New Zealand: ಗೇಬ್ರಿಯೆಲ್ ಚಂಡಮಾರುತ; ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ; ಕತ್ತಲಲ್ಲಿ ಮುಳುಗಿದ ನ್ಯೂಜಿಲೆಂಡ್

Cyclone Gabrielle: ನ್ಯೂಜಿಲೆಂಡ್​ನಲ್ಲಿ ಅಪ್ಪಳಿಸಿರುವ ಗೇಬ್ರಿಯೆಲ್ ಚಂಡಮಾರುತದಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ. ಐದಾರು ಜಿಲ್ಲೆಗಳಲ್ಲಿ ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ ಮಾಡಲಾಗಿದೆ.

New Zealand: ಗೇಬ್ರಿಯೆಲ್ ಚಂಡಮಾರುತ; ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ; ಕತ್ತಲಲ್ಲಿ ಮುಳುಗಿದ ನ್ಯೂಜಿಲೆಂಡ್
ಗೇಬ್ರಿಯೆಲ್ ಚಂಡಮಾರುತ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 14, 2023 | 7:12 AM

ಆಕ್ಲೆಂಡ್: ನ್ಯೂಜಿಲೆಂಡ್ ದೇಶದಲ್ಲಿ ಗೇಬ್ರಿಯೆಲ್ ಚಂಡಮಾರುತದ (Gabrielle Cyclone) ಆರ್ಭಟ ನಡೆದಿದ್ದು, ದೇಶದ ಹಲವು ಭಾಗಗಳಿಗೆ ಹಾನಿಯಾಗಿದೆ. ವಿದ್ಯುತ್ ಗ್ರಿಡ್ ವ್ಯವಸ್ಥೆ ಹಾಳಾಗಿದ್ದು ಲಕ್ಷಾಂತರ ಮನೆಗಳು ಕತ್ತಲಲ್ಲಿ ಮುಳುಗಿವೆ. ಹಲವು ಭಾಗಗಳಿಗೆ ಅಲ್ಲಿನ ಕೇಂದ್ರ ಸರ್ಕಾರ ರಾಷ್ಟ್ರೀಯ ತುರ್ತುಸ್ಥಿತಿ (National Emergency) ಘೋಷಣೆ ಮಾಡಿದೆ. ನ್ಯೂಜಿಲೆಂಡ್​ನ ಉತ್ತರ ಭಾಗದ ಪ್ರದೇಶಗಳಿಗೆ ಗೇಬ್ರಿಯೇಲ್ ಚಂಡಮಾರುತದಿಂದ ಅತಿಹೆಚ್ಚು ಹಾನಿಯಾಗಿದೆ. ಅದರಲ್ಲೂ ಆಕ್ಲೆಂಡ್, ನಾರ್ತ್​ಲ್ಯಾಂಡ್, ಕೋರೋಮಂಡೆಲ್, ಗಿಸ್​ಬೋರ್ನ್, ಟೈರಾವಿಟಿ, ಹಾಕ್ಸ್ ಬೇ ಮೊದಲಾದ ಕಡೆ ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿದೆ.

ಪಶ್ಚಿಮ ಆಕ್ಲೆಂಡ್ ಮತ್ತು ನಾರ್ತ್​ಲ್ಯಾಂಡ್​ನಲ್ಲಿ ಪ್ರವಾಹ ಮತ್ತು ಭೂಕುಸಿತ ಘಟನೆಗಳು ಬಹಳ ವರದಿಯಾಗಿವೆ. ಆದರೆ, ಗಿಸ್​ಬೋರ್ನ್, ಕೋರೋಮಂಡೆಲ್, ಹಾಕ್ಸ್ ಬೇ ಪ್ರದೇಶಗಳು ಸಂಪೂರ್ಣ ಕಟ್ ಆಫ್ ಆಗಿವೆ. ಅಲ್ಲಿನ ದೂರಸಂಪರ್ಕ ವ್ಯವಸ್ಥೆಯೇ ನಿಂತುಹೋಗಿದೆ. ದಿ ಗಾರ್ಡಿಯನ್ ಪತ್ರಿಕೆಯ ವರದಿ ಪ್ರಕಾರ ಅಲ್ಲಿ ಎಷ್ಟರ ಮಟ್ಟಿಗೆ ಹಾನಿಯಾಗಿದೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ನಿಷೇಧಿತ ಸಂಘಟನೆ ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಬದುಕಿದ್ದಾನೆ: ನೆಡುಮಾರನ್

ಒಂದೂವರೆ ಲಕ್ಷಕ್ಕೂ ಹೆಚ್ಚು ಮನೆಗಳು ಕತ್ತಲಲ್ಲಿ

ಗಾರ್ಡಿಯನ್ ವರದಿ ಪ್ರಕಾರ ಗೇಬ್ರಿಯೆಲ್ ಚಂಡಮಾರುತದ ಪರಿಣಾಮ ನ್ಯೂಜಿಲೆಂಡ್​ನಲ್ಲಿ 1.5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದು ನಾರ್ತ್​ಲ್ಯಾಂಡ್, ಆಕ್ಲೆಂಡ್ ಮತ್ತು ಹಾಕ್ಸ್​ಬೇ ಪ್ರದೇಶಗಳಿಂದ ಬಂದಿರುವ ಮಾಹಿತಿ. ಚಂಡಮಾರುತದಿಂದ ಬಹಳ ಹಾನಿಗೊಂಡಿರುವ ಗಿಸ್ಬೋರ್ನ್, ಟೈರಾವ್ಹಿಟಿ, ಬೇ ಆಫ್ ಪ್ಲೆಂಟಿ ಎಂಬ ಪ್ರದೇಶಗಳಲ್ಲಿ ವಿದ್ಯುತ್ ಗ್ರಿಡ್ ಕಾರ್ಯನಿರ್ವಹಣೆ ಎಷ್ಟು ಸ್ಥಗಿತಗೊಂಡಿದೆ, ಎಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ತಪ್ಪಿದೆ ಎಂಬ ಮಾಹಿತಿ ಇಲ್ಲ. ಹೀಗಾಗಿ, ವಿದ್ಯುತ್ ಸಂಪರ್ಕ ಕಳೆದುಕೊಂಡು ಕತ್ತಲಲ್ಲಿ ಮುಳುಗಿರುವ ಮನೆಗಳ ಸಂಖ್ಯೆ ಇನ್ನೂ ಹೆಚ್ಚಿರಬಹುದು. ನ್ಯೂಜಿಲೆಂಡ್​ನಲ್ಲಿ ಒಟ್ಟಾರೆ ಜನಸಂಖ್ಯೆ ಇರುವುದೇ ಸುಮಾರು 50 ಲಕ್ಷ. ಚಂಡಮಾರುತ ಅಪ್ಪಳಿಸಿರುವ ಬಹುತೇಕ ಪ್ರದೇಶಗಳು ಸಂಪೂರ್ಣವಾಗಿ ಕತ್ತಲಲ್ಲಿ ಮುಳುಗಿರುವ ಅಂದಾಜು ಇದೆ. ಈಗ ಬಂದಿರುವ ಮಾಹಿತಿ ಪ್ರಕಾರ ವಿದ್ಯುತ್ ಸರಬರಾಜು ಮರಳಿ ಬರಲು ಹಲವು ದಿನಗಳು ಅಥವಾ ಕೆಲ ವಾರಗಳೇ ಆಗಬಹುದು.

ತುರ್ತುಸ್ಥಿತಿ ಘೋಷಣೆ

ನ್ಯೂಜಿಲೆಂಡ್​ನಲ್ಲಿ ಗೇಬ್ರಿಯೆಲ್ ಚಂಡಮಾರು ಅಪ್ಪಳಿಸಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ರಾಷ್ಟ್ರೀಯ ತುರ್ತುಸ್ಥಿತಿಯನ್ನು ಅಲ್ಲಿನ ಸರ್ಕಾರ ಘೋಷಿಸಿದೆ. ನಾರ್ತ್​ಲೆಂಡ್, ಆಕ್ಲೆಂಡ್, ಟೈರಾವ್ಹಿಟಿ, ಬೇ ಆಫ್ ಪ್ಲೆಂಟಿ, ವೈಕಾಟೋ, ಹಾಕ್ಸ್​ಬೇ ಮತ್ತು ಟರರುವಾ ಪ್ರದೇಶಗಳಲ್ಲಿ ತುರ್ತುಸ್ಥಿತಿ ಎಂದು ಘೋಷಿಸಲಾಗಿದೆ.

ಇದನ್ನೂ ಓದಿ: ಯುಎಸ್ ಬಲೂನ್‌ಗಳು ನಮ್ಮ ವಾಯುಪ್ರದೇಶವನ್ನು 10 ಕ್ಕೂ ಹೆಚ್ಚು ಬಾರಿ ಪ್ರವೇಶಿಸಿವೆ: ಚೀನಾ

ತುರ್ತುಸ್ಥಿತಿ ಎಂದು ಘೋಷಣೆ ಆದರೆ ಪರಿಹಾರ, ರಕ್ಷಣಾ ಕಾರ್ಯಗಳ ಜವಾಬ್ದಾರಿಯನ್ನು ಸ್ಥಳೀಯ ಆಡಳಿತದ ಬದಲು ಕೇಂದ್ರ ಸರ್ಕಾರವೇ ಹೊತ್ತುಕೊಳ್ಳುತ್ತಿದೆ. ಸರ್ಕಾರದಿಂದ ಕ್ಷಿಪ್ರವಾಗಿ ಹಣಕಾಸು ಸಂಪನ್ಮೂಲಗಳ ವ್ಯವಸ್ಥೆ ಆಗುತ್ತದೆ. ರಕ್ಷಣಾ ಪಡೆಗಳನ್ನು ಸಹಾಯಕ್ಕಾಗಿ ಬಳಸಬಹುದು. ಚಂಡಮಾರುತ ಅಪ್ಪಳಿಸಿದ ಪ್ರದೇಶಗಳಲ್ಲಿ ಭಾರೀ ಮಳೆ, ಗಾಳಿಗೆ ಜನರು ತತ್ತರಿಸಿದ್ದಾರೆ. ಅದೃಷ್ಟವಶಾತ್, ಚಂಡಮಾರುತದಿಂದ ಪ್ರಾಣಹಾನಿಯಾಗಿರುವ ವರದಿ ಆಗಿಲ್ಲ. ಜನವರಿ ಕೊನೆಯ ವಾರದಲ್ಲಿ ಆಕ್ಲೆಂಡ್ ನಗರದಲ್ಲಿ 24 ಗಂಟೆ ಅವಧಿಯಲ್ಲಿ 245 ಮಿಮೀಯಷ್ಟು ಮಳೆಯಾಗಿ ಅಲ್ಲಿ ಪ್ರವಾಹ ಸ್ಥಿತಿ ಉದ್ಭವಿಸಿತ್ತು. ಆ ವಿಕೋಪಕ್ಕೆ ನಾಲ್ವರು ಬಲಿಯಾಗಿದ್ದರು.

ಇನ್ನು, ಕುತೂಹಲದ ಸಂಗತಿ ಎಂದರೆ ನ್ಯೂಜಿಲೆಂಡ್ ಇತಿಹಾಸದಲ್ಲಿ ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ ಆಗಿರುವುದು ಇದು ಮೂರನೇ ಬಾರಿಯಂತೆ. ಅಲ್ಲಿನ ನಾಗರಿಕ ಸೌಕರ್ಯ ವ್ಯವಸ್ಥೆ ಪ್ರಬಲವಾಗಿರುವುದರಿಂದ ಗೇಬ್ರಿಯೆಲ್ ಚಂಡಮಾರುತದಿಂದ ಪ್ರಾಣಹಾನಿ ಆಗಿಲ್ಲ.

Published On - 7:12 am, Tue, 14 February 23

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ