AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರ್ಷಿಯನ್ ಕೊಲ್ಲಿಯಲ್ಲಿ ಮುಗಿಲುಮುಟ್ಟಿದ ಸಮರ: ಖಾರ್ಗ್ ದ್ವೀಪ ಬಳಿ ಇರಾನ್ ಹಡಗುಗಳನ್ನು ಹೊಡೆದುರುಳಿಸಿದ ಯುಎಸ್ ಪಡೆಗಳು

ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಮರ ತೀವ್ರಗೊಂಡಿದೆ. ಇರಾನ್ ಕ್ಷಿಪಣಿ ದಾಳಿಗೆ ಪ್ರತಿಕಾರವಾಗಿ ಅಮೆರಿಕ ಸೇನೆ ಖಾರ್ಗ್ ದ್ವೀಪ ಹಾಗೂ ಓಮನ್ ಕೊಲ್ಲಿ ಬಳಿ ಇರಾನ್‌ನ ಎಂಟು ತೈಲ ಟ್ಯಾಂಕರ್‌ಗಳನ್ನು ನಾಶಪಡಿಸಿದೆ. ಇದಕ್ಕೆ ಪ್ರತಿಕಾರವಾಗಿ ಇರಾನ್ ಜೋರ್ಡಾನ್‌ನಲ್ಲಿರುವ ಅಮೆರಿಕದ ವಾಯುನೆಲೆ ಮೇಲೆ ದಾಳಿ ನಡೆಸಿದೆ. ಈ ಬೆಳವಣಿಗೆ ಜಾಗತಿಕ ಇಂಧನ ಪೂರೈಕೆ ಮತ್ತು ತೈಲ ಬೆಲೆಗಳ ಮೇಲೆ ಆತಂಕ ಸೃಷ್ಟಿಸಿದೆ.

ಪರ್ಷಿಯನ್ ಕೊಲ್ಲಿಯಲ್ಲಿ ಮುಗಿಲುಮುಟ್ಟಿದ ಸಮರ: ಖಾರ್ಗ್ ದ್ವೀಪ ಬಳಿ ಇರಾನ್ ಹಡಗುಗಳನ್ನು ಹೊಡೆದುರುಳಿಸಿದ ಯುಎಸ್ ಪಡೆಗಳು
ಇರಾನ್ ಹಡಗುಗಳು ಧ್ವಂಸImage Credit source: US central command
ನಯನಾ ರಾಜೀವ್
|

Updated on: Sep 09, 2026 | 8:27 AM

Share

ಟೆಹ್ರಾನ್, ಸೆಪ್ಟೆಂಬರ್ 09: ಪರ್ಷಿಯನ್ ಕೊಲ್ಲಿ ಹಾಗೂ ಓಮನ್ ಕೊಲ್ಲಿಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸೇನಾ ಮುಖಾಮುಖಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಳೆದ ಎರಡು ದಿನಗಳಲ್ಲಿ ಅಮೆರಿಕದ ಯುದ್ಧನೌಕೆಯ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕದ ಸೆಂಟ್ರಲ್ ಕಮಾಂಡ್ ಪಡೆಗಳು ಪ್ರತೀಕಾರ ತೀರಿಸಿಕೊಂಡಿದ್ದು, ಖಾರ್ಗ್ ದ್ವೀಪ ಹಾಗೂ ಓಮನ್ ಕೊಲ್ಲಿಯ ಬಳಿ ಇರಾನ್‌ನ ಐದು ಬೃಹತ್ ಕಚ್ಚಾ ತೈಲ ಟ್ಯಾಂಕರ್‌ಗಳನ್ನು ಸಂಪೂರ್ಣವಾಗಿ ನಾಶಪಡಿಸಿವೆ.

ಓಮನ್ ಕೊಲ್ಲಿಯಲ್ಲಿ ಎಂ/ಟಿ ಕವಿಜ್, ಎಂ/ಟಿ ಚಾರ್ಮಿನಾರ್, ಎಂ/ಟಿ ಹೊರೈಜನ್ 1 ಹಾಗೂ ಎಂ/ಟಿ ರೈಸ್ಕೊ ಎಂಬ ನಾಲ್ಕು ಹಡಗುಗಳನ್ನು ಅಮೆರಿಕ ಹೊಡೆದುರುಳಿಸಿದ್ದು, ಐದನೇ ನೌಕೆಯಾದ ಎಂ/ಟಿ ಡೆರಿಯಾವನ್ನು ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದ ಬಳಿ ಧ್ವಂಸಗೊಳಿಸಲಾಗಿದೆ.

ಸಿಬ್ಬಂದಿಗೆ ಮುನ್ಸೂಚನೆ: ಕಾರ್ಯಾಚರಣೆ ನಡೆಸುವ ಮುನ್ನ ಎಲ್ಲಾ ಐದು ಹಡಗುಗಳಲ್ಲಿದ್ದ ಸಿಬ್ಬಂದಿಗೆ ಸುರಕ್ಷಿತವಾಗಿ ಹೊರಬರಲು ನೇರ ಸೂಚನೆ ನೀಡಲಾಗಿತ್ತು ಎಂದು ಅಮೆರಿಕದ ಸೇನಾ ಕಮಾಂಡ್ ತಿಳಿಸಿದೆ.

ನೆರಳು ಜಾಲಕ್ಕೆ ಹೊಡೆತ: ಈ ಟ್ಯಾಂಕರ್‌ಗಳನ್ನು ಇರಾನ್‌ನ ಐಆರ್‌ಜಿಸಿ ತನ್ನ ಪ್ರಾದೇಶಿಕ ಪ್ರಾಕ್ಸಿ ಸಶಸ್ತ್ರ ಗುಂಪುಗಳಿಗೆ ಹಣಕಾಸು ಒದಗಿಸುವ ಬಹುಕೋಟಿ ಡಾಲರ್ ಮೌಲ್ಯದ ‘ ಶಾಡೋ ತೈಲ ಜಾಲ’ದ ಭಾಗವಾಗಿ ಬಳಸುತ್ತಿತ್ತು ಎಂದು ಅಮೆರಿಕ ಆರೋಪಿಸಿದೆ.

ಮತ್ತಷ್ಟು ಓದಿ: ಇರಾನ್ ವಿರುದ್ಧದ ಯುದ್ಧ ಗೆದ್ದರೆ ಪೆಟ್ರೋಲ್ ಬೆಲೆ ಗ್ಯಾಲನ್‌ಗೆ 2 ಡಾಲರ್‌ಗಿಂತ ಕಡಿಮೆ: ಅಮೆರಿಕ ಅಧ್ಯಕ್ಷ ಟ್ರಂಪ್ ಭವಿಷ್ಯ

ಅಮೆರಿಕ ಸಿಬ್ಬಂದಿ ಸುರಕ್ಷಿತ: ಇರಾನ್ ಹಾರಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅಮೆರಿಕದ ರಕ್ಷಣಾ ಪಡೆಗಳು ಯಶಸ್ವಿಯಾಗಿ ತಡೆದಿದ್ದು, ಅಮೆರಿಕದ ಯುದ್ಧನೌಕೆಗಳಿಗೆ ಯಾವುದೇ ಹಾನಿಯಾಗಿಲ್ಲ ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಸಿಇಎನ್‌ಸಿಒಎಂ ಸ್ಪಷ್ಟಪಡಿಸಿದೆ.

ಸೆಪ್ಟೆಂಬರ್ 5 ರಂದು ಅಮೆರಿಕದ ವಿಮಾನವಾಹಕ ನೌಕೆ ಮೇಲೆ ಇರಾನ್ ದಾಳಿಗೆ ಯತ್ನಿಸಿದಾಗ ಈಗಾಗಲೇ ಮೂರು ಟ್ಯಾಂಕರ್‌ಗಳನ್ನು ಹೊಡೆದುರುಳಿಸಲಾಗಿತ್ತು. ಇದರೊಂದಿಗೆ ಕೇವಲ ಮೂರು ದಿನಗಳಲ್ಲಿ ಇರಾನ್‌ನ ಒಟ್ಟು 8 ತೈಲ ಟ್ಯಾಂಕರ್‌ಗಳನ್ನು ಅಮೆರಿಕ ಧ್ವಂಸಗೊಳಿಸಿದಂತಾಗಿದೆ.

ಪೋಸ್ಟ್​

ಜೋರ್ಡಾನ್ ವಾಯುನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ: ತನ್ನ ತೈಲ ಹಡಗುಗಳ ಮೇಲಿನ ದಾಳಿಗೆ ಪ್ರತಿಯಾಗಿ ಇರಾನ್ “ಯಾ ಹೈದರ್ ಕರ್ರಾರ್” ಎಂಬ ಹೆಸರಿನಲ್ಲಿ ಪ್ರತೀಕಾರದ ಮಿಲಿಟರಿ ಕಾರ್ಯಾಚರಣೆ ಘೋಷಿಸಿದೆ. ಜೋರ್ಡಾನ್‌ನಲ್ಲಿರುವ ಅಮೆರಿಕದ ಅಲ್-ಅಜ್ರಾಕ್ ವಾಯುನೆಲೆಯನ್ನು ಗುರಿಯಾಗಿಸಿ ಎಫ್-35, ಎಫ್-16 ಮತ್ತು ಎಫ್-15 ಫೈಟರ್ ಜೆಟ್‌ಗಳು ಇರುವ ಹ್ಯಾಂಗರ್‌ಗಳ ಮೇಲೆ ಘನ ಮತ್ತು ದ್ರವ ಇಂಧನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಐಆರ್‌ಜಿಸಿ ಹೇಳಿಕೊಂಡಿದೆ.

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ: ವಿಶ್ವದ ಶೇಕಡಾ 20ಕ್ಕೂ ಹೆಚ್ಚು ಕಚ್ಚಾ ತೈಲ ಸಾಗಣೆಯಾಗುವ ಹಾರ್ಮುಜ್ ಜಲಸಂಧಿ ಮತ್ತು ಖಾರ್ಗ್ ದ್ವೀಪದ ಸಮೀಪವೇ ಈ ಭೀಕರ ಕದನ ನಡೆಯುತ್ತಿರುವುದರಿಂದ ಜಾಗತಿಕ ಇಂಧನ ಪೂರೈಕೆ ವ್ಯತ್ಯಯಗೊಳ್ಳುವ ಮತ್ತು ಕಚ್ಚಾ ತೈಲ ದರಗಳು ತೀವ್ರವಾಗಿ ಏರಿಕೆಯಾಗುವ ಭೀತಿ ಎದುರಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More