ವಸ್ತುಗಳನ್ನು ಗುರಿ ಮಾಡಿ ನಾಶಗೊಳಿಸಿವೆ. ಇತ್ತ, ಚೀನಾದ ಸಮುದ್ರಭಾಗದ ಮೇಲೂ ಅಪರಿಚಿತ ವಸ್ತು ಕಾಣಿಸಿದ್ದು, ಅದನ್ನು ಹೊಡೆಯಲು ಚೀನಾ ಅಣಿಯಾಗಿದೆ

UFO- ಐದನೇ ಬಲೂನು ಶೂಟ್ ಮಾಡಿದ ಅಮೆರಿಕ; ಇತ್ತ ಚೀನಾ ಕಣ್ಣಿಗೂ ಬಿದ್ದಿದೆ ಹಾರುವ ವಸ್ತು
ಯುದ್ಧವಿಮಾನ
Follow us on

ನವದೆಹಲಿ: ಅಮೆರಿಕಕ್ಕೆ ಈ ವಾರ ನಿಗೂಢ ಹಾರುವ ವಸ್ತುಗಳನ್ನು (Unidentified Flying Object) ಹೊಡೆದುರುಳಿಸುವುದೇ ಕಾಯಕವಾದಂತಿದೆ. ಅಮೆರಿಕಕೆನಡಾ ಗಡಿಭಾಗದ ಲೇಕ್ ಹುರೋನ್​ನ ವಾಯುಭಾಗದ ಮೇಲೆ ಹಾರಾಡುತ್ತಿದ್ದ ನಿಗೂಢ ವಸ್ತುವೊಂದನ್ನು ಅಮೆರಿಕದ ಯುದ್ಧವಿಮಾನವೊಂದು ಹೊಡೆದುರುಳಿಸಿದೆ. ಇದು ಒಂದು ವಾರದಲ್ಲಿ ಅಮೆರಿಕನ್ ವಿಮಾನಗಳು ಪತನಗೊಳಿಸಿದ ಐದನೇ ಹಾರಾಡುವ ವಸ್ತುವಾಗಿದೆ. ಈ ಐದನೇ ವಸ್ತುವನ್ನು ಹೊಡೆದುರುಳಿಸಿದ್ದು ಎಫ್-16 ಯುದ್ಧವಿಮಾನ. ಅಮೆರಿಕಕ್ಕೆ ತನ್ನ ಯುದ್ಧವಿಮಾನಗಳನ್ನು ಪ್ರಾಯೋಗಿಕವಾಗಿ ಬಳಕೆ ಮಾಡಲು ಅವಕಾಶ ಸಿಕ್ಕಂತಾಗಿದೆ.

ಫೆಬ್ರುವರಿ 4ರಂದು ಚೀನಾದ ದೊಡ್ಡ ಬಲೂನೊಂದನ್ನು ಪೂರ್ವ ಕರಾವಳಿ ಭಾಗದಲ್ಲಿ ಅಮೆರಿಕ ಹೊಡೆದುಹಾಕಿತ್ತು. ಹಲವು ದಿನಗಳ ಕಾಲ ಈ ಬಲೂನು ಕೆನಡಾ ಮತ್ತು ಅಮೆರಿಕದ ಪ್ರದೇಶಗಳ ಮೇಲೆ ಹಾದು ಹೋಗಿತ್ತು. ನಾಗರಿಕ ಪ್ರದೇಶಗಳ ಬಳಿ ಈ ಬಲೂನು ಹೊಡೆದರೆ ಜನರಿಗೆ ತೊಂದರೆ ಆಗಬಹುದೆಂದು ಅದು ಸಮುದ್ರ ಪ್ರದೇಶಕ್ಕೆ ಬರುವುದನ್ನು ಕಾದು ನಿಂತು ನಂತರ ಹೊಡೆಯಲಾಗಿತ್ತು.

ಈ ವಿಚಾರವನ್ನು ಚೀನಾ ಗಂಭೀರವಾಗಿ ಪರಿಗಣಿಸಿದೆ. ಅದು ಹವಾಮಾನ ಶೋಧನೆಗೆ ಬಳಕೆಯಾಗುತ್ತಿದ್ದ ಬಲೂನು ಮಾತ್ರವಾಗಿತ್ತು. ಅದನ್ನು ಹೊಡೆದದ್ದು ಸರಿಯಲ್ಲ ಎಂದು ಚೀನಾ ಹೇಳಿತ್ತು.

ಇದನ್ನೂ ಓದಿ: Pakistan: ಧರ್ಮನಿಂದನೆ ಆರೋಪಿಯನ್ನು ಜೈಲಿಂದ ಧರಧರ ಎಳೆದು ಹೊಡೆದು ಸಾಯಿಸಿದ ಪಾಕಿಗಳು

ಚೀನಾದ ಈ ಬಲೂನು ಹೊಡೆದ ಬಳಿಕ ಅಮೆರಿಕ ಮತ್ತು ಕೆನಡಾ ದೇಶಗಳ ವಾಯುಭಾಗದಲ್ಲಿ ಕಾಣಿಸಿದ ನಾಲ್ಕು ಅಪರಿಚಿತ ವಸ್ತುಗಳನ್ನು ಹೊಡೆದುರುಳಿಸಲಾಗಿದೆ. ಆದರೆ, ಈ ನಾಲ್ಕು ಅಪರಿಚಿತ ಹಾರಾಟ ವಸ್ತುಗಳು ಯಾವುವು, ಇವು ಚೀನಾಗೆ ಸೇರಿದ್ದವಾ ಎಂಬಿತ್ಯಾದಿ ಯಾವ ಮಾಹಿತಿಯೂ ಹೊರಬಂದಿಲ್ಲ.

ತಾನೂ ಹೊಡೆಯುವುದಾಗಿ ಹೇಳಿದ ಚೀನಾ

ಅದೇನೇ ಇರಲಿ ಫೆ. 4ರಂದು ತನ್ನ ಬಲೂನನ್ನು ಅಮೆರಿಕ ಹೊಡೆದುರುಳಿಸಿದ್ದು ಚೀನಾಗೆ ಕೆಂಗಣ್ಣು ತಂದಿದೆ. ಚೀನಾದ ಬಂದರು ನಗರಿಯಾದ ಕಿಂಗ್​ಡಾವೋ ಎಂಬಲ್ಲಿನ ಸಮುದ್ರಪ್ರದೇಶದ ಮೇಲೆ ಅಪರಿಚಿತ ವಸ್ತುವೊಂದು ಹಾರುತ್ತಿರುವುದಾಗಿ ಚೀನಾ ಹೇಳಿದೆ. ಅಷ್ಟೇ ಅಲ್ಲ, ಅದನ್ನು ಹೊಡೆಯುವ ಆಲೋಚನೆ ಕೂಡ ಇದೆ ಎಂದು ಚೀನಾ ತಿಳಿಸಿದೆ. ಆ ವಸ್ತು ಯಾವುದು ಎಂಬುದು ಗೊತ್ತಾಗಬೇಕಷ್ಟೇ.

Published On - 9:21 am, Mon, 13 February 23