ಅಮೆರಿಕದ ಶ್ವೇತಭವನದ ಮೇಲೆ ದಾಳಿಗೆ ಯತ್ನಿಸಿದ್ದ ಭಾರತ ಮೂಲದ ಯುವಕನಿಗೆ 8 ವರ್ಷ ಜೈಲು

|

Updated on: Jan 17, 2025 | 11:09 AM

ಅಮೆರಿಕದ ಶ್ವೇತಭವನದ ಮೇಲೆ ದಾಳಿ ದಾಳಿಗೆ ಯತ್ನಿಸಿದ್ದ ಭಾರತ ಮೂಲದ 8 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ವ್ಯಕ್ತಿ ಟ್ರಕ್‌ನಿಂದ ಶ್ವೇತಭವನದ ಮೇಲೆ ದಾಳಿ ನಡೆಸಿದ್ದಾನೆ. ಗುರುವಾರ, ಈ ಆರೋಪದ ಮೇಲೆ ಸಾಯಿ ವರ್ಷಿತ್ ಕಂದುಲಾಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಸಾಯಿ (20) 2023ರ ಮೇ 22ರಂದು ಈ ದಾಳಿಗೆ ಯತ್ನಿಸಿದ್ದ. ಈ ದಾಳಿಯು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಯುಎಸ್ ಸರ್ಕಾರವನ್ನು ಉರುಳಿಸುವ ಗುರಿಯನ್ನು ಹೊಂದಿದೆ ಎಂದು ನ್ಯಾಯಾಂಗ ಇಲಾಖೆ ಹೇಳಿದೆ.

ಅಮೆರಿಕದ ಶ್ವೇತಭವನದ ಮೇಲೆ ದಾಳಿಗೆ ಯತ್ನಿಸಿದ್ದ ಭಾರತ ಮೂಲದ ಯುವಕನಿಗೆ 8 ವರ್ಷ ಜೈಲು
ವರ್ಷಿತ್
Follow us on

ಅಮೆರಿಕದ ಶ್ವೇತಭವನದ ಮೇಲೆ ದಾಳಿ ನಡೆಸಲು ಯತ್ನಿಸಿದ್ದ ಭಾರತ ಮೂಲದ ಯುವಕನಿಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಗುರುವಾರ, ಅಮೆರಿಕದ ನ್ಯಾಯಾಲಯವು ಸಾಯಿ ವರ್ಷಿತ್ ಕಂದುಲಾ ಅವರನ್ನು ದಾಳಿಯ ಅಪರಾಧಿ ಎಂದು ಘೋಷಿಸಿತು. 2023ರ ಮೇ 22ರಂದು ಇಪ್ಪತ್ತು ವರ್ಷದ ಸಾಯಿ ಈ ದಾಳಿಗೆ ಯತ್ನಿಸಿದ್ದ.

ಈ ದಾಳಿಯ ಉದ್ದೇಶವು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಯುಎಸ್ ಸರ್ಕಾರವನ್ನು ಉರುಳಿಸುವುದು ಮತ್ತು ಅದರ ಸ್ಥಳದಲ್ಲಿ ನಾಜಿ ಸಿದ್ಧಾಂತದಿಂದ ಪ್ರೇರಿತವಾದ ಸರ್ವಾಧಿಕಾರಿ ಆಡಳಿತವನ್ನು ಸ್ಥಾಪಿಸುವುದು ಎಂದು ಯುಎಸ್ ನ್ಯಾಯಾಂಗ ಇಲಾಖೆ ಹೇಳಿದೆ.

ಸಾಯಿ ಕಂದುಲಾ ನಂತರ ಅಮೆರಿಕದ ಆಸ್ತಿಯನ್ನು ಉದ್ದೇಶಪೂರ್ವಕವಾಗಿ ಹಾನಿಗೊಳಿಸಿದ ಮತ್ತು ಧ್ವಂಸಗೊಳಿಸಿದ ಪ್ರಕರಣದಲ್ಲಿ ತನ್ನ ಅಪರಾಧವನ್ನು ಒಪ್ಪಿಕೊಂಡರು. ಅವರು ‘ಗ್ರೀನ್ ಕಾರ್ಡ್’ ಹೊಂದಿರುವ ಅಮೆರಿಕದ ಕಾನೂನುಬದ್ಧ ಖಾಯಂ ನಿವಾಸಿಯಾಗಿದ್ದಾರೆ.

ಮತ್ತಷ್ಟು ಓದಿ: ತಮ್ಮ ವಿದಾಯದ ಭಾಷಣದಲ್ಲಿ ಭಾವುಕರಾದ ಅಮೆರಿಕ ಅಧ್ಯಕ್ಷ ಜೋ ಬೈಡನ್

ನ್ಯಾಯಾಲಯದ ದಾಖಲೆಗಳ ಪ್ರಕಾರ, ಸಾಯಿ ಅವರು ಮೇ 22, 2023 ರ ಮಧ್ಯಾಹ್ನ ಸೇಂಟ್ ಲೂಯಿಸ್, ಮಿಸೌರಿಯಿಂದ ವಾಷಿಂಗ್ಟನ್‌ಗೆ ಹೊರಟರು ಮತ್ತು ಸಂಜೆ 5.20 ರ ಸುಮಾರಿಗೆ ಡಲ್ಲೆಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದ್ದ. ಇಲ್ಲಿ ಸಂಜೆ 6.30ಕ್ಕೆ ಟ್ರಕ್ ಬಾಡಿಗೆಗೆ ಪಡೆದು ದಾಳಿ ನಡೆಸಿದ್ದಾನೆ.

ಮಾಹಿತಿಯ ಪ್ರಕಾರ, ವಾಷಿಂಗ್ಟನ್‌ನಲ್ಲಿ ರಾತ್ರಿ 9 ಗಂಟೆಯ ಸುಮಾರಿಗೆ, ಆತ ಟ್ರಕ್‌ನೊಂದಿಗೆ ಶ್ವೇತಭವನ ಮತ್ತು ಅಧ್ಯಕ್ಷರ ಉದ್ಯಾನವನವನ್ನು ರಕ್ಷಿಸುವ ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆಸಿದ್ದ. ಟ್ರಕ್ ಅನ್ನು ಫುಟ್‌ಪಾತ್‌ಗೆ ಓಡಿಸಿದ್ದ, ಅಲ್ಲಿ ನೆರೆದಿದ್ದ ಜನರಲ್ಲಿ ಗೊಂದಲವನ್ನು ಉಂಟುಮಾಡಿದರು. ಘಟನೆಯ ನಂತರ ಸಾಯಿ ಟ್ರಕ್‌ನಿಂದ ಹೊರಬಂದು ಹಿಂಬದಿಯ ಕಡೆಗೆ ಹೋದನು.

ಇಲ್ಲಿ ಅವನು ತನ್ನ ಚೀಲದಿಂದ ನಾಜಿ ಧ್ವಜವನ್ನು ತೆಗೆದುಕೊಂಡು ಅದನ್ನು ಬೀಸಿದ್ದಾನೆ. ಯುಎಸ್ ಪಾರ್ಕ್ ಪೋಲೀಸ್ ಮತ್ತು ಯುಎಸ್ ಸೀಕ್ರೆಟ್ ಸರ್ವೀಸ್ ಅಧಿಕಾರಿಗಳು ಕಂದುಲಾನನ್ನು ಘಟನಾ ಸ್ಥಳದಲ್ಲಿ ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ