ಸಾಲದ ವಿಚಾರ, ಕದ್ದಿರುವ ಎಕೆ-47ನಿಂದ ಭಾರತೀಯನ ಹತ್ಯೆಗೈದ ಉಗಾಂಡದ ಆಫ್​​-ಡ್ಯೂಟಿ ಪೊಲೀಸ್

ಉಗಾಂಡದ ಆಫ್​ ಡ್ಯೂಟಿ ಪೊಲೀಸ್ ಪೇದೆಯೊಬ್ಬರು ಸಾಲದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಭಾರತ ಮೂಲದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ್ದಾರೆ

ಸಾಲದ ವಿಚಾರ, ಕದ್ದಿರುವ ಎಕೆ-47ನಿಂದ ಭಾರತೀಯನ ಹತ್ಯೆಗೈದ ಉಗಾಂಡದ ಆಫ್​​-ಡ್ಯೂಟಿ ಪೊಲೀಸ್
ಉಗಾಂಡ ಪೊಲೀಸ್

Updated on: May 16, 2023 | 10:52 AM

ಉಗಾಂಡದ ಆಫ್​ ಡ್ಯೂಟಿ ಪೊಲೀಸ್ ಪೇದೆಯೊಬ್ಬರು ಸಾಲದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಭಾರತ ಮೂಲದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ್ದಾರೆ. ಉತ್ತಮ್​ ಭಂಡಾರಿ ಮೃತರು, ಟಿಎಫ್‌ಎಸ್ ಫೈನಾನ್ಷಿಯಲ್ ಸರ್ವೀಸಸ್ ಕಂಪನಿಯ ನಿರ್ದೇಶಕರಾಗಿದ್ದಾರೆ, ಉಗಾಂಡಾದ ರಾಜಧಾನಿ ಕಂಪಾಲಾದಲ್ಲಿ ಪೊಲೀಸ್ ಪೇದೆಯೊಬ್ಬರು ಕದ್ದ ಎಕೆ-47 ರೈಫಲ್​​ನಿಂದ ಭಾರತೀಯ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಘಟನೆ ವೇಳೆ ಆರೋಪಿ ಕಾನ್‌ಸ್ಟೆಬಲ್ ಕರ್ತವ್ಯದಲ್ಲಿ ಇರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ, ಮೇ 12 ರಂದು ಉತ್ತಮ್ ಭಂಡಾರಿ ಅವರನ್ನು ಹತ್ಯೆ ಮಾಡಿರುವ ಆರೋಪದ ಮೇಲೆ 30 ವರ್ಷದ ಇವಾನ್ ವಾಬ್‌ವೈರ್ ಅವರನ್ನು ಬಂಧಿಸಲಾಗಿದೆ ಎಂದು ಕಂಪಾಲಾ ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ.

ಭಂಡಾರಿ ಅವರು ಟಿಎಫ್‌ಎಸ್ ಫೈನಾನ್ಷಿಯಲ್ ಸರ್ವೀಸಸ್ ಕಂಪನಿಯ ನಿರ್ದೇಶಕರಾಗಿದ್ದು, ವಾಬ್‌ವೈರ್ ಅದರ ಕ್ಲೈಂಟ್ ಆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ಪ್ರಕಾರ, ಕಾನ್‌ಸ್ಟೆಬಲ್ ಕಂಪನಿಯಿಂದ ಸಾಲ ಪಡೆದ ಮೊತ್ತಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು.

ಮೇ 12 ರಂದು ವಾಬ್‌ವೈರ್‌ಗೆ ತನ್ನ ಸಾಲದ ಮೊತ್ತದ ಬಗ್ಗೆ ತಿಳಿಸಿದಾಗ, ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ಭಂಡಾರಿಯೊಂದಿಗೆ ಜಗಳವಾಡಿದ್ದಾನೆ ಎನ್ನಲಾಗಿದೆ. ಭಂಡಾರಿಗೆ ಗುಂಡು ಹಾರಿಸಿದ ನಂತರ ವಾಬ್‌ವೈರ್ ತನ್ನ ಎಕೆ -47 ರೈಫಲ್ ಅನ್ನು ಬಿಟ್ಟು ಓಡಿಹೋಗಿದ್ದಾನೆ. ಪೊಲೀಸರು ಸ್ಥಳದಿಂದ 13 ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ವಾಬ್‌ವೈರ್‌ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಓದಿ: ಅಮೆರಿಕದಲ್ಲಿ 18 ವರ್ಷದ ಯುವಕನಿಂದ ಫೈರಿಂಗ್: ಮೂವರ ಸಾವು

ಮಾನಸಿಕ ಆರೋಗ್ಯ ಸಮಸ್ಯೆಗಳಿಗಾಗಿ ಎರಡು ಬಾರಿ ಆಸ್ಪತ್ರೆಗೆ ದಾಖಲಾದ ನಂತರ ಐದು ವರ್ಷಗಳ ಕಾಲ ಶಸ್ತ್ರಾಸ್ತ್ರಗಳನ್ನು ಸಾಗಿಸುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಬ್‌ವೈರ್ ತನ್ನ ರೂಮ್‌ಮೇಟ್ ಆಗಿರುವ ಮತ್ತೋರ್ವ ಪೊಲೀಸರಿಂದ ಈ ರೈಫಲ್ ಅನ್ನು ಕದ್ದಿದ್ದ.

ಏತನ್ಮಧ್ಯೆ, ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲೀಸ್, ಜೆಫ್ರಿ ತುಮುಸಿಮೆ ಕಟ್ಸಿಗಾಜಿ ಅವರು ಉಗಾಂಡಾದಲ್ಲಿರುವ ಭಾರತೀಯ ಸಮುದಾಯವನ್ನು ಭೇಟಿ ಮಾಡಿ ಅವರ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ್ದಾರೆ ಎಂದು ನೈಲ್ ಪೋಸ್ಟ್ ವರದಿ ಮಾಡಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ