ಕಳ್ಳಸಾಗಣೆಯಾಗಿದ್ದ ಭಾರತದ 297 ಅಮೂಲ್ಯ ಪ್ರಾಚೀನ ವಸ್ತುಗಳನ್ನು ಮೋದಿಗೆ ಹಸ್ತಾಂತರಿಸಿದ ಬೈಡನ್

|

Updated on: Sep 22, 2024 | 2:41 PM

ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸ ಯಶಸ್ವಿಯಾಗಿದೆ. ಕಳ್ಳಸಾಗಾಣಿಕೆ ಮೂಲಕ ದೇಶದಿಂದ ಹೊರ ಹೋಗಿದ್ದ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ 297 ವಿಶಿಷ್ಟ ಕಲಾಕೃತಿಗಳು, ವಸ್ತುಗಳು ಪ್ರಧಾನಿ ಕೈಸೇರಿವೆ. ಬೆಲೆಬಾಳುವ ಮತ್ತು ಪುರಾತನ ವಸ್ತುಗಳ ಕಳ್ಳತನ ಮತ್ತು ಕಳ್ಳಸಾಗಣೆ ಬಹಳ ಹಿಂದಿನಿಂದಲೂ ಗಂಭೀರ ಸಮಸ್ಯೆಯಾಗಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಧಾನಿ ಮೋದಿ ಅಧ್ಯಕ್ಷ ಬೈಡನ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕಳ್ಳಸಾಗಣೆಯಾಗಿದ್ದ ಭಾರತದ 297 ಅಮೂಲ್ಯ ಪ್ರಾಚೀನ ವಸ್ತುಗಳನ್ನು ಮೋದಿಗೆ ಹಸ್ತಾಂತರಿಸಿದ ಬೈಡನ್
ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸ ಯಶಸ್ವಿಯಾಗಿದೆ. ಕಳ್ಳಸಾಗಾಣಿಕೆ ಮೂಲಕ ದೇಶದಿಂದ ಹೊರ ಹೋಗಿದ್ದ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ 297 ವಿಶಿಷ್ಟ ಕಲಾಕೃತಿಗಳು, ವಸ್ತುಗಳು ಪ್ರಧಾನಿ ಕೈಸೇರಿವೆ. ಬೆಲೆಬಾಳುವ ಮತ್ತು ಪುರಾತನ ವಸ್ತುಗಳ ಕಳ್ಳತನ ಮತ್ತು ಕಳ್ಳಸಾಗಣೆ ಬಹಳ ಹಿಂದಿನಿಂದಲೂ ಗಂಭೀರ ಸಮಸ್ಯೆಯಾಗಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಧಾನಿ ಮೋದಿ ಅಧ್ಯಕ್ಷ ಬೈಡನ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

297 ಅಪರೂಪದ ಕಲಾಕೃತಿಗಳನ್ನು ಹಿಂದಿರುಗಿಸಿದ್ದಕ್ಕಾಗಿ ನಾವು ಅಧ್ಯಕ್ಷ ಜೋ ಬೈಡನ್ ಮತ್ತು ಅಮೆರಿಕ ಸರ್ಕಾರಕ್ಕೆ ಕೃತಜ್ಞರಾಗಿರುತ್ತೇವೆ ಎಂದರು. ಇದಕ್ಕೂ ಮುನ್ನ ಪ್ರಧಾನಿ ಮೋದಿಯವರ ಅಮೆರಿಕ ಪ್ರವಾಸದ ವೇಳೆ ಹಲವು ಪುರಾತನ ವಸ್ತುಗಳನ್ನು ಹಸ್ತಾಂತರಿಸಲಾಗಿತ್ತು. 2021ರಲ್ಲಿ ಪ್ರಧಾನಿ ಮೋದಿ ಅಮೆರಿಕಕ್ಕೆ ಹೋದಾಗ 157 ವಸ್ತುಗಳನ್ನು ಸ್ವೀಕರಿಸಿದ್ದರು.

ಇದರಲ್ಲಿ 12ನೇ ಶತಮಾನದ ನಟರಾಜ ವಿಗ್ರಹವೂ ಸೇರಿದೆ. 2023 ರಲ್ಲಿ ಪ್ರಧಾನಿ ಮೋದಿಯವರ ಭೇಟಿಯ ನಂತರ ಅಮೆರಿಕವು ಭಾರತಕ್ಕೆ 105 ವಸ್ತುಗಳನ್ನು ಹಿಂದಿರುಗಿಸಿತು. ಈ ಮೂಲಕ ಅಮೆರಿಕವೊಂದರಿಂದಲೇ ಇಲ್ಲಿಯವರೆಗೆ 578 ಪುರಾತನ ಹಾಗೂ ಬೆಲೆ ಕಟ್ಟಲಾಗದ ವಸ್ತುಗಳನ್ನು ಭಾರತಕ್ಕೆ ವಾಪಸ್ ಮಾಡಲಾಗಿದೆ.

ಅಮೆರಿಕದ ಹೊರತಾಗಿ, ಯುಕೆಯಿಂದ 16 ಮತ್ತು ಆಸ್ಟ್ರೇಲಿಯಾದಿಂದ 14 ಕಲಾಕೃತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ 2004 ರಿಂದ 2013 ರವರೆಗೆ, ವಿದೇಶದಿಂದ ಭಾರತಕ್ಕೆ ಕೇವಲ ಒಂದು ಕಲಾಕೃತಿಯನ್ನು ಸ್ವೀಕರಿಸಲಾಗಿತ್ತು.
ಕಳೆದ 10 ವರ್ಷಗಳಿಂದ, ಭಾರತವು ತನ್ನ ಪ್ರಾಚೀನ ನಿಧಿಯನ್ನು ಮರುಪಡೆಯಲು ಅರ್ಥಪೂರ್ಣ ಪ್ರಯತ್ನಗಳನ್ನು ಮಾಡಿದೆ ಮತ್ತು ಅದರ ಪ್ರಭಾವವೂ ಗೋಚರಿಸುತ್ತದೆ.

ಮತ್ತಷ್ಟು ಓದಿ: ಪುರಾತನ ಬೆಳ್ಳಿಯಿಂದ ಮಾಡಿದ ರೈಲು ಮಾದರಿಯನ್ನು ಜೋ ಬೈಡನ್​ಗೆ ಉಡುಗೊರೆಯಾಗಿ ನೀಡಿದ ಪ್ರಧಾನಿ ಮೋದಿ

ಜಾಗತಿಕ ನಾಯಕರೊಂದಿಗಿನ ಪ್ರಧಾನಿ ಮೋದಿಯವರ ವೈಯಕ್ತಿಕ ಸಂಬಂಧವು ಭಾರತದ ಪರಂಪರೆಯನ್ನು ಮರಳಿ ತರಲು ಸಹಾಯ ಮಾಡಿದೆ ಎಂದು ಮೂಲಗಳು ಹೇಳುತ್ತವೆ. ಕಳ್ಳಸಾಗಾಣಿಕೆ ಮೂಲಕ ವಿದೇಶಗಳಿಗೆ ತಲುಪಿದ ಕಲಾಕೃತಿಗಳು ಮತ್ತು ಶಿಲ್ಪಗಳು ಭಾರತದ ಪ್ರಾಚೀನ ಸಂಸ್ಕೃತಿಯೊಂದಿಗೆ ಸಂಬಂಧ ಹೊಂದಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ