ಮತ್ತೊಮ್ಮೆ ಸುದ್ದಿಯಲ್ಲಿ ಫಿನ್ಲೆಂಡ್ ಪ್ರಧಾನ ಮಂತ್ರಿ ಸಾನಾ ಮ್ಯಾರಿನ್, ಪಾರ್ಟಿಯೊಂದರಲ್ಲಿ ಕುಣಿಯುತ್ತಿರುವ ವಿಡಿಯೋ ವೈರಲ್!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 19, 2022 | 1:34 PM

ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ವಿಡಿಯೋ ಮೊದಲು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಆಗಿದ್ದು ನಂತರ ಅದು ಬೇರೆ ಬೇರೆ ಪ್ಲಾಟ್ ಫಾರ್ಮ್​ಗಳಿಗೆ ಲೀಕ್ ಆಗಿ ವೈರಲ್ ಆಗಿದೆ.

ಮತ್ತೊಮ್ಮೆ ಸುದ್ದಿಯಲ್ಲಿ ಫಿನ್ಲೆಂಡ್ ಪ್ರಧಾನ ಮಂತ್ರಿ ಸಾನಾ ಮ್ಯಾರಿನ್, ಪಾರ್ಟಿಯೊಂದರಲ್ಲಿ ಕುಣಿಯುತ್ತಿರುವ ವಿಡಿಯೋ ವೈರಲ್!
ಫಿನ್ಲೆಂಡ್ ಪ್ರಧಾನಿ ಸಾನಾ ಮ್ಯಾರಿನ್ ಮತ್ತು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್
Follow us on

ಫಿನ್ಲೆಂಡ್​​​ನ  (Finland) ಪ್ರಧಾನ ಮಂತ್ರಿ ಸಾನಾ ಮ್ಯಾರಿನ್ (Sanna Marin) ಬೇಡದ ಕಾರಣಗಳಿಗೆ ಸುದ್ದಿಯಲ್ಲಿದ್ದಾರೆ. ಕೆಲ ಜನರೊಂದಿಗೆ ಪಾರ್ಟಿ ಮಾಡುತ್ತಿರುವ ಅವರ ವಿಡಿಯೋ ವೈರಲ್ ಆಗಿದೆ. ಸೋಶಿಯಲ್ ಮಿಡಿಯಾಗಳಲ್ಲಿ ಶೇರ್ ಆಗಿರುವ ವಿಡಿಯೋ ಕ್ಲಿಪ್ ನಲ್ಲಿ ಮ್ಯಾರಿನ್ ಅವರು ಖಾಸಗಿ ಅಪಾರ್ಟ್ ಮೆಂಟ್ ನಂತೆ (apartment) ಕಾಣುತ್ತಿರುವ ಸ್ಥಳವೊಂದರಲ್ಲಿ ಒಂದಷ್ಟು ಜನರ ಗುಂಪಿನೊಂದಿಗೆ ಡ್ಯಾನ್ಸ್ ಮಾಡುತ್ತಿರುವುದು ಸೆರೆಯಾಗಿದೆ.

ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ವಿಡಿಯೋ ಮೊದಲು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಆಗಿದ್ದು ನಂತರ ಅದು ಬೇರೆ ಬೇರೆ ಪ್ಲಾಟ್ ಫಾರ್ಮ್​ಗಳಿಗೆ ಲೀಕ್ ಆಗಿ ವೈರಲ್ ಆಗಿದೆ.

ಇಲ್ತಲ್ಹೇಟಿ ಹೆಸರಿನ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಫಿನ್ಲೆಂಡ್ನ ನ ಹಲವು ಸೆಲಿಬ್ರಿಟಿಗಳು ಸದರಿ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರಲ್ಲಿ ಮ್ಯಾರಿನ್ ಅವರ ಸೋಶಿಯಲ್ ಡೆಮೊಕ್ರ್ಯಾಟಿಕ್ ಪಕ್ಷದ ಸಂಸದ ಇಲ್ಮರಿ ನುರಿಮಿನೆನ್, ಒಬ್ಬ ಜನಪ್ರಿಯ ಹಾಡುಗಾರ, ಒಬ್ಬ ಯೂಟ್ಯೂಬರ್, ರೆಡಿಯೋ ಮತ್ತು ಟಿವಿ ಹೋಸ್ಟ್ ಮೊದಲಾದವರು ಸೇರಿದ್ದಾರೆ.

ಪಾರ್ಟಿ ಎಲ್ಲಿ ಮತ್ತು ಯಾವಾಗ ನಡೆದಿದೆ ಅನ್ನೋದನ್ನು ವರದಿ ಖಚಿತಪಡಿಸಿಲ್ಲವಾದರೂ ಅದನ್ನು ಖಾಸಗಿ ಮನೆಯೊಂದರಲ್ಲಿ ಆಯೋಜಿಸಿರುವುದು ವೇದ್ಯವಾಗುತ್ತದೆ.

ಪ್ರಧಾನ ಮಂತ್ರಿಗಳ ವಿಡಿಯೋ ವೈರಲ್ ಆಗಿ ಹರಿದಾಡುತ್ತಿದ್ದರೆ ಜನರಿಂದ ಅದು ನಾನಾ ಬಗೆಯ ಕಾಮೆಂಟ್ ಗಳಿಗೆ ಕಾರಣವಾಗಿದೆ. ಕೆಲವರು ಮ್ಯಾರಿನ್ ಅವರನ್ನು ವಹಿಸಿಕೊಂಡು ಮಾತಾಡಿದರೆ ಕೆಲವರು ಒಬ್ಬ ಪ್ರಧಾನ ಮಂತ್ರಿಯಾಗಿ ಹೀಗೆಲ್ಲ ಮಾಡಬಹುದಾ ಅಂತ ಪ್ರಶ್ನಿಸುತ್ತಿದ್ದಾರೆ.

ಫಿನ್ನಿಶ್ ಪ್ರಧಾನ ಮಂತ್ರಿ ತಮ್ಮ ಬಿಡುವಿನ ಸಮಯವನ್ನು ಮೋಜಿನಲ್ಲಿ ಕಳೆಯುತ್ತಿದ್ದಾರೆ, ಅದರಲ್ಲಿ ತಪ್ಪೇನಿದೆ? ಅಂತ ಒಬ್ಬ ಯೂಸರ್ ಕೇಳಿದ್ದಾರೆ.

ಮ್ಯಾರಿನ್ ಅವರು ಒಂದು ಉನ್ನತ ಹುದ್ದೆಯಲ್ಲಿರುವುದರಿಂದ ಆ ಸ್ಥಾನದ ಗೌರವಕ್ಕೆ ಇದು ತಕ್ಕುದಲ್ಲ ಅಂತ ಕೆಲವರು ಬರೆದಿದ್ದಾರೆ.

‘ಇದು ಒಬ್ಬ ಪ್ರಧಾನ ಮಂತ್ರಿಗೆ ತಕ್ಕ ನಡಾವಳಿಯೇ? ಅಲ್ಲ ಅಂತ ನಾನು ಭಾವಿಸುತ್ತೇನೆ,’ ಅಂತ ಒಬ್ಬ ಯೂಸರ್ ಕಾಮೆಂಟ್ ಮಾಡಿದ್ದಾರೆ.

ಹೀಗೆ ಟೀಕೆ ಮತ್ತು ಖಂಡನೆಗೆ ಗುರಿಯಾಗುವುದು ಮ್ಯಾರಿನ್ ಅವರಿಗೆ ಹೊಸದೇನಲ್ಲ. ಕಳೆದ ಡಿಸೆಂಬರ್ ನಲ್ಲಿ ಅವರು ಕೊವಿಡ್-19 ಸೋಂಕಿಗೆ ಗುರಿಯಾಗುವ ಅಪಾಯದ ಬಗ್ಗೆ ಅರಿವಿದ್ದರೂ ತಡರಾತ್ರಿಯವರೆಗೆ ಜಾರಿಯಲ್ಲಿದ್ದ ವಾರಾಂತ್ಯದ ಪಾರ್ಟಿಯೊಂದರಲ್ಲಿ ಭಾಗಿಯಾಗಿ ಅದು ಬೆಳಕಿಗೆ ಬಂದ ನಂತರ ಕ್ಷಮಾಪಣೆ ಕೇಳಿದ್ದರು.