ಯುಎಸ್ ಬಲೂನ್‌ಗಳು ನಮ್ಮ ವಾಯುಪ್ರದೇಶವನ್ನು 10 ಕ್ಕೂ ಹೆಚ್ಚು ಬಾರಿ ಪ್ರವೇಶಿಸಿವೆ: ಚೀನಾ
ಚೀನಾದ ಕಣ್ಗಾವಲು ನೌಕೆಯನ್ನು ಯುನೈಟೆಡ್ ಸ್ಟೇಟ್ಸ್ ಹೊಡೆದುರುಳಿಸಿದ ನಂತರ ಬೀಜಿಂಗ್ ತನ್ನ ಮೇಲೆ ನಡೆದ ಬಲೂನ್ ಕಾರ್ಯಚರಣೆ ಬಗ್ಗೆ ಸೋಮವಾರ ಬಹಿರಂಗಪಡಿಸಿದೆ.
ಬೀಜಿಂಗ್: ಚೀನಾದ ಕಣ್ಗಾವಲು ನೌಕೆಯನ್ನು (China spy balloon) ಯುನೈಟೆಡ್ ಸ್ಟೇಟ್ಸ್ ಹೊಡೆದುರುಳಿಸಿದ ನಂತರ ಬೀಜಿಂಗ್ ತನ್ನ ಮೇಲೆ ನಡೆದ ಬಲೂನ್ ಕಾರ್ಯಚರಣೆ ಬಗ್ಗೆ ಸೋಮವಾರ ಬಹಿರಂಗಪಡಿಸಿದೆ. ಇತ್ತೀಚೆಗೆ ಸ್ಪೈಕ್ರಾಫ್ಟ್ ಅನ್ನು ಹೊಡೆದುರುಳಿಸಿದ ವಾಷಿಂಗ್ಟನ್ ನಿರ್ಧಾರದ ಹಿನ್ನೆಲೆಯಲ್ಲಿ ಯುಎಸ್ ಮತ್ತು ಚೀನಾ ನಡುವಿನ ಸಂಬಂಧಗಳು ಹದಗೆಟ್ಟಿದೆ, ನಮ್ಮ ಮೇಲೆಯೂ ಇಂತಹ ಬಲೂನ್ ಕಾರ್ಯಚರಣೆ ಮಾಡಲಾಗಿತ್ತು ಎಂದು ಚೀನಾ ಹೇಳಿದೆ.
ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಹಲವಾರು ಬಲೂನ್‌ಗಳನ್ನು ಹೊಡೆದುರುಳಿಸಲಾಯಿತು, ಚೀನಾ ತನ್ನ ಮೇಲೆ ಈ ಮೊದಲೇ ಇಂತಹ ಕಾರ್ಯಚರಣೆ ನಡೆದಿದೆ ಎಂದು ಬಹಿರಂಗಪಡಿಸಿದೆ. ಜನವರಿ 2022 ರಿಂದ ಯುಎಸ್ ತನ್ನ ವಾಯುಪ್ರದೇಶಕ್ಕೆ 10 ಕ್ಕೂ ಹೆಚ್ಚು ಬಲೂನ್‌ಗಳನ್ನು ಕಳುಹಿಸಿದೆ ಎಂದು ಸೋಮವಾರ ಚೀನಾ ಆರೋಪಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಬ್ರೀಫಿಂಗ್‌ನಲ್ಲಿ ಯುಎಸ್ ಅಕ್ರಮವಾಗಿ ಇತರ ದೇಶಗಳ ವಾಯುಪ್ರದೇಶವನ್ನು ಪ್ರವೇಶಿಸುವುದು ಸಾಮಾನ್ಯ ಸಂಗತಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ: Chinese ‘Spy’ Balloon: ಅಮೆರಿಕದಲ್ಲಿ ಮತ್ತೆ ಕಾಣಿಸಿದ ಚೀನಾ ರಹಸ್ಯ ಬಲೂನ್; ಬ್ಲಿಂಕೆನ್ ಚೀನಾ ಭೇಟಿ ರದ್ದು
ಕಳೆದ ವರ್ಷದಿಂದೀಚೆಗೆ, ಯುಎಸ್ ಬಲೂನ್‌ಗಳು ಚೀನಾದ ಅಧಿಕಾರಿಗಳಿಂದ ಯಾವುದೇ ಅನುಮೋದನೆಯಿಲ್ಲದೆ 10 ಕ್ಕೂ ಹೆಚ್ಚು ಬಾರಿ ಅಕ್ರಮವಾಗಿ ಚೀನಾದ ವಾಯುಪ್ರದೇಶದ ಮೇಲೆ ಹಾರಿವೆ ಎಂದು ಅವರು ಹೇಳಿದರು. ಆಪಾದಿತ ಆಕ್ರಮಣಗಳಿಗೆ ಚೀನಾ ಹೇಗೆ ಪ್ರತಿಕ್ರಿಯಿಸಿತು ಎಂದು ಕೇಳಿದಾಗ, ಬೀಜಿಂಗ್‌ನ ಈ ಘಟನೆಗಳ ನಿರ್ವಹಣೆ ಜವಾಬ್ದಾರಿಯುತ ಮತ್ತು ವೃತ್ತಿಪರವಾಗಿದೆ ಎಂದು ವಾಂಗ್ ಹೇಳಿದರು.
ಅಮೇರಿಕಾದ ಎತ್ತರದ ಬಲೂನ್‌ಗಳು ಅಕ್ರಮವಾಗಿ ಚೀನಾದ ವಾಯುಪ್ರದೇಶವನ್ನು ಪ್ರವೇಶಿಸುವ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ನೀವು ಯುಎಸ್ ಕಡೆಗೆ ಹೋಗುವಂತೆ ನಾನು ಸಲಹೆ ನೀಡುತ್ತೇನೆ ಎಂದು ಅವರು ಹೇಳಿದರು.
Published On - 3:52 pm, Mon, 13 February 23