Video: ತಾಯಿನ ಕಂಡು ರಸ್ತೆಯಲ್ಲಿ ಓಡಿ ಬಂದ ಮಗುವಿನ ಮೇಲೆ ಹರಿದ ಲಾರಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ವಿಯೆಟ್ನಾಂನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪುಟ್ಟ ಮಗುವೊಂದು ಟ್ರಕ್ ಅಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದೆ. ಕಣ್ಣೆದುರೇ ಮಗುವನ್ನು ಕಳೆದುಕೊಂಡ ತಾಯಿ ಆಘಾತದಿಂದ ಮತ್ತೊಂದು ಮಗುವನ್ನು ರಸ್ತೆಯಲ್ಲೇ ಬಿಟ್ಟು ಓಡಿದ್ದಾರೆ. ಆ ಮಗು ಕೂಡ ವಾಹನಗಳ ನಡುವೆ ಸಿಲುಕಿ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಈ ಹೃದಯವಿದ್ರಾವಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಯೆಟ್ನಾಂನಲ್ಲಿ ಮನಕಲಕುವ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ರಸ್ತೆಯ ಆಚೆಗಿದ್ದ ತಾಯಿಯ ಬಳಿಗೆ ಓಡಲು ಹೋದ ಪುಟ್ಟ ಮಗುವೊಂದು ವೇಗವಾಗಿ ಬಂದ ಭಾರಿ ಗಾತ್ರದ ಟ್ರಕ್ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದೆ. ತನ್ನ ಕಣ್ಣೆದುರೇ ಮಗು ಅಪಘಾತಕ್ಕೀಡಾಗುವುದನ್ನು ಕಂಡು ಆಘಾತಕ್ಕೊಳಗಾದ ತಾಯಿ, ಗಾಬರಿಯಲ್ಲಿ ತನ್ನ ಬಳಿಯೇ ಇದ್ದ ಮತ್ತೊಂದು ಮಗುವನ್ನು ರಸ್ತೆಯಲ್ಲೇ ಬಿಟ್ಟು ಮೃತ ಮಗುವಿನತ್ತ ಓಡಿದ್ದಾರೆ. ಈ ವೇಳೆ ಆ ಮಗು ಕೂಡ ರಸ್ತೆಯಲ್ಲಿದ್ದ ವಾಹನಗಳ ನಡುವೆ ಸಿಲುಕಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ. ಈ ಇಡೀ ಹೃದಯವಿದ್ರಾವಕ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಹಾವಿನ ಜೊತೆ ಸಾಹಸ ಮಾಡಲು ಹೋದ ವ್ಯಕ್ತಿ ಸಾವು; ಬೆಚ್ಚಿಬೀಳಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ!
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

